Asianet Suvarna News Asianet Suvarna News

30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...

23ನೇ ವಯಸ್ಸಿಗೆ ಮದ್ವೆಯಾಗಬಯಸಿದ್ದ ಸಾಯಿ ಪಲ್ಲವಿ 33 ಆದ್ರೂ ಯಾಕೆ ಮದ್ವೆಯಾಗಿಲ್ಲ? ಇಲ್ಲಿದೆ ಕಾರಣ
 

Sai Pallavi wanted to get married at 23 Why is she still postponing it here is reason  suc
Author
First Published Jan 29, 2024, 4:02 PM IST

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು  ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ  ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ.

ಸಿಂಪಲ್​ ಬ್ಯೂಟಿ ಎಂದೇ ಫೇಮಸ್​  ಆಗಿರೋ ನಟಿ ಸಾಯಿ ಪಲ್ಲವಿ ಅವರ ತಂಗಿ ಪೂಜಾ ಕಣ್ಣನ್ ತನ್ನ ಧೀರ್ಘಕಾಲದ ಬಾಯ್‌ಫ್ರೆಂಡ್ ವಿನೀತ್ ಜೊತೆ ಈಚೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಮಯದಲ್ಲಿ ಅಕ್ಕ ಸಾಯಿ ಪಲ್ಲವಿ ತಂಗಿಗೆ ಹೇಗೆಲ್ಲ ಜೊತೆಯಾಗಿ ನಿಂತಿದ್ದಳು ಎಂಬುದನ್ನು ತೋರಿಸುವ ವಿಡಿಯೋವನ್ನು ಪೂಜಾ ಹಂಚಿಕೊಂಡಿದ್ದರು.   ಈ ವಿಡಿಯೋಗೆ ಪೂಜಾ, 'ಅವಳು ನನ್ನ ಜೊತೆ ಇಲ್ಲದಿದ್ದರೆ ಆ ದಿನವನ್ನು ಅಥವಾ ಯಾವುದೇ ದಿನವನ್ನು ಕಳೆಯಲು ನನ್ನಿಂದಾಗುತ್ತಿರಲಿಲ್ಲ. ಐ ಲವ್ಯೂ ದ ಮೋಸ್ಟ್' ಎಂದು ಬರೆದು ಅಕ್ಕ ಸಾಯಿ ಪಲ್ಲವಿಯನ್ನು ಟ್ಯಾಗ್ ಮಾಡಿದ್ದರು.  ಸಮಾರಂಭದಲ್ಲಿ ತಂಗಿಯ ಕೂದಲು, ಸೀರೆ ಸರಿ ಮಾಡುತ್ತಾ, ಜೊತೆ ನಿಂತು ಮಾತಾಡಿ ನಗಿಸುತ್ತಾ, ತಂಗಿಯೊಂದಿಗೆ ಡ್ಯಾನ್ಸ್ ಮಾಡುತ್ತಾ, ಜೋಡಿಯ ಫೋಟೋ ತೆಗೆಯುವ ಸಾಯಿಪಲ್ಲವಿಯನ್ನು ನೋಡಿದವರು ತಮಗೂ ಇಂಥ ಅಕ್ಕ ಇರಬೇಕು ಎಂದೆಲ್ಲಾ ಕಮೆಂಟ್​ ಹಾಕಿದ್ದರು. ಇದು ತಂಗಿಯ ಮದುವೆಯ ಮಾತಾಯ್ತು. ಆದರೆ ನಟಿ ಸಾಯಿ ಪಲ್ಲವಿ ಮದುವೆ ಏಕಿನ್ನೂ ಆಗಲಿಲ್ಲ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಂದಹಾಗೆ ಸಾಯಿ ಪಲ್ಲವಿ ಅವರಿಗೆ ಈಗ 32 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರಿ ಹೋಗಿದೆ. ನಟಿಯರು ವಯಸ್ಸಾದ ಮೇಲೆ ಮದುವೆಯಾಗುವುದು ಸಾಮಾನ್ಯವಾಗಿದ್ದರೂ, ಸಾಯಿ ಪಲ್ಲವಿ ಅವರ ತಂಗಿಯ ನಿಶ್ಚಿತಾರ್ಥದ ಬಳಿಕ ಅಕ್ಕನ ಮದುವೆಯ ವಿಷಯ ಮುನ್ನೆಲೆಗೆ ಬಂದಿದೆ.

ಅಂದು ವರುಣ್​, ಇಂದು ರಣಬೀರ್​: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್​!

