Asianet Suvarna News Asianet Suvarna News

Thunivu: ಚಿತ್ರ ನೋಡಲು ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ!

ತಮಿಳು ನಟ ಅಜಿತ್​ ಅವರ ಥುನಿವು ಚಿತ್ರ ಭರ್ಜರಿ ಸುದ್ದಿ ಮಾಡುತ್ತಿದೆ. ಅದರ ನಡುವೆಯೇ ಈ ಚಿತ್ರ ನೋಡಲು ಸಿಗಲಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಿದ್ದೇನು?
 

Actor Ajiths fan committed suicide for not getting to see Tunivu film
Author
First Published Jan 23, 2023, 1:14 PM IST

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಸಿನಿ ತಾರೆಯರೇ ದೇವತೆಗಳಾಗಿದ್ದಾರೆ. ನಟರನ್ನೇ ತಮ್ಮ ದೇವರು ಎಂದು ಪೂಜಿಸುವವರು ಕೆಲವರು ಕಾಣಸಿಗುತ್ತಾರೆ. ಅದು ಎಷ್ಟರಮಟ್ಟಿಗೆ ಎಂದರೆ ದೊಡ್ಡ ದೊಡ್ಡ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಪೊಲೀಸರು (Police) ಹಿಡಿದಾಗ ಅವರು ಹೇಳುವ ಉತ್ತರ ಎಂದರೆ, ಆ ಚಿತ್ರದಲ್ಲಿನ ನಾಯಕನನ್ನು ನೋಡಿ ನಾನು ಇದನ್ನು ಅನುಸರಿಸಿದೆ ಎನ್ನುವುದು. ಅಷ್ಟು ಅಂಧಾಭಿಮಾನಿಗಳ ಸಂಖ್ಯೆಯೇ ಹೆಚ್ಚಾಗುತ್ತ ಸಾಗಿದೆ. ಒಂದು ಹಂತಕ್ಕೆ ಸೀಮಿತವಾಗಿರಬೇಕಾದ ಅಭಿಮಾನಿ ಅತಿರೇಕಕ್ಕೆ ಹೋಗಿ ನಟರನ್ನು ನೋಡಲು ಆಗಲಿಲ್ಲ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿರುವ ಮಧ್ಯೆಯೇ, ಈಗ ಇನ್ನೊಂದು ಆಘಾತಕಾರಿ (shocking) ಘಟನೆಯೊಂದು ಹೊರಬಂದಿದೆ.

ಅದೇನೆಂದರೆ, ತಮಿಳು ನಟ ಅಜಿತ್ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ, ಅಜಿತ್​ ಕುಮಾರ್​  ಅವರ ಥುನಿವು (Thunivu) ಚಿತ್ರ ನೋಡಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ. ಈ ಹಿಂದೆ ಥುನಿವು ಚಿತ್ರದಿಂದಲೇ ಅಜಿತ್​ ಅವರ ಅಭಿಮಾನಿಯೊಬ್ಬ ಪ್ರಾಣ ಕಳೆದುಕೊಂಡಿದ್ದ ಘಟನೆ ನೆನಪಿರಬಹುದು. ಈ ಚಿತ್ರದ ಪ್ರದರ್ಶನ ಮುಗಿದ ಬಳಿಕ ಸಿನಿಮಾ ಮಂದಿರದಲ್ಲಿ ಅಜಿತ್​ ಅವರ ಅಭಿಮಾನಿಗಳು ಸಂಭ್ರಮದ ಹೆಸರಿನಲ್ಲಿ ಹುಚ್ಚಾಟ ಮೆರೆದಿದ್ದರು. ನಟನಿಗೆ ಜೈಕಾರ ಹಾಕುತ್ತಾ ಸಂಭ್ರಮಿಸಿ ಏಕಾಏಕಿ ರಸ್ತೆಗೆ ಇಳಿದಿದ್ದರು. ಈ ವೇಳೆ  ಟ್ರಾಫಿಕ್ ಜಾಮ್ ಆಗಿತ್ತು. ಅಜಿತ್​ (Ajith Kumar) ಅಭಿಮಾನಿ ಭರತ್​ ಎನ್ನುವವರು ಇದೇ ಉತ್ಸಾಹದಲ್ಲಿ  ಚಲಿಸುತ್ತಿದ್ದ ಲಾರಿಯ  ಮೇಲೆ ಏರಿ ನಟನಿಗೆ ಜೈಕಾರ ಹಾಕುತ್ತಾ ನರ್ತಿಸತೊಡಗಿದ್ದರು. ಈ ವೇಳೆ ಆಯತಪ್ಪಿ ಲಾರಿ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.

'ಪಠಾಣ್'​ ವೀಕ್ಷಿಸಲು ಆಗದಿದ್ರೆ ಸಾಯ್ತೇನೆ: ವಿಡಿಯೋ ಮಾಡಿದ್ದಾನೆ ಈ ಯುವಕ!

