ರಜನೀಕಾಂತ್‌ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್‌!

ರಜನಿಕಾಂತ್‌ ಅವರು ಸಂಘಿ ಎನ್ನುವ ಮಾತಿಗೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್‌ ಅವರು ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದೇನು?
 

Actor Ahimsa Chetan expressed opinion through a tweet regarding Rajinikanths Sanghi matter suc

 ಇದೇ 22ರಂದು ನಡೆದಿದ್ದ ರಾಮ ಲಲ್ಲಾ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ರಜನಿಕಾಂತ್ ಹೋದ ಕಾರಣ, ಕೆಲವರು ಅವರನ್ನು ಸಂಘಿ ಎಂದು ಕರೆದಿದ್ದರು. ಈ ವಿಚಾರವಾಗಿ ರಜನಿಕಾಂತ್ ಪುತ್ರಿ ಐಶ್ವರ್ಯ ಅವರು, ಹೀಗೆ ನನ್ನ ತಂದೆಯನ್ನು ಕರೆಯಬೇಡಿ, ಅವರು ಸಂಘಿ ಅಲ್ಲ ಎಂದಿದ್ದರು. ನನ್ನ ತಂದೆ ಸಂಘಿ ಅಲ್ಲ. ನಾನು ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದೆ. ಆದ್ರೆ ನನ್ನ ಟೀಮ್ ತೋರಿಸಿ ಪೋಸ್ಟ್​ನಿಂದ ಬೇಸತ್ತು ಸಂಘಿ ಎನ್ನುವ ಪದದ ಅರ್ಥ ಹುಡುಕಿದೆ. ಈ ರೀತಿ ನನ್ನ ತಂದೆಯನ್ನು ಕರೆಯಬೇಡಿ ಎಂದಿದ್ದರು.  ನನ್ನ ತಂದೆ ಲಾಲ್‌ ಸಲಾಂ ಚಿತ್ರದ ಸ್ಕ್ರಿಪ್ಟ್‌ ಅನ್ನು ಕೇಳಿದಾಗ ಮೊಯ್ದಿನ್‌ ಭಾಯಿ ಪಾತ್ರ ತನಗೆ ಮಾಡಬಹದೇ ಎಂದು ತಂದೆ ನನ್ನನ್ನು ಕೇಳಿದರು. ಆರಂಭದಲ್ಲಿ ಹಿಂಜರಿದೆ. ಆ ಪಾತ್ರಕ್ಕೆ ಅವರನ್ನು ಆರಿಸುವ ಬಗ್ಗೆ ನಾನು ಅವರು ಸೂಚಿಸುವ ತನಕ ಯೋಚಿಸಲೇ ಇಲ್ಲ. ಲಾಲ್‌ ಸಲಾಂ ಒಂದು ಸೂಕ್ಷ್ಮ ವಿಚಾರದ ಸಿನಿಮಾ ಆಗಿ 

ಒಂದು ವೇಳೆ ಅವರೇನಾದರೂ  ಸಂಘಿ ಆಗಿದ್ದರೆ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ ಎಂದೂ ಹೇಳಿದ್ದರು. ಇದೀಗ ಅಪ್ಪ ಮತ್ತು ಮಗಳ ನಡುವಿನ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ತಂದೆಯನ್ನು ಸಂಘಿ ಎಂದು ಕರೆಯಬೇಡಿ ಎಂದು ಐಶ್ವರ್ಯ ಅವರ ಹೇಳಿದ ಕಾರಣ, ಸಂಘಿ ಎನ್ನುವ ಪದದ ವಿರುದ್ಧ  ಐಶ್ವರ್ಯಾ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಅದು ಕೆಟ್ಟ ಪದ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ವಿರೋಧ ವ್ಯಕ್ತವಾಗುತ್ತಿದೆ.  

