Asianet Suvarna News Asianet Suvarna News

Singham ಮಧ್ಯರಾತ್ರಿ 2.30ಗೆ ಕಥೆ ಕೇಳಿ ಬೆಳಗ್ಗೆ 7ಕ್ಕೆ ಚಿತ್ರೀಕರಣ ಶುರು; ಅಜಯ್ ದೇವಗನ್‌ಗೆ ಯಾಕೆ ಅವಸರ?

ಸಿಂಗಂ ಕಥೆ ಕೇಳಿ ಕೆಲವೇ ಗಂಟೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಮುಂದಾದ ಅಜಯ್ ದೇವಗನ್..ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ರೋಹಿತ್ ಶೆಟ್ಟಿ
 

Actor Ajay Devgn listend to Singham mid night and began shooting in early morning vcs
Author
First Published Dec 27, 2022, 1:07 PM IST

ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಅಜಯ್ ದೇವಗನ್ ಸಿನಿಮಾ ಅಂದ್ರೆ ಸಿಂಗಂ. 2011ರಲ್ಲಿ ಬಿಡುಗಡೆಯಾದ ಸಿಂಗಂ ಮತ್ತು 2014ರಲ್ಲಿ ಬಿಡುಗಡೆಯಾದ ಸಿಂಗಂ ರಿಟರ್ನ್ಸ್‌ ಸಿನಿಮಾವನ್ನು ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. 41 ಕೋಟಿ ರೂಪಾಯಿ ಬಜೆಟ್‌ ಸಿನಿಮಾ ಇದಾಗಿದ್ದು ಸುಮಾರು 157 ಕೋಟಿ ಕಲೆಕ್ಷನ್ ಮಾಡಿದೆ. ಹಿಂದಿ ಭಾಷೆಯಲ್ಲಿ ಮಾತ್ರವೇ ಸಿನಿಮಾ ರಿಲೀಸ್ ಅಗಿದ್ದು.  ಅಜಯ್ ದೇವಗನ್ ಜೊತೆ ಕಾಜಲ್ ಅಗ್ರವಾಲ್ ಮತ್ತು ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. 

ಈಗ ವೈರಲ್ ಆಗುತ್ತಿರುವ ವಿಚಾರ ಏನೆಂದು ಅಜಯ್ ದೇವಗನ್‌ ಸಿಂಗಂ ಕಥೆಯನ್ನು ಕೇಳಿದ ಕೆಲವೇ ನಿಮಿಷಗಳಲ್ಲಿ ಚಿತ್ರೀಕರಣ ಮಾಡಲು ಒಪ್ಪಿಕೊಂಡರಂತೆ. ಸಿಂಗಂ ಕಥೆ ಇಷ್ಟವಾಯ್ತಾ ಅಥವಾ ಸಿನಿಮಾ ಕೈಯಲ್ಲಿಲ್ಲ ಎಂದು ಒಪ್ಪಿಕೊಂಡಿದ್ದಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  '2011ರಲ್ಲಿ ಬಿಡುಗಡೆಯಾದ ಸಿಂಗಂ ಸಿನಿಮಾದ ಬಗ್ಗೆ ಹೇಳಬೇಕು. ಅಜಯ್ ದೇವಗನ್‌ ಕಥೆ ಕೇಳಿ ಸಿನಿಮಾ ಮಾಡಲು ಮುಂದಾಗಿದ್ದ ರೀತಿಯೇ ವಿಭಿನ್ನ. ಕಥೆ ಕೇಳಿ ಬೆಳಗ್ಗೆ  7 ಗಂಟೆಗೆ ಗೋವಾದಲ್ಲಿ ಚಿತ್ರೀಕರಣ ಶುರು ಮಾಡಿದ್ದರು. ಲಂಡನ್ ಪ್ರವಾಸದಿಂದ ರಾತ್ರಿ 10 ಗಂಟೆಗೆ ಸೆಟ್‌ಗೆ ಬಂದರು ಆಗ ಮೊದಲ ಸಲ ಪೊಲೀಸ್ ಪಾತ್ರಕ್ಕೆ ಹೇರ್ ಕಟ್ ಮಾಡಿಸಿಕೊಂಡಿದ್ದರು ಒಂದು ರೌಂಡ್ ಟ್ರಯಲ್ ಮಾಡಲಾಗಿತ್ತು.  ಸುಮಾತು 10.30 ಅಥವಾ 11 ಗಂಟೆ ರಾತ್ರಿಯಲ್ಲಿ ಕಥೆ ಹೇಳಲು ಶುರು ಮಾಡಿದ್ದು ರಾತ್ರಿ 2.30 ಕಥೆ ಹೇಳುವುದು ಮುಗಿಯಿತ್ತು. ಗೋಲ್‌ಮಾಲ್‌ ಸಿನಿಮಾ ನಂತರ ಕಥೆ ಕೇಳುವುದನ್ನೇ ಬಿಟ್ಟಿದ್ದಾರೆ' ಎಂದು ಬಾಲಿವುಡ್‌ ಹಂಗಾಮ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Actor Ajay Devgn listend to Singham mid night and began shooting in early morning vcs

