ಮನೆ ಕೆಲಸದವಳಾಗಿ ಬಂದು 20 ದಿನ ಮನೆಯಲ್ಲಿದ್ದ ನಟ ಗೋವಿಂದನ ಕ್ರೇಜಿ ಫಿಮೇಲ್‌ ಫ್ಯಾನ್‌

ಬಾಲಿವುಡ್ ನಟ ಗೋವಿಂದ 90ರ ದಶಕದ ಫೇಮಸ್ ನಟರಲ್ಲೊಬ್ಬರು, ತಮ್ಮ ಅದ್ಭುತವಾದ ನಟನಾ ಕೌಶಲ್ಯ ಹಾಗೂ ಮ್ಯಾನರಿಸಂ ಹ್ಯಾಂಡ್‌ಸಮ್‌ನೆಸ್‌ ಕಾರಣಕ್ಕೆ ಆ ಕಾಲದಲ್ಲಿ ಹೆಣ್ಣು ಮಕ್ಕಳ ಫೇವರೇಟ್ ಆಗಿದ್ದವರು ನಟ ಗೋವಿಂದ್, ಹೀಗಿರುವಾಗ ಗೋವಿಂದ್ ಅವರ ಪತ್ನಿ ನಟನ ಹುಚ್ಚು ಅಭಿಮಾನಿಯೊಬ್ಬರ ವಿಚಾರವನ್ನು ಹೇಳಿಕೊಂಡಿದ್ದಾರೆ.  

actor Govinda female fan pretended as House help wife sunita reveals crazyfan story akb

ಬಾಲಿವುಡ್ ನಟ ಗೋವಿಂದ 90ರ ದಶಕದ ಫೇಮಸ್ ನಟರಲ್ಲೊಬ್ಬರು, ತಮ್ಮ ಅದ್ಭುತವಾದ ನಟನಾ ಕೌಶಲ್ಯ ಹಾಗೂ ಮ್ಯಾನರಿಸಂ ಹ್ಯಾಂಡ್‌ಸಮ್‌ನೆಸ್‌ ಕಾರಣಕ್ಕೆ ಆ ಕಾಲದಲ್ಲಿ ಹೆಣ್ಣು ಮಕ್ಕಳ ಫೇವರೇಟ್ ಆಗಿದ್ದವರು ನಟ ಗೋವಿಂದ್ . 1986ರಲ್ಲಿ ಲವ್‌86 ಹೆಸರಿನ ಸಿನಿಮಾದ ಮೂಲಕ ತಮ್ಮ ಸಿನಿ ಕೆರಿಯರ್ ಆರಂಭಿಸಿದ ಗೋವಿಂದಗೆ ತಮ್ಮ ಮೊದಲ ಸಿನಿಮಾವೇ ಇನ್ನಿಲ್ಲದ ಪ್ರಖ್ಯಾತಿಯನ್ನು ತಂದು ಕೊಟ್ಟಿತ್ತು. ನಂತರ ಒಂದಾದ ಮೇಲೊಂದರಂತೆ ಸಿನಿಮಾ ಮಾಡುತ್ತಾ ಹೋದ ಗೋವಿಂದಗೆ ಮಹಿಳಾ ಅಭಿಮಾನಿಗಳ ದೊಡ್ಡ ಗ್ಯಾಂಗೇ ಇತ್ತು. ಹೀಗಿರುವಾಗ ಗೋವಿಂದ್ ಅವರ ಪತ್ನಿ ಗೋವಿಂದ್ ಅವರ ಹುಚ್ಚು ಅಭಿಮಾನಿಯೊಬ್ಬರ ಬಗ್ಗೆ ಮಾತನಾಡಿದ್ದು, ಆ ವೀಡಿಯೋ ವೈರಲ್ ಆಗಿದೆ. 

ಹೇಗೆ ಮಹಿಳಾ ಅಭಿಮಾನಿಯೊಬ್ಬಳು ಮನೆಕೆಲಸದವಳಾಗಿ ಬಂದು ಮನೆ ಸೇರಿಕೊಂಡು 20 ದಿನಗಳ ಕಾಲ ತಮಗೆ ಗೊತ್ತಿಲ್ಲದಂತೆ ತಮ್ಮ ಜೊತೆ ಇದ್ದಳು ಎಂಬ ವಿಚಾರವನ್ನು ಗೋವಿಂದ್ ಪತ್ನಿ ಸುನೀತಾ ಆಹುಜಾ ಹೇಳಿಕೊಂಡಿದ್ದಾರೆ. ಪಾಡ್‌ಕಾಸ್ಟ್ 'ಟೈಮೌಟ್ ವಿತ್ ಅಂಕಿತ್ ಪಾಡ್‌ಕಾಸ್ಟ್‌'ನಲ್ಲಿ ಮಾತನಾಡಿದ ಸುನೀತಾ ಅಹುಜಾ ಗೋವಿಂದನಿಗಿದ್ದ ಕ್ರೇಜಿ ಅಭಿಮಾನಿಗಳ ಬಗ್ಗೆ ಹೇಳಿಕೊಂಡಿದ್ದಾರೆ. 

10 ಕೋಟಿ ಪಡೆದು ಪಾಕಿಸ್ತಾನದಲ್ಲಿ ಡಾನ್ಸ್‌: ಐಶ್ವರ್ಯಾ ರೈಯನ್ನು ಸುತ್ತಿಕೊಂಡಿದ್ದ ಆ ವಿವಾದ ನಿಜವೇ?