'ಸಂಘಿ' ಕುರಿತು ಮಗಳು ಐಶ್ವರ್ಯ ಹೇಳಿದ್ದನ್ನು ತಿರುಚಬೇಡಿ: ನಟ ರಜನೀಕಾಂತ್​ ಮನವಿ

ತಮ್ಮ ಮಗಳ ಬಗ್ಗೆ ಈ ಆರೋಪ ಬರುತ್ತಿದ್ದಂತೆಯೇ ಅಪ್ಪ ರಜನೀಕಾಂತ್ ಅವರು ನಿನ್ನೆ  ಖುದ್ದು ರಜನೀಕಾಂತ್​ ಸ್ಪಷ್ಟನೆ ನೀಡಿದ್ದರು.  ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು,  ತಮ್ಮ ಮಗಳು ಹೇಳಿದ್ದನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಐಶ್ವರ್ಯಾ ಅವರು ಸಂಘಿ ಅನ್ನೋದು ಕೆಟ್ಟ ಪದ ಅನ್ನೋ ಅರ್ಥದಲ್ಲಿ ಹೇಳಲಿಲ್ಲ.  ನನ್ನ ತಂದೆಯ ಬಗ್ಗೆ ಯಾಕೆ ಈ ರೀತಿ ಪ್ರಚಾರ ಮಾಡ್ತಾರೆ ಎಂದಷ್ಟೇ ಕೇಳಿದುದಾಗಿ ಸಮರ್ಥಿಸಿಕೊಂಡರು. ನನ್ನ ತಂದೆ ಯಾರ ಜೊತೆಯೂ ಗುರುತಿಸಿಕೊಂಡವರಲ್ಲ. ಓರ್ವ ಹಿಂದೂವಾಗಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಹೋಗಿದ್ದಾರಷ್ಟೇ. ಅವರನ್ನು ಸಂಘಿ ಎನ್ನುವಲ್ಲಿ ಅರ್ಥವಿಲ್ಲ ಎಂದಷ್ಟೇ ಮಗಳು ಹೇಳಿದ್ದರು. ಆದರೆ ಅದನ್ನು ಬೇರೆ ರೀತಿಯಲ್ಲಿ ಕಲ್ಪಿಸಲಾಗಿದೆ ಎಂದು ರಜನೀಕಾಂತ್​ ಹೇಳಿದ್ದರು. 

ಇಂಥ ವಿಷಯ ಬಂದಾಗಲೆಲ್ಲವೂ ಹೇಳಿಕೆ ಕೊಡುವ ಮೂಲಕವೇ ಸದಾ ಪ್ರಚಾರದಲ್ಲಿರುವ  ನಟ ಚೇತನ್‌ ಅಹಿಂಸಾ ಅವರು ಇದಕ್ಕೂ ಈಗ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು,  "ನಟ ರಜನಿಕಾಂತ್ ಅವರ ಮಗಳು ತನ್ನ ತಂದೆ 'ಸಂಘಿ ಅಲ್ಲ' ಎಂದು ಹೇಳಿದ್ದಾರೆ; ಅಲ್ಲದೆ, ಆಕೆಯ 'ಲಾಲ್ ಸಲಾಮ್' ಚಿತ್ರದಲ್ಲಿ ರಜನಿಕಾಂತ್ ನಟನೆ ಮಾಡುತ್ತಿರುವುದು ಅವರು ಸಂಘಿ ಅಲ್ಲ ಅನ್ನೋದನ್ನ ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ. ಮನವರಿಕೆಯಾಗುವುದಿಲ್ಲ. ರಜನಿಕಾಂತ್ ಅವರು 2014, 2017, 2019, 2021ರಲ್ಲಿ ಹೀಗೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ವೈಭವೀಕರಿಸಿದ್ದರು. ಅವರು 2023 ಮತ್ತು 2024 ರಲ್ಲಿ ರಾಮ ಮಂದಿರಕ್ಕೆ (ಅಯೋಧ್ಯೆ) ಹಾಜರಾಗಿದ್ದರು. ಇದು ಸಂಘಿಯಂತೆ ಕಾಣುತ್ತದೆ. ಅಲ್ಲದೇ, ನಟರು ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಚಲನಚಿತ್ರಗಳನ್ನು ಮಾಡುತ್ತಾರೆ. ರಜನಿಕಾಂತ್‌ಗೆ ತೆರೆಯ ಮೇಲಿನ ಸಿದ್ಧಾಂತವು ಎಂದಾದರೂ ಮುಖ್ಯವಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.

30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...

Latest Videos
Follow Us:
Download App:
  • android
  • ios