Asianet Suvarna News Asianet Suvarna News

ಸ್ಕೂಬಾ ಡೈವಿಂಗ್ ಕ್ಲಾಸ್‌ನಲ್ಲಿ ಮೈಮರೆತೆ, ಗರ್ಭಿಣಿಯಾಗಿದ್ದೆ;ಗರ್ಭಪಾತದ ಕರುಣಾಜನಕ ಕಥೆ ಬಿಚ್ಚಿಟ್ಟ ಕುಬ್ರಾ ಸೇಠ್

ಜೀವನದಲ್ಲಿ ಮರೆಯಲಾಗದ ಘಟನೆ ಬಗ್ಗೆ ಹಂಚಿಕೊಂಡ ನಟಿ ಕುಬ್ರಾ ಸೇಠ್. ಓಪನ್ ಬುಕ್‌ನಲ್ಲಿ  ಅಬಾರ್ಷನ್‌ ಕಥೆ ಕೊನೆ ಪೇಜ್‌ನಲ್ಲಿದೆ....

Actor Kubbra Sait write about scubs drive pregnancy abortion journey in open book vcs
Author
First Published Jan 19, 2023, 3:56 PM IST

ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಿಂದಿ ಸಿನಿಮಾ ಮತ್ತು ಓಟಿಟಿಯಲ್ಲಿ ಮಿಂಚಿಸುತ್ತಿರುವ ಟಿವಿ ನಿರೂಪಕಿ ಕಮ್ ಸೂಪರ್ ಮಾಡಲ್ ಕುಬ್ರಾ ಸೇಠ್ ಓಪನ್ ಬುಕ್‌ ಎಂದು ಪುಸ್ತಕ ಬರೆದಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಪುಸ್ತಕದಲ್ಲಿ ಬರೆದು ಅಚ್ಚರಿ ಮೂಡಿಸಿದ್ದಾರೆ. ಅಬಾರ್ಷನ್‌ ಕಥೆಯನ್ನು ಯಾಕೆ ಕೊನೆ ಪುಟದಲ್ಲಿ ಬರೆದುಕೊಂಡಿದ್ದಾರೆ...

ಕುಬ್ರಾ ಸೇಠ್ ಅಬಾರ್ಷನ್ ಕಥೆ:

'ನನ್ನ ಜೀವನದ 30 ವರ್ಷದವರೆಗೂ ಸ್ವಿಮ್ಮಿಂಗ್ ಮಾಡುವುದನ್ನು ಕಲಿತಿರಲಿಲ್ಲ. ಸ್ವಿಮ್ಮಿಂಗ್ ಮಾಡಿ ಡೈವಿಂಗ್ ಮಾಡಬೇಕು ಎಂದು ಕನಸು ಕಟ್ಟಿಕೊಂಡೆ. ಬಾಂದ್ರಾದಲ್ಲಿರುವ ಸಣ್ಣ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡಲು ಕಲಿತೆ. ಜೀವನದಲ್ಲಿ ಮೊದಲ ಸಲ ನೀರಿನಲ್ಲಿ ನಾನು ಮುಳಗಿದ್ದು. ಸ್ವಮ್ಮಿಂಗ್ ಕಲಿತ ಮೇಲೆ ಸಮುದ್ರದಲ್ಲಿ ಈಜಬೇಕು ಎಂದು ತೀರ್ಮಾನ ಮಾಡಿ ನಾನು ಅಂಡಮಾನ್ ಪ್ರವಾಸ ಮಾಡಿದೆ. ಸ್ನೇಹಿತನೊಬ್ಬ ನನ್ನ ಜೊತೆ ಆಗಮಿಸಿದ್ದರು. ಡೈವಿಂಗ್ ಹೋದ ಪ್ರತಿ ಕ್ಷಣವೂ ನನ್ನ ಜೀವನದಲ್ಲಿ ನಿನ್ನೆ ನಡೆದ ಘಟನೆ ರೀತಿ ಕಣ್ಣೆದುರು ಇದೆ ಏಕೆಂದರೆ ನನ್ನ ಮೊದಲ ಡೈವ್‌ ನಡೆದ ನಂತರ ಆದ ಘಟನೆ ಇದು' ಎಂದು Faya ನಡೆಸಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 

