ಹಾಲಿವುಡ್‌ ನಟ ಚಾರ್ಲಿ ಹುನ್ನಮ್‌ಗೆ ಕೊರೋನಾ ಬಂದ್ಹಂಗಾಯ್ತು, ಆದರೆ ಅದು ಕೊರೋನಾ ಅಲ್ಲ. ಮತ್ತೇನು? 

ಜಾಕ್ಸನ್‌ ಚಿತ್ರದ ಮೂಲಕ ಜ್ಯಾಕ್‌ ಎಂದೇ ಖ್ಯಾತಿ ಪಡೆದಿರುವ ಚಾರ್ಲಿ ಹುನ್ನಮ್‌ ಇನ್‌ಸ್ಟಾಗ್ರಾಂನಲ್ಲಿ ತಮಗೆ ಅನುಭವವಾದ ವಿಚಿತ್ರ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. ಕೊರೋನಾ ನೆಗೆಟಿವ್ ಬಂದರೂ ರುಚಿ ಸಿಗುತ್ತಿಲ್ಲ, ವಾಸನೆ ಕಂಡುಹಿಡಿಯಲು ಆಗುತ್ತಿಲ್ಲ?

ಮೆಗಾ ಸ್ಟಾರ್‌ ಚಿರಂಜೀವಿಗೆ ಕೊರೋನಾ ಪಾಸಿಟಿವ್ 

ಹಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ 40ರ ವಯಸ್ಸಿನ ನಟ ಚಾರ್ಲಿ ಕೊರೋನಾ ಕಾಡಿರುವ ಭಯದ ಬಗ್ಗೆ ಮಾತನಾಡಿದ್ದಾರೆ. ' ನನಗೆ ಸುಮಾರು 10 ದಿನಗಳ ಕಾಲ ರುಚಿ ಹಾಗೂ ವಾಸನೆ ಕಂಡು ಹಿಡಿಯಲು ಆಗುತ್ತಿರಲಿಲ್ಲ. ತುಂಬಾನೇ ಸುಸ್ತು ಆಗುತ್ತಿತ್ತು,' ಎಂದು ಅನುಭವ ಹೇಳಲು ಪ್ರಾರಂಭಿಸಿದ್ದಾರೆ.

View post on Instagram

'ಹೀಗೆ ನಾನು ಒಂದು ದಿನ ಎದ್ದು ಕಾಫಿ ಮಾಡಿಕೊಳ್ಳಲು ಬಂದೆ. ಒಂದು ನಿಮಿಷ ಯೋಚಿಸುತ್ತಲೇ ನಿಂತಿದ್ದೆ. ಕಾಫಿ ಪೌಡರ್ ವಾಸನೆ ಬರಲೇ ಇಲ್ಲ. ಗಾಬರಿಗೊಂಡು ಚಿಕಿತ್ಸೆ ಮಾಡಿಸಿಕೊಂಡೆ,' ಎಂದಿದ್ದಾರೆ. ಆದರೆ ಪರೀಕ್ಷೆ ವರಿದಿ ಬೇರೇಯೇ ಆಗಿತ್ತು.

'ಜ್ವರ , ಕೆಮ್ಮು, ಡ್ರೈ ಕಾಫ್, ಸುಸ್ತು ಎಲ್ಲವೂ ಇತ್ತು. ಖಂಡಿತವಾಗಿಯೂ ಇದು ಕೊರೋನಾನೇ ಎಂದು Rapid test ಮಾಡಿಸಿಕೊಂಡೆ. ಆದರೆ ನೆಗೆಟಿವ್ ಎಂದು ವರದಿ ಬಂತು. ಈ ಕಾರಣದಿಂದ ಸುಮಾರು 6 ತಿಂಗಳಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿರುವೆ. ಇನ್ನು ಮುಂದಿನ ಸಿನಿಮಾ ಜಂಗಲ್‌ಲ್ಯಾಂಡ್‌ ಚಿತ್ರೀಕರಣಕ್ಕೆ ತೆರಳಬೇಕು. ಯಾರ ಸಂಪರ್ಕದಲ್ಲಿ ಇಲ್ಲದೇ ಹೋದರೂ ಏನೋ ವಿಚಿತ್ರ ಜ್ವರ ಕಾಣಿಸಿಕೊಂಡಿತ್ತು. ಇನ್ನು ಮುಂದೆ ಏನ್ ಆಗುತ್ತದೋ ನೋಡಬೇಕಿದೆ,' ಎಂದು ನಟ ಚಾರ್ಲಿ ನಗು ನಗುತ್ತಲೇ ತಮಗಾದ ಅನಾರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 

ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್! 

ಅಷ್ಟಕ್ಕೂ ಈ ನಟನಿಗೆ ಯಾವ ರೋಗ ಬಾಧಿಸುತ್ತಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಏನಾದರೂ ಆಗಲಿ, ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸೋಣ.