Jacqueline Fernandez detained: ವಿದೇಶಕ್ಕೆ ಹಾರಲಿದ್ದ ನಟಿಗೆ ಏರ್ಪೋರ್ಟ್‌ನಲ್ಲಿ ತಡೆ, ದೆಹಲಿಯಲ್ಲಿ ವಿಚಾರಣೆ
ಬಾಲಿವುಡ್(Bollywood) ನಟಿ ಜಾಕ್ವೆಲಿನ್ ಫರ್ನಾಂಡಿಸ್‌ನನ್ನು ಅಧಿಕಾರಿಗಳು ಏರ್ಪೋರ್ಟ್‌ನಲ್ಲಿ ತಡೆದಿದ್ದಾರೆ. ವಿದೇಶಕ್ಕೆ ಹೋಗದಂತೆ ನಟಿಯನ್ನು ತಡೆದಿದ್ದಾರೆ.
ಎಲ್‌ಒಸಿ (ಲುಕ್ ಔಟ್ ಸುತ್ತೋಲೆ) ಕಾರಣದಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ವಲಸೆ ಅಧಿಕಾರಿಗಳು ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟನ ವಿರುದ್ಧ ಜಾರಿ ನಿರ್ದೇಶನಾಲಯ LOC ತೆರೆದಿತ್ತು. ಇದೀಗ ನಟಿ ಜಾಕ್ವೆಲಿನ್ ವಿದೇಶಕ್ಕೆ ಹಾರುವುದನ್ನು ತಡೆಯಲಾಗಿದೆ. ಕೇಸ್‌ನಲ್ಲಿ ದಾಖಲಾದ ಚಾರ್ಜ್‌ಶೀಟ್‌ನಲ್ಲಿ ನಟಿಯ ಹೆಸರನ್ನು ನಮೂದಿಸಲಾಗಿದ್ದು ಈ ವಿಚಾರವಾಗಿ ನಟಿ ಸಾಕಷ್ಟು ಚರ್ಚೆಯಾಗಿದ್ದಾರೆ. ಹಾಗೆಯೇ ನಟಿ ದುಬಾರಿ ಗಿಫ್ಟ್‌ಗಳನ್ನು ಪಡೆದಿರುವುದು ಸುದ್ದಿಯಾಗಿದೆ.
ಜಾಕ್ವೆಲಿನ್ ಫೆರ್ನಾಂಡಿಸ್ ಕಾರ್ಯಕ್ರಮವೊಂದಕ್ಕೆ ದುಬೈಗೆ ಹೋಗಲು ಬಯಸಿದ್ದರು. ಇದೀಗ ಆಕೆಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದ್ದು, ತಿಹಾರ್ ಜೈಲಿನಲ್ಲಿದ್ದ ಉದ್ಯಮಿಯೊಬ್ಬರ ಪತ್ನಿಯಿಂದ ₹ 200 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಖಾಸಗಿ ಕಿಸ್ಸಿಂಗ್ ಫೋಟೋ ಲೀಕ್, ನಾಚ್ಕೊಂಡ ಶ್ರೀಲಂಕಾ ಸುಂದರಿ ಜೊತೆಗಿದ್ದಿದ್ದು ಯಾರು?
ಚಂದ್ರಶೇಖರ್‌ನಿಂದ ನಟಿ ಫರ್ನಾಂಡೀಸ್‌ವರೆಗಿನ ಹಣಕಾಸಿನ ವಹಿವಾಟುಗಳನ್ನು ತೋರಿಸುವ ಸಾಕ್ಷಿಗಳನ್ನು ಹೊಂದಿರುವ ಕೇಂದ್ರೀಯ ಸಂಸ್ಥೆ ಈ ವಿಚಾರಗಳನ್ನು ಬಹಿರಂಗಪಡಿಸಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಚಂದ್ರಶೇಖರ್ ನೀಡಿದ ₹ 10 ಕೋಟಿ ಮೌಲ್ಯದ ಉಡುಗೊರೆಯಲ್ಲಿ ₹ 52 ಲಕ್ಷ ಮೌಲ್ಯದ ಕುದುರೆ ಮತ್ತು ₹ 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ ಎನ್ನಲಾಗಿದೆ.
ಸುಕೇಶ್ ಮೂಲಕ ಬಾಲಿವುಡ್ ನಟಿನನ್ನು ತಲುಪಿದ ತನಿಖೆ ಇನ್ನೂ ಮುಂದುವರೆದಿದೆ. ನಟಿನನ್ನು ಮತ್ತೆ ವಿಚಾರಣೆಗೆ ಒಳಪಡಿಸಬೇಕಿದೆ. ಫೆರ್ನಾಂಡಿಸ್ ಜೊತೆಗೆ ಚಾರ್ಜ್ ಶೀಟ್ ಪ್ರಕರಣದಲ್ಲಿ ಪ್ರಶ್ನಿಸಲಾದ ನಟಿ ನೋರಾ ಫತೇಹಿ ಅವರನ್ನು ಉಲ್ಲೇಖಿಸಲಾಗಿದೆ. ಫೆರ್ನಾಂಡಿಸ್ ಮತ್ತು ಅವರ ಸಹಾಯಕರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಿಂದೆ ಫತೇಹಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದಾಗಿ ಚಂದ್ರಶೇಖರ್ ಮಾಧ್ಯಮಗಳಿಗೆ ಹೇಳಿದ್ದರು. ಈ ಹಿಂದೆ ನೋರಾ ಫತೇಹಿಯ ಪ್ರತಿನಿಧಿಯೊಬ್ಬರು ನಟಿ ಈ ಪ್ರಕರಣದ ಬಲಿಪಶು ಎಂದು ಹೇಳಿದ್ದರು.