Asianet Suvarna News Asianet Suvarna News

ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್‌ ಬಹುಬೇಡಿಕೆಯ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಪತ್ನಿ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಕೊಂಡರು. 

Actor Kichcha Sudeep visited Mantralaya raghavendra swamy mutt and got darshan today rav
Author
First Published Apr 27, 2024, 5:05 PM IST

ರಾಯಚೂರು (ಏ.27): ಸ್ಯಾಂಡಲ್‌ವುಡ್‌ ಬಹುಬೇಡಿಕೆಯ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಪತ್ನಿ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಕೊಂಡರು. 

ಮಂತ್ರಾಲಯಕ್ಕೆ ಆಗಮಿಸಿದ ಕಿಚ್ಚ ಸುದೀಪ್‌ಗೆ ರಾಯರ ಮಠದಿಂದ ಸ್ವಾಗತಿಸಿದರು. ಈ ಬಾರಿ ಕಿಚ್ಚ ಸುದೀಪ್ ದರ್ಶನ ಪಡೆಯುವ ವಿಚಾರ ಮೊದಲೇ ತಿಳಿಸಿದ್ದರಿಂದ ಶ್ರೀಮಠದ ಸಿಬ್ಬಂದಿಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ಜಗ್ಗೇಶ್, ರಮೇಶ್ ಸೇರಿದಂತೆ ಸ್ಯಾಂಡಲ್‌ವುಡ್ ಬಹುತೇಕ ನಟರಿಗೆ ಮಂತ್ರಾಲಯ ಗುರುರಾಯರು ಆರಾಧ್ಯದೈವವಾಗಿದ್ದಾರೆ. ಪ್ರತಿವರ್ಷವೂ ನಟರೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಬರುತ್ತಾರೆ ಅದೇ ರೀತಿ ಕಿಚ್ಚ ಸುದೀಪ್ ಕೂಡ ಪ್ರತಿವರ್ಷ ರಾಯರ ದರ್ಶನ ಪಡೆಯುತ್ತಾ ಬಂದಿದ್ದಾರೆ. ಈ ಬಾರಿಯೂ ಗುರುರಾಯರ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಕಿಚ್ಚ ಸುದೀಪ್. 'ವಿಕ್ರಾಂತ್ ರೋಣ'ಪೋಸ್ಟ್ ಪ್ರೊಡಕ್ಷನ್ ಕೆಲಸದ ಮಧ್ಯೆ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು. 

ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಿಗೆ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ

ಅಭಿಮಾನಿಗಳ ನೂಕುನುಗ್ಗಲು:

ಕಿಚ್ಚ ಸುದೀಪ್ ಮಂತ್ರಾಲಯಕ್ಕೆ ಭೇಟಿ ನೀಡುವ ವಿಚಾರ ತಿಳಿದು ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳ ನೂಕುನುಗ್ಗಲಿನಲ್ಲೇ ಮಠಕ್ಕೆ ತೆರಳಿ ದರ್ಶನ ಪಡೆದ ಸುದೀಪ್. ರಾಜ್ಯದ ಇತರೆಡೆಗಿಂತ ಉತ್ತರ ಕರ್ನಾಕಟ ಅದರಲ್ಲೂ ರಾಯಚೂರು, ಯಾದಗಿರಿ, ದೇವದುರ್ಗ ಭಾಗಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಕಿಚ್ಚ ಸುದೀಪ್ ಈ ಭಾಗಕ್ಕೆ ಭೇಟಿ ನೀಡಿದಾಗ ಅಭಿಮಾನಿಗಳನ್ನು ಕಂಟ್ರೋಲ್ ಮಾಡುವುದೇ ಪೊಲೀಸರಿಗೆ ಸವಾಲು ಆಗಿ ಪರಿಣಮಿಸುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟರಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸಿರುವ ಕಿಚ್ಚ ಸುದೀಪ್/ ಈ ಬಾರಿ ಮಠದ ಸಿಬ್ಬಂದಿಗೆ ಮೊದಲ ತಿಳಿದಿದ್ದರಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು.  

Latest Videos
Follow Us:
Download App:
  • android
  • ios