ಲೇಡಿ ಸಿಂಗಂ ದೀಪಿಕಾ?

#SinghamOurRealHero; ದೇವಗನ್ ಪರ ನಿಂತ ಹಿಂದಿ ಅಭಿಮಾನಿಗಳು, ಸೂರ್ಯ ಫ್ಯಾನ್ಸ್ ಗರಂ

'ಚೆನ್ನೈ ಎಕ್ಸ್‌ಪ್ರೆಸ್' ನಂತರ ರೋಹಿತ್ ಶೆಟ್ಟಿ ಮತ್ತು ದೀಪಿಕಾ ಪಡುಕೋಣೆ ಮತ್ತೆ ಯಾವಾಗ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ತಿಳಿಯಲು ಎಲ್ಲರಿಗೂ ಕುತೂಹಲವಿತ್ತು.  ರೋಹಿತ್‌ ಶೆಟ್ಟಿ ದೀಪಿಕಾ ಅವರಿಗೆ ಲೇಡಿ ಸಿಗಂ ಪಾತ್ರ ನೀಡುವ ಮೂಳಕ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ.ವಾಸ್ತವವಾಗಿ, 'ಸರ್ಕಸ್' ಹಾಡಿನ ಸಮಾರಂಭದಲ್ಲಿ, ರೋಹಿತ್ ಶೆಟ್ಟಿ ದೀಪಿಕಾ ಪಡುಕೋಣೆ ಬಗ್ಗೆ ಈ ವಿಷಯವನ್ನು ಬಹಿರಂಗಪಡಿಸಿದರು. ದೀಪಿಕಾ ತನ್ನ ಕಾಪ್ ಯೂನಿವರ್ಸ್‌ಗೆ ಸೇರಿಕೊಂಡಿದ್ದಾರೆ ಎಂದು ರಿಹಿತ್‌ ಶೆಟ್ಟಿ ಅವರು ಹೇಳಿ.ಲೇಡಿ ಸಿಂಗಮ್ ಯಾವಾಗ ಬರುತ್ತಾರೆ? ಎಂದು  ಪ್ರತಿ ಬಾರಿಯೂ ಅದೇ ಪ್ರಶ್ನೆ ಕೇಳಲಾಗುತ್ತದೆ  ಹಾಗಾಗಿ 'ಸಿಂಗಮ್ ಅಗೇನ್' ಚಿತ್ರದಲ್ಲಿ ಲೇಡಿ ಸಿಂಗಂ ಬರಲಿದ್ದಾರೆ. ಅವಳು ಕಾಪ್ ಯೂನಿವರ್ಸ್‌ನಿಂದ ನನ್ನ ಲೇಡಿ ಪೋಲೀಸ್. ಮುಂದೆ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ಘೋಷಣೆಯ ಬಗ್ಗೆ ತುಂಬಾ ಭಾವುಕರಾದ ದೀಪಿಕಾ ನಂತರ ರೋಹಿತ್ ಶೆಟ್ಟಿಯನ್ನು ಅಪ್ಪಿಕೊಂಡರು. ಹಾಡಿನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಣವೀರ್ ಕೂಡ ನೋಡಿ ನಗುತ್ತಾ, 'ಇಲ್ಲಿಯೇ ಇದನ್ನು  ಮೊದಲ ಸಲ ಕೇಳುತ್ತಿರುವುದು' ಎಂದರು.
 

Follow Us:
Download App:
  • android
  • ios