' ಜೀವನದಲ್ಲಿ ನಾನು ತುಂಬಾ ಕುಗ್ಗಿದೆ. ಆಗ ಸೆಕ್ಸ್ ನನ್ನ ಪ್ರಕಾರ ಒಂದು ರಿಲೀಸ್ ರೀತಿ. ಕಂಫರ್ಟಬಲ್‌ ಆಗಿದ್ದೆ, ಪ್ರೀತಿ ಪಡೆದೆ, ಗಮನ ಪಡೆದುಕೊಂಡೆ ...ಹೀಗಾಗಿ ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ನಾವು ಚಿಂತೆ ಮಾಡಲಿಲ್ಲ. ಡೈವಿಂಗ್ ಮುಗಿತ್ತು ರಜೆ ಮುಗಿತ್ತು ನನ್ನ ನಾರ್ಮಲ್‌ ಲೈಫ್‌ ಶುರುವಾಯ್ತು ಅದೆಷ್ಟೋ ವಾರಗಳ ಕಾಲ ನಾನು ಆ ವ್ಯಕ್ತಿಯನ್ನು ನೋಡಲಿಲ್ಲ ಏಕೆಂದರೆ ರಾಜಸ್ಥಾನದಲ್ಲಿ ಶೂಟಿಂಗ್ ಮಾಡಲು ಆರಂಭಿಸಿದೆ. ಆಗ ನಾನು ಪೀರಿಯಡ್ಸ್‌ ಮಿಸ್ ಮಾಡಿಕೊಂಡೆ ಎಂದು ನೆನಪಾಗಿತ್ತು. ಆತನಿಗೆ ಮೆಸೇಜ್ ಮಾಡಿ ಪೀರಿಯಡ್ಸ್‌ ಮಿಸ್ ಆಗಿರುವುದರ ಬಗ್ಗೆ ತಿಳಿಸಿದೆ. ಈ ರೀತಿ ಮೆಸೇಜ್ ಮಾಡಿ ನನ್ನ ಗಮನ ಸೆಳೆಯುವ ಪ್ರಯತ್ನ ಮಾಡಬೇಡ ಎಂದ. ಮನಸ್ಸು ಮುರಿಯಿತ್ತು. ಮೆಡಿಕಲ್ ಸ್ಟೋರಿನಿಂದ ಪ್ರೆಗ್ನೆನ್ಸಿ ಕಿಟ್ ತಂದು ಚೆಕ್ ಮಾಡಿದೆ ದೇವರಲ್ಲಿ ಎರಡು ಗೆರೆ ಬರಬಾರದು ಎಂದು ಪ್ರಾರ್ಥನೆ ಮಾಡಿದೆ. ಎರಡನೇ ಸಲ ಟೆಸ್ಟ್‌ ಮಾಡಿದಾಗಲೂ ಪಾಸಿಟಿವ್ ಬಂತು.' ಎಂದು ಕುಬ್ರಾ ಮಾತನಾಡಿದ್ದಾರೆ.

Actor Kubbra Sait write about scubs drive pregnancy abortion journey in open book vcs

'ಕಿಟ್‌ ಫೋಟೋಗ್ರಾಫ್‌ನ ನಾನು ಆ ವ್ಯಕ್ತಿಗೆ ಕಳುಹಿಸಿದೆ. ಆತ ಬರುತ್ತೀನಿ ಎಂದರೂ ನಾನು ಬೇಡ ಎಂದೆ.  ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದೆ ಚೆಕ್ ಮಾಡುವುದು ಬಿಟ್ಟು ಇದು ರೇಪ್? ಅಥವಾ ಒಪ್ಪಿಗೆ ಪಡೆದು ಮಾಡುತ್ತಿರುವುದಾ.? ಮದುವೆ ಆಗಿದ್ಯಾ ಎಂದು ಪದೇ ಪದೇ ಪ್ರಶ್ನೆ ಕೇಳತ್ತಿದ್ದರು. ಮೊದಲ ಹಂತದಲ್ಲಿದೆ ನೀನು ತಲೆ ಕೆಡಿಸಿಕೊಳ್ಳಬೇಡ ಮೊದಲು ಸ್ಕ್ಯಾನ್ ಮಾಡಿಸಿಕೋ ಎಂದರು. ಅಲ್ಲಿದ್ದ ಪ್ರತಿಯೊಬ್ಬರಿಗೂ ನನ್ನ ಮುಖ ನೋಡಿ ಗೊತ್ತಾಗುತ್ತಿತ್ತು ಇದೆಲ್ಲಾ ಗೊತ್ತಿಲ್ಲದೆ ನಡೆದಿರುವುದು, ಸಿನಿಮಾದಲ್ಲಿ ನಡೆಯುವ ರೀತಿ ಮಾಡ್ರನ್ ಲೈಫ್ ಅಲ್ಲ ಎಂದು. ಆ ಸಮಯದಲ್ಲಿ ನನ್ನ ಜೊತೆ ಯಾರೂ ಇರಲಿಲ್ಲ. ಮಾನಸಿಕವಾಗಿ ಕುಗ್ಗಿದೆ. 5 ವಾರಗಳಾಗಿತ್ತು ಎಂದು ಸ್ಕ್ಯಾನ್‌ನಲ್ಲಿ ಹೇಳಿದ್ದರು.' ಎಂದಿದ್ದರು ಕುಬ್ರಾ.