ತಮಿಳು, ಮಲಯಾಳಂ ಚಿತ್ರಗಳ ಮೂಲಕ ಸದ್ದು ಮಾಡಿರುವ ನ್ಯಾಚುರಲ್ ಬ್ಯೂಟಿ ಅಭಿಮಾನಿಗಳ ಆಲ್‌ಟೈಮ್‌ ಫೇವರೆಟ್‌ ಆಗಿದ್ದಾರೆ. ಇಂಥವರ ಮದ್ವೆ ಯಾಕಿನ್ನೂ ಆಗಿಲ್ಲ ಎನ್ನುವುದೇ ಚರ್ಚೆ. ಅಷ್ಟಕ್ಕೂ ಸಾಯಿ ಪಲ್ಲವಿ ಅವರು 23ನೇ ವಯಸ್ಸಿಗೆ ಮದುವೆಯಾಗಬಯಸಿದ್ದವರು. 30ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳ ತಾಯಿಯೂ ಆಗಬಯಸಿದ್ದರು. ಆದರೆ ವಿಧಿಲೀಲೆಯ ಬೇರೆಯಾಗಿತ್ತು. ತಂಗಿಯ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದಾರೆ. ಅಷ್ಟಕ್ಕೂ ಇದಕ್ಕೆ ಅವರೇ ಹಿಂದೊಮ್ಮೆ ಉತ್ತರ ನೀಡಿದ್ದರು, ಆ ಸಂದರ್ಶನದಲ್ಲಿ ಸಾಯಿ ಪಲ್ಲವಿ, "ನಾನು 18 ವರ್ಷದವಳಿದ್ದಾಗ 23 ವರ್ಷಕ್ಕೆ ಮದುವೆಯಾಗಬೇಕು.. 30 ವರ್ಷಕ್ಕಿಂತ ಮುಂಚೆಯೇ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಾನು ತೆಗೆದುಕೊಳ್ಳಬೇಕಾಗಿತ್ತು. ಎಂಬಿಬಿಎಸ್​ ಮಾಡುವ ಆರಂಭದಲ್ಲಿಯೇ ಮದ್ವೆ ಬಗ್ಗೆ ಯೋಚಿಸಿದ್ದು ನಿಜ. ಆದರೆ  ಜವಾಬ್ದಾರಿಗಳು ಹೆಗಲ ಮೇಲೆ ಬಂದಿದ್ದರಿಂದ  ಮದುವೆಯನ್ನು ಮುಂದೂಡಿದೆ.  ನಟಿಯಾಗಿ ಒಳ್ಳೆ ಹೆಸರು ಇದೆ. ಆದ್ದರಿಂದ  ಮದುವೆಗೆ ಇನ್ನೂ ಕಾಲಾವಕಾಶ ಇದೆ ಎಂದಿದ್ದಾರೆ. ತಾವು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು ಎನ್ನುವುದು ಸಾಯಿ ಪಲ್ಲವಿ ಆಸೆ. 

ಈ ಹಿಂದೆ ನಟಿ, ಲವ್​ ಲೆಟ್​ ಸುದ್ದಿಯೊಂದನ್ನು ನೆನಪಿಸಿಕೊಂಡಿದ್ದರು.  ಅದೇನೆಂದರೆ,  ಬಾಲ್ಯದಲ್ಲಿಯೇ ನಟಿ ಪ್ರೇಮಪಾಶಕ್ಕೆ ಸಿಲುಕಿ ಪ್ರೇಮ ಪತ್ರ ಬರೆದಿದ್ದರಂತೆ. ಆದರೆ ಈ ಪ್ರೇಮ ಪತ್ರದ ವಿಷಯ ಮನೆಯವರಿಗೆ ತಿಳಿದು ಸಾಯಿಪಲ್ಲವಿ ಅವರನ್ನು ತೀವ್ರವಾಗಿ ಥಳಿಸಿದ್ದಂತೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮ, ಮದುವೆ ಎಂದರೆ ಉಸಾಬರಿಯೇ ಬೇಡ ಎನ್ನುವ ಮಟ್ಟಿಗೆ ಹೋಗಿದ್ದಾರೆ ನಟಿ.  ನಿಜ ಜೀವನದಲ್ಲಿ ಆಕೆಗೆ ಬಾಯ್‌ಫ್ರೆಂಡ್ ಇದ್ದಾನೋ ಇಲ್ಲವೋ ಎಂಬುದು ಬಹಿರಂಗವಾಗಿಲ್ಲ. ಆದರೆ ಬಾಲ್ಯದಲ್ಲಿ, ಅವರು ಪ್ರೀತಿಸಿ ಸೋಲನ್ನು ಕಂಡವರು. ಈ