100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಆಶಲತಾ ವಾಬ್‌ಗಾಂವ್ಕರ್ ನಿಧನರಾಗಿದ್ದಾರೆ. ಗೋವಾ ಮಾಜಿ ಸಿಎಂ ದಿಗಂಬರ್ ಕಾಮತ್ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗೋವಾದ ನಟಿ ಆಶಲತಾ ಸಾವಿನಿಂದ ನೋವಾಗಿದೆ. ಅವರ ಅಭಿನಯ ಸಿನಿಮಾಗಳು ಮುಂದಿನ ತಲೆಮಾರಿಗೆ ಎಂದಿಗೂ ಮಾದರಿಯಾಗಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಂಗನಾ ಅಭಿನಯದ ಮಣಿಕರ್ಣಿಕಾದಿಂದ ಹೊರಕ್ಕೆ: ಕಾರಣ ಹೇಳಿದ ಸೋನು

ನಟಿ ಮೂಲತಃ ಗೋವಾದವರಾಗಿದ್ದು, ಮೊದಲು ಕೊಂಕಣಿ ಮತ್ತು ಮರಾಠಿ ನಾಟಕಗಳಲ್ಲಿ ನಟಿಸುತ್ತಿದ್ದರು.  ಅವರು ಹಿಂದಿ, ಮಾರಾಠಿ ಸೇರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮಹಾಭಾರತ್ ಟಿವಿ ಶೋದಲ್ಲಿಯೂ ನಟಿಸಿದ್ದರು.

ಬೆಸ್ಟ್ ಸಪೋರ್ಟಿಂಗ್ ನಟಿಗಾಗಿ ನಾಮಿನೇಟ್ ಆಗಿದ್ದರು. ಇವರು ಅಪ್ನಾ ಪರಾಯೆ, ಉಂಬಾರ್ತ,  ವಾಹಿನಿಚಿ ಮಾಯ, ಸೂತ್ರಧಾರ, ಅಂಕುಶ್, ದ ಬಾಯ್ ಗೆಟ್ಸ್‌ ಅ ಬ್ರೈಡ್ ಸಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.