ಬಹುಭಾಷಾ ನಟ ಮಾಧವನ್ ಮತ್ತು ಪತ್ನಿ ಸರಿತಾ ದಂಪತಿಗೆ ಇಂದು (ಜೂನ್ 8) ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಸ್ಟಾರ್ ಜೋಡಿ ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಮಾಧವನ್ 23 ವರ್ಷಗಳ ಹಿಂದೆ  ಇದೇ ದಿನ ಅಂದರೆ 1999, ಜೂನ್ 8ರಂದು  ಸರಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಬಹುಭಾಷಾ ನಟ ಮಾಧವನ್ ಮತ್ತು ಪತ್ನಿ ಸರಿತಾ(Madhavan and wife Ssarita ) ದಂಪತಿಗೆ ಇಂದು (ಜೂನ್ 8) ವಿವಾಹ ವಾರ್ಷಿಕೋತ್ಸವದ(wedding anniversary) ಸಂಭ್ರಮ. ಸ್ಟಾರ್ ಜೋಡಿ ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಮಾಧವನ್ 23 ವರ್ಷಗಳ ಹಿಂದೆ ಇದೇ ದಿನ ಅಂದರೆ 1999, ಜೂನ್ 8ರಂದು ಸರಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭಾರತೀಯ ಸಿನಿಮಾರಂಗದ ಈ ಸುಂದರ ಜೋಡಿಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮಾಧವನ್ ದಂಪತಿಯ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ಮಾಡುತ್ತಿದ್ದಾರೆ.

ಅಂದಹಾಗೆ ಈ ವಿಶೇಷ ದಿನದೊಂದು ನಟ ಮಾಧವನ್, ಪತ್ನಿ ಸರಿತಾಗೆ ಪ್ರೀತಿಯ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಸರಿತಾಗೆ ಸ್ವೀಟ್ ಸಂದೇಶ ಕಳುಹಿಸಿರುವ ಮಾಧವನ್, 'ನಾನು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದೇನೆ. ವಾರ್ಷಿಕೋತ್ಸವದ ಶುಭಾಶಯಗಳು ವೈಫಿ' ಎಂದು ಬರೆದುಕೊಂಡಿದ್ದಾರೆ. ಪ್ರೀತಿಯ ಸಾಲುಗಳ ಜೊತೆಗೆ ಮಾಧವನ್ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. 

ಮಾಧವನ್ ಪತ್ನಿ ಸರಿತಾ ಕೂಡ ಸುಂದರ ಫೋಟೋ ಶೇರ್ ಮಾಡಿ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. '23 ವರ್ಷದ ಮದುವೆ ವಾರ್ಷಿಕೋತ್ಸವ. ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ವಿವಾಹವಾರ್ಷಿಕೋತ್ಸವದ ಶುಭಾಶಯಗಳು ನನ್ನ ಲವ್'ಎಂದು ಬರೆದುಕೊಂಡಿದ್ದಾರೆ. 

4 ವರ್ಷಗಳಿಂದ ಕೆಲಸ ಹಾಗೂ ಸಂಪಾದನೆಯಿಲ್ಲದೆ ಭಯದಲ್ಲಿದ್ದರಂತೆ R Madhavan

ಮಾಧವನ್-ಸರಿತಾ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ?

ಅಂದಹಾಗೆ ಇಬ್ಬರ ಇಬ್ಬರ ಪ್ರೇಮ ಕಥೆ ರೋಚಕವಾಗಿದ್ದು ಯಾವ ಸಿನಿಮಾಗೂ ಏನು ಕಮ್ಮಿ ಇಲ್ಲ.ಮಾಧವನ್ ಸ್ಟಾರ್ ಆಗಿ ಖ್ಯಾತಿಗಳಿಸುವ ಮೊದಲೇ ಸರಿತಾ ಅವರನ್ನು ಭೇಟಿಯಾಗಿದ್ದರು, ಅಲ್ಲದೆ ಪ್ರೀತಿಯಲ್ಲಿ ಬಿದ್ದಿದ್ದರು. ನಟ ಮಾಧವನ್ ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಮುಗಿಸಿದ ನಂತರ, ವ್ಯಕ್ತಿತ್ವ ವಿಕಸನದ ಕುರಿತು ಸೆಷನ್ ಗಳನ್ನು ನಡೆಸಲು ಪ್ರಾರಂಭಿಸಿದ್ದರು. ಆಗ ಸರಿತಾ ಸ್ಟೂಡೆಂಟ್ ಆಗಿ ಬರುತ್ತಿದ್ದರು. ಏರ್ ಹೋಸ್ಟರ್ ಸಂದರ್ಶನದಲ್ಲಿ ಸರಿತಾ ಅವರು ಪಾಸ್ ಆದ ಬಳಿಕ ಮಾಧವನ್ ಅವರಿಗೆ ಧನ್ಯವಾದ ಹೇಳಲು ಡಿನ್ನರ್‌ಗೆ ಅಹ್ವಾನಿಸಿದರು. ಈ ಘಟನೆ ನಡೆದಿದ್ದು ಕೋಲ್ಲಾಪುರದಲ್ಲಿ. ಬಳಿಕ ಇಬ್ಬರು ಸ್ನೇಹಿತರಾದರು. ಸ್ನೇಹ ಪ್ರೀತಿಗೆ ತಿರುಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.

1999ರಲ್ಲಿ ಮದುವೆ

8 ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿಸಿದ ನಂತರ 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಸಾಂಪ್ರದಾಯಿಕ ತಮಿಳು ಸಂಸ್ಕೃತಿಯಲ್ಲಿ ವಿವಾಹವಾದರು. ಇವರ ವಿವಾಹ ಮಹೋತ್ಸವದಲ್ಲಿ ಸ್ನೇಹಿತರು, ಕುಟುಂಬದವರು ಮಾತ್ರ ಹಾಜರಿದ್ದರು. ಇಬ್ಬರ ಈ ಸುಂದರ ದಾಂಪತ್ಯಕ್ಕೆ ಈಗ 23 ವರ್ಷ. ಮಾಧವನ್ ಮತ್ತು ಸರಿತಾ ದಂಪತಿಗೆ ವೇದಾಂತ್ ಎನ್ನುವ ಒಬ್ಬ ಒಬ್ಬಮಗನಿದ್ದಾನೆ.

'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್

ಮಾಧವನ್ ಸಿನಿಮಾ

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮಾಧವನ್ ಸದ್ಯ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕೆಟರಿ:ದಿ ನಂಬಿ ಎಫೆಕ್ಟ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಸ್ರೋದ ಮಾಜಿ ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣ್ ಪಾತ್ರದಲ್ಲಿ ಮಾಧವನ್ ಕಾಣಿಸಿಕೊಳ್ಳುತ್ತಿದ್ದಾರೆ. ನಂಬಿ ನಾರಾಯಣ್ ಅವರನ್ನು 1994ರಲ್ಲಿ ಬೇಹುಗಾರಿಕೆಯ ಆರೋಪ ಹೊರಿಸಿ ಬಂಧಿಸಲಾಯಿತು. 

ನಟ ಮಾಧವನ್ ಈ ಸಿನಿಮಾದಲ್ಲಿ ನಟಿಸುವ ಜೊತೆಗೆ ಮಾಧವನ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದು ಮಾಧವನ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದಹಾಗೆಈ ಸಿನಿಮಾ ಈಗಾಗಲೇ ಕಾನ್ಸ್ ಸಿನಿಮೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದೆ.