ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡ ಮತ್ತೊಬ್ಬ ಬಾಲಿವುಡ್ ನಟ | ಮಾಜಿ ಬಿಗ್‌ಬಾಸ್ ಸ್ಪರ್ಧಿಗೆ ಈ ಡ್ರಗ್ಸ್ ಸಂಕಟ

ನಟ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ. ರಾಜಸ್ಥಾನದಿಂದ ಆಗಮಿಸಿದ ನಂತರ ನಟನನ್ನು ಮುಂಬೈ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆಯಲಾಗಿದೆ.

ನಗರದ ಅಂಧೇರಿ ಮತ್ತು ಲೋಖಂಡ್ವಾಲಾ ಪ್ರದೇಶಗಳಲ್ಲಿ ಶೋಧದ ವೇಳೆ ಅವರ ನಿವಾಸದಿಂದ ಆಲ್‌ಪ್ರಜೋಲಮ್ ಮಾತ್ರೆಗಳನ್ನು ಪತ್ತೆ ಮಾಡಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ಅಪ್ಪನ ಜೊತೆಯ ಹೋಳಿ ಪಾರ್ಟಿ ಮಾಡಿದ ಮಗಳು ಸಾರಾ ಆಲಿ ಖಾನ್ ಧರಿಸಿದ್ದು ಬಿಕನಿ!

ಐಜಾಜ್ ಖಾನ್ ಮಾದಕವಸ್ತು ಪೆಡ್ಲರ್ ಶಾದಾಬ್ ಫಾರೂಕ್ ಶೇಖ್ ಅಲಿಯಾಸ್ ಶಾದಾಬ್ ಬಟಾಟಾ ಅವರ ಸಿಂಡಿಕೇಟ್ನ ಭಾಗವಾಗಿದೆ ಎಂದು ಎನ್ಸಿಬಿ ಹೇಳಿದೆ. ಕಳೆದ ಗುರುವಾರ ಶೇಖ್‌ನನ್ನು ಬಂಧಿಸಲಾಗಿದ್ದು, ಆತನಿಂದ 2 ಕಿಲೋಗ್ರಾಂಗಳಷ್ಟು ನಿಷೇಧಿತ ಮೆಫೆಡ್ರೋನ್ ಡ್ರಗ್ಸ್ ಷಧವನ್ನು ವಶಪಡಿಸಿಕೊಳ್ಳಲಾಗಿದೆ.

ನನ್ನ ಮನೆಯಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ಏನೂ ಕಂಡುಬಂದಿಲ್ಲ ಎಂದು ಶ್ರೀ ಖಾನ್ ಹೇಳಿದ್ದಾರೆ. ಅವರ ನಿವಾಸದಲ್ಲಿ ದೊರೆತ ಡ್ರಗ್ಸ್ ಔಷಧಿಗಳ ಬಗ್ಗೆ ಪದೇ ಪದೇ ಕೇಳಿದಾಗ, ಅದೇನೂ ಇಲ್ಲ. ಅದು ಅವರಿಗೆ ಎಲ್ಲಿ ಸಿಕ್ಕಿತು ಎಂದು ಅವರನ್ನು ಕೇಳಿ ಎಂದಿದ್ದಾರೆ. ಅವರಿಗೆ ಸಿಕ್ಕಿದ್ದು ನಾಲ್ಕು ನಿದ್ದೆ ಮಾತ್ರೆಗಳು. ನನ್ನ ಹೆಂಡತಿಗೆ ಗರ್ಭಪಾತವಾಗಿತ್ತು. ಖಿನ್ನತೆಗೆ ಒಳಗಾಗಿದ್ದಳು. ಅವಳು ಆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು ಎಂದಿದ್ದಾರೆ.

ಪತಿ ನಿಕ್ ಜೊತೆ ಕೆಲಸ ಮಾಡಲು ಇಷ್ಟವೇ ಇಲ್ವಂತೆ ಪಿಗ್ಗಿಗೆ!

ಎನ್‌ಸಿಬಿ ಇತ್ತೀಚಿನ ತಿಂಗಳುಗಳಲ್ಲಿ ಬಾಲಿವುಡ್-ಮಾದಕವಸ್ತು ಸಿಂಡಿಕೇಟ್‌ ಹುಡುಕಾಟ, ವಿಚಾರಣೆಗಳು ಬಿಗಿಗೊಳಿಸಿದೆ. ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎನ್‌ಸಿಬಿ ತನಿಖೆ ಚುರುಕಾಗಿದೆ.