ಕೆಲ ಮಹಿಳಾ ಅಭಿಮಾನಿಗಳು ಆತನನ್ನು ಸ್ಟೇಜ್‌ನಲ್ಲಿ ನೋಡಿ ಕುಸಿದು ಬೀಳುತ್ತಿದ್ದರು ಎಂಬುದರಿಂದ ಹಿಡಿದು ಮನೆ ಮುಂದೆ ಹಾಗೂ ಸೆಟ್‌ಗಳ ಬಳಿಯೂ ಬಂದು ಆತನಿಗಾಗಿ ಕಾಯುತ್ತಿದ್ದರು ಎಂಬುದನ್ನು ಸುನೀತಾ ಅಹುಜಾ ಹೇಳಿದ್ದು, ಅಭಿಮಾನಿಯೊಬ್ಬಳ ಹುಚ್ಚು ಸಾಹಸವನ್ನು ನೆನಪು ಮಾಡಿಕೊಂಡಿದ್ದಾರೆ. ಅದರಂತೆ ಗೋವಿಂದನ ಮನೆಗೆ ಮನೆ ಕೆಲಸದವಳಂತೆ ಒಬ್ಬಳು ಬಂದು ಸೇರಿಕೊಂಡಿದ್ದಳು. ಆದರೆ ನಿಜವಾಗಿಯೂ ಆಕೆ ಗೋವಿಂದನ ಮಹಿಳಾ ಅಭಿಮಾನಿಯಾಗಿದ್ದಳು. ಆದರೆ ಆಕೆಗೆ ಯಾವುದೇ ಮನೆ ಕೆಲಸ ಗೊತ್ತಿರಲಿಲ್ಲ, ಈ ವೇಳೆ ಸುನೀತಾ ಆಹುಜಾ ಅವರು ತಮ್ಮ ಅತ್ತೆ ಅಂದರೆ ಗೋವಿಂದ್ ಅವರ ಅಮ್ಮನ ಬಳಿ ಆಕೆಗೆ ಯಾವ ಕೆಲಸವೂ ಬರುತ್ತಿಲ್ಲ ಪಾತ್ರ ತೊಳೆಯುವುದಕ್ಕೂ ಬರುತ್ತಿಲ್ಲ, ಮನೆ ಕ್ಲೀನ್ ಮಾಡುವುದಕ್ಕೂ ಬರುತ್ತಿಲ್ಲ ಎಂದು ದೂರಿದ್ದರು. ಅಲ್ಲದೇ ಆಕೆ ನೋಡುವುದಕ್ಕೂ ಒಳ್ಳೆಯ ಕುಟುಂಬದ ಹಿನ್ನೆಲೆಯಿಂದ ಬಂದಂತೆ ಕಾಣುತ್ತಿದ್ದಳು. ನಂತರ ಕೊನೆಗೂ ಆಕೆಯನ್ನು ಕರೆದು ಪ್ರಶ್ನಿಸಿದಾಗ ಆಕೆ ಸಚಿವರೊಬ್ಬರ ಮಗಳು ಹಾಗೂ ಗೋವಿಂದನ ದೊಡ್ಡ ಅಭಿಮಾನಿ ಎಂಬುದು ಗೊತ್ತಾಗಿತ್ತು ಎಂದು ಸುನೀತಾ ಆಹುಜಾ ಹೇಳಿದ್ದಾರೆ. 

ಓಡೋಡಿ ಬಂದು ನಟ ಗೋವಿಂದ್‌ನ ಅಪ್ಪಿಕೊಂಡ ಸಲ್ಮಾನ್ ಖಾನ್; ಸಲ್ಲು ಹೊಟ್ಟೆ ನೋಡಿ ನೆಟ್ಟಿಗರು ಶಾಕ್!

ಆಕೆ ತಡರಾತ್ರಿಯವರೆಗೆ ನಿದ್ದೆ ಮಾಡದೇ ಉಳಿದು ಗೋವಿಂದನ ಬರುವಿಕೆಗಾಗಿಯೇ ಕಾಯುತ್ತಿದ್ದಳು. ಆ ಸಮಯದಲ್ಲಿ ನಾನು ಕೂಡ ಸಣ್ಣ ವಯಸ್ಸಿನವಳಾಗಿದ್ದೆ. ಹೀಗಾಗಿ ಆಕೆಯ ಬಗ್ಗೆ ನನಗೆ ಅನುಮಾನ ಶುರುವಾಗಿತ್ತು. ಅಲ್ಲದೇ ನಾನು ಆಕೆಯ ಹಿನ್ನೆಲೆ ವಿಚಾರಿಸಲು ಶುರು ಮಾಡಿದೆ  ನಂತರದಲ್ಲಿ ಆಕೆ ಸಚಿವರೊಬ್ಬರ ಮಗಳು ಎಂಬುದು ಗೊತ್ತಾಗಿತ್ತು. ನಂತರದಲ್ಲಿ ಆಕೆ ಅಳುತ್ತಾ ತಾನು ಗೋವಿಂದ ಅಭಿಮಾನಿ ಎಂದು ಒಪ್ಪಿಕೊಂಡಿದ್ದಳು. ಇದಾದ ನಂತರ ಆಕೆಯನ್ನು ಕರೆದುಕೊಂಡು ಹೋಗಲು ಆಕೆಯ ಪೋಷಕರು 4 ಕಾರುಗಳಲ್ಲಿ ಬಂದಿದ್ದರು. ಆಕೆ ಕನಿಷ್ಠ 20 ದಿನಗಳ ಕಾಲ ನಮ್ಮನೆಯಲ್ಲಿದ್ದಳು ಇಂತಹ ಹುಚ್ಚು ಅಭಿಮಾನಿಗಳನ್ನು ಗೋವಿಂದ್ ಹೊಂದಿದ್ದರು ಎಂದು ಸುನೀತಾ ಹೇಳಿದ್ದಾರೆ. 

 

 

Latest Videos
Follow Us:
Download App:
  • android
  • ios