ಈಗ ಇಂಥದ್ದೇ ಅತಿರೇಕದ ಅಭಿಮಾನ ಇನ್ನೊಂದು ಜೀವವನ್ನು ಬಲಿ ಪಡೆದಿದೆ. ತಮಿಳುನಾಡಿನ ತೂತುಕುಡಿಯ ಅಜಿತ್ ಅವರ ಅಭಿಮಾನಿ ವೀರಬಾಗು ಎನ್ನುವವರು ಸಾವಿಗೆ ಶರಣಾಗಿದ್ದಾರೆ. ತಮಗೆ 'ಥುನಿವು' ಚಿತ್ರ ನೋಡಲು ಅವಕಾಶ ಸಿಗದೇ ಇದ್ದುದಕ್ಕೆ ಇಂಥ ಒಂದು ಕೃತ್ಯ ಎಸಗಿದ್ದಾರೆ. ಮೃತ ದುರ್ದೈವಿಯನ್ನು ವೀರಬಾಗು (Veerabagu) ಎನ್ನಲಾಗಿದೆ. ಇವರು ಆಟೋ ಡ್ರೈವರ್ ಆಗಿದ್ದರು. ಅಷ್ಟಕ್ಕೂ ಆಗಿದ್ದು ಏನೆಂದರೆ ವೀರಬಾಗು ಅವರು ಕುಟುಂಬ ಸಮೇತರಾಗಿ  'ಥುನಿವು' ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಆದರೆ ಸುಮ್ಮನೇ ಹೋಗಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರಲಿಲ್ಲ.  ಕಂಠಪೂರ್ತಿ ಕುಡಿದು ತೂರಾಡುತ್ತಾ ಹೋಗಿದ್ದರು. 

ಹೀಗೆ ಕುಡಿದದ್ದರಿಂದ ಚಿತ್ರ ವೀಕ್ಷಿಸಲು ಬಂದವರಿಗೆ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ  ಚಿತ್ರಮಂದಿರದ ಒಳಗೆ ಅವರನ್ನು ಸೆಕ್ಯುರಿಟಿ ಬಿಡಲಿಲ್ಲ.  ಕುಡಿದು ಬಂದಿದ್ದಕ್ಕಾಗಿ ಕುಟುಂಬ ಸದಸ್ಯರ ಎದುರು ಅವರು ಚೆನ್ನಾಗಿ ಬೈದಿದ್ದಾರೆ. ವಾಪಸ್​ ಹೋಗುವಂತೆ ಹೇಳಿದ್ದಾರೆ. ತನ್ನ ನೆಚ್ಚಿನ ನಟನ ಚಿತ್ರವನ್ನು ಆ ದಿನ ನೋಡಲು ಸಾಧ್ಯವಾಗಲಿಲ್ಲ ಎಂದು ನೊಂಡುಕೊಂಡ ವೀರಗಾಬು ಕುಟುಂಬ ಸದಸ್ಯರನ್ನು ಮಾತ್ರ ಸಿನಿಮಾ ನೋಡಲು ಕಳುಹಿಸಿ  ಮನೆಗೆ ವಾಪಸಾಗಿದ್ದಾರೆ. ಕುಟುಂಬದ ಸದಸ್ಯರು ಮನೆಗೆ ಬಂದು ನೋಡುವಷ್ಟರಲ್ಲಿ ನೇಣು ಬಿಗಿದು ಆತ್ಮಹತ್ಯೆ (Suicide)ಮಾಡಿಕೊಂಡಾಗಿತ್ತು. 

ಚಿತ್ರರಂಗಕ್ಕೆ ಪುನಃ ಬರಸಿಡಿಲು​: ಶೂಟಿಂಗ್​ ವೇಳೆ ನಟ ವಿಜಯ್​ ಸ್ಥಿತಿ ಚಿಂತಾಜನಕ

ಇನ್ನು ಥುನಿವು ಕುರಿತು ಹೇಳುವುದಾದರೆ, ಕಳೆದ ಸಂಕ್ರಾಂತಿಯ ವೇಳೆ ಬಿಡುಗಡೆಯಾದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರವು ಬಿಡುಗಡೆಯಾದ ಸಮಯದಿಂದ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ.  ಮೊದಲ ವಾರದಲ್ಲಿ, ಚಿತ್ರವು ಬಾಕ್ಸ್ ಆಫೀಸ್​ನಲ್ಲಿ (Box office) 100 ಕೋಟಿ ರೂಪಾಯಿ ಗಳಿಸಿದೆ. ದಳಪತಿ ವಿಜಯ್ (Dalapathi Vijay) 'ವಾರಿಸು' ಹಾಗೂ  'ಥುನಿವು' ಸಿನಿಮಾಗಳ ಮಧ್ಯೆ ಬಾಕ್ಸ್​ ಆಫೀಸ್‌ನಲ್ಲಿ (Box office) ನೆಕ್‌ ಟು ನೆಕ್ ಫೈಟ್ ನಡೀತಿರುವ ನಡುವೆಯೇ, ಥುನಿವು ಭರ್ಜರಿ ಕಲೆಕ್ಷನ್​ ಮಾಡಿದೆ. 

Follow Us:
Download App:
  • android
  • ios