ಕೊರೋನಾ ಭೀತಿ ಹೆಚ್ಚಾದ ಕಾರಣ ಮನೆಯಲ್ಲಿ ಕಾಲ ಕಳೆಯುತ್ತಿರುವ ಸ್ಟಾರ್ ನಟರು ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದ್ದಾರೆ. ಅದುವೇ ನೋ ಶೇವ್‌ ಇನ್ ಕೊರೋನಾ ಎಂದು. ಯಾವುದೇ ರೀತಿಯೆ ಶೇವ್‌ ಅಥವಾ ಟ್ರಿಮ್ ಮಾಡದೇ ಕೊದಲು ಬೆಳೆಯಲು ಬಿಟ್ಟು, ಕೊರೋನಾ ಲಾಕ್‌ ಡೌನ್‌ ಮುಗಿದ ನಂತರ ಹೊರ ಪ್ರಪಂಚಕ್ಕೆ ಶುಚಿಯಾಗಿ ಪರಿಚಯವಾಗುವ ಉದ್ದೇಶ ಇದರಲ್ಲಿದೆ.

ಹಾಲಿವುಡ್‌ ಖ್ಯಾತ ನಟ ಜಿಮ್‌ ಕ್ಯಾರಿ ಮಾಡುತ್ತಿರುವ ಈ ಪ್ರಯೋಗಕ್ಕೆ ಬಹುಭಾಷಾ ನಟ ಮಾಧನ್‌ ಸಾಥ್ ನೀಡಿದ್ದಾರೆ. ಮಾಧವನ್‌ ತಮ್ಮ ಹೊಸ ಚಿತ್ರ 'ನಂಬಿ ನಾರಾಯಣ' ಚಿತ್ರಕ್ಕಾಗಿ ಹೊಸ ಲುಕ್‌ ಟ್ರೈ ಮಾಡುತ್ತಿದ್ದಾರೆ. ಅದೇ ಸಮಯ ಕೊರೋನಾ ಎಫೆಕ್ಟ್‌ ಕೂಡ ಹೆಚ್ಚಾಗಿದ್ದು, ಇದೇ ಸರಿಯಾದ ಸಮಯವೆಂದು ಪರಿಗಣಿಸಿ ಉದ್ದದ ಗಡ್ಡ ಬಿಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

ಇತ್ತೀಚಿಗೆ ಮಾಧವನ್‌ ಶೇರ್ ಮಾಡಿಕೊಂಡ ಬಿಯರ್ಡ್‌ ಲುಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಾಧವನ್‌ ಫುಲ್ ಶೇವನ್ ಹಾಗೂ ಫುಲ್‌ ಬಿಯರ್ಡ್‌ ಲುಕ್‌ ಶೇರ್ ಮಾಡಿ ಮನೆಯಲ್ಲಿ 21 ದಿನಗಳ ಕಾಲ ಇದ್ದರೆ, ಹೀಗೆ ಆಗುವುದು ಎಂದು ಫ್ಯಾನ್ಸ್ ಟ್ರೋಲ್‌ ಮಾಡಿದ್ದಾರೆ. 

ಹಾಲಿವುಡ್‌ ನಟ ಜಿಮ್‌ ಕ್ಯಾರಿ ದಿನಾ ತಮ್ಮ ಗಡ್ಡ, ಮೀಸೆ ಹಾಗೂ ಕೂದಲು ಬೆಳೆಯುತ್ತಿರುವ ಫೋಟೋವನ್ನು ಶೇರ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.  ಅಷ್ಟೇ ಅಲ್ಲದೆ ತಮ್ಮ ಮಂದಿನ ಕೆಲಸ ಶುರುವಾಗುವವರೆಗೂ ಹೀಗೆ ಇರುವುದಾಗಿಯೂ ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹೊಸ ಲುಕ್ ನೋಡಲು ಸಿದ್ಧರಾಗಬೇಕಷ್ಟೆ. 

ಉಪಕರ್ಮದ ಫೋಟೋ ಶೇರ್ ಮಾಡಿದ ಮಾಧವನ್; ನೆಟ್ಟಿಗರು ಗರಂ!

#NoShaveNovember ಸಹ ವಿಶಿಷ್ಟ ಅಭಿಯಾನವಾಗಿದ್ದು, ಮನುಷ್ಯನ ಕೂದಲಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಮ್ಮ ಕೂದಲನ್ನು ಕಟ್ ಮಾಡದೇ ರಕ್ಷಿಸಿಕೊಂಡು, ಕ್ಯಾನ್ಸರ್ ರೋಗಿಗಳು ಕಳೆದುಕೊಳ್ಳುವ ಕೇಶದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಷ್ಟೇ ಅಲ್ಲ ಶೇವ್ ಮಾಡಲು ಬಳಸುವ ಹಣವನ್ನು ಅಗತ್ಯವಿರುವವರಿಗೆ ದಾನ ಮಾಡಿ, ಕ್ಯಾನ್ಸರ್ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ವಿನಿಯೋಗಿಸಲಾಗುತ್ತದೆ.

ನಿಮಗೆ ನೆನಪಿದ್ಯಾ, ಕೊರೋನಾ ಕಾಟ ಭಾರತದಲ್ಲಿ ಯಾವಾಗ ಶುರುವಾಯಿತೋ ಆಗಲೇ ಬಿಡದಿಯ ಸ್ವಯಂಘೋಷಿತ ದೇವ ಮಾನವ ನಿತ್ಯಾನಂದ ವಿಶೇಷ ವ್ರತವೊಂದನ್ನು ಆಚರಿಸಲು ಹೇಳಿದ್ದರು. ಇದರಲ್ಲಿ ದೇಹದಲ್ಲಿ ಬೆಳೆಯುವ ಅನಗತ್ಯ ಕೇಶವನ್ನು ಕತ್ತರಿಸಬಾರದೂ ಎಂಬ ಸೂಕ್ತವೂ ಇತ್ತು. ಆದರೆ, ಈ ಮಹಾನ್ ನಟರಿಗೆ ನಿತ್ಯಾ ಹೇಳಿರುವುದು ಗಮನಕ್ಕೆ ಬಂದಿದ್ದು ಸುಳ್ಳು. ಯಾರನ್ನೂ ಭೇಟಿಯಾಗದ ಈ ಸಂದರ್ಭದಲ್ಲಿ ಮನುಷ್ಯ ತನ್ನಿಷ್ಟ ಬಂದಂತೆ ತಾನಿರಲು ಮುಂದಾಗಿರುವುದು ಮಾತ್ರ ಸುಳ್ಳಲ್ಲ.