ಅಂಕಲ್‌ನಿಂದಲೇ ಲೈಂಗಿಕ ಕಿರುಕುಳ, ನೋವು ಶೇರ್ ಮಾಡ್ಕೊಂಡ ನಟಿ!

'ಸ್ಕ್ಯಾನ್ ಮುಗಿಸಿಕೊಂಡು ಹೊರ ಬರುವಷ್ಟರಲ್ಲಿ ಆ ವ್ಯಕ್ತಿ ಹೊರ ಬಂದಿದ್ದರು. ಈ ಮಗು ನೀನು ಉಳಿಸಿಕೊಳ್ಳುತ್ತೀರಿ ಎಂದರೆ ನಾವು ಮುಂದುವರೆಯೋಣ ಎಂದರು. ಈಗಾಗಲೆ ಸಾಕಷ್ಟು ನೋವಿನಲ್ಲಿ ನಾನಿರುವೆ ಈಗ ನೀನು ತಲೆ ಕೆಡಿಸಬೇಡ ಎಂದು ಹೇಳಿದೆ. ನನಗೆ ತುಂಬಾ ಭಯ ಆಗಿತ್ತು. ಒಂದು ವಾರ ಸಮಯ ತೆಗೆದುಕೊಂಡು ನಿರ್ಧಾರ ಮಾಡುವುದಾಗಿ ತಿಳಿಸಿದೆ. ಈ ಸಮಯದಲ್ಲಿ ನಾನು ಮದುವೆ ಕಾರ್ಯಕ್ರಮ ನಿರೂಪಣೆ ಮಾಡಲು ಹೋಗಿದೆ. ನಾನು ಅಂದುಕೊಂಡ ರೀತಿಯಲ್ಲಿ ಜೀವನ ನಡೆಯುತ್ತಿಲ್ಲ ಈ ರೀತಿ ಪ್ಲ್ಯಾನ್ ಮಾಡಿರಲಿಲ್ಲ. ಇದಾದ ನಂತರ ಆಸ್ಪತ್ರೆಗೆ ಭೇಟಿ ನೀಡಿ ಆಪರೇಷನ್ ಮಾಡಿಸಿಕೊಂಡೆ' ಎಂದು ಕುಬ್ರಾ ಹೇಳಿದ್ದಾರೆ. 

'ಆಪರೇಷನ್ ಆದ ಮೇಲೆ ಹೊರ ತೆಗೆದಿರುವ ಮಗುವನ್ನು ನೋಡಬೇಕಾ ಎಂದು ವೈದ್ಯರು ಕೇಳಿದ್ದರು. ನಾನು ನಿರಾಕರಿಸಿದೆ. ಇದಾದ ಮೇಲೆ ರಾಜಸ್ಥಾನಗೆ ಮತ್ತೆ ಶೂಟಿಂಗ್ ಮಾಡಲು ಆರಂಭಿಸಿದೆ. ಹೊರಗಡೆ ಬಿಸಿಲಿದೆ ಹಾಗೆ ಹೀಗೆ ಎಂದು ಸಣ್ಣ ಪುಟ್ಟ ಕಾರಣಗಳನ್ನು ಕೊಡುತ್ತಿದ್ದೆ. ನಿರ್ದೇಶಕಿಗೆ ನನ್ನ ಮೇಲೆ ತುಂಬಾ ಕೋಪ ಬಂದಿತ್ತು. ಏನು ನಡೆದಿದೆ ಎಂದು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಎರಡು ವರ್ಷಗಳ ನಂತರ ಏನು ನಡೆಯಿತ್ತು ಎಂದು ಹೇಳಿಕೊಂಡೆ. ಅಗ ನನ್ನನ್ನು ಕ್ಷಮಿಸಿದ್ದರು' ಎಂದಿದ್ದಾರೆ ಕುಬ್ರಾ.  

Follow Us:
Download App:
  • android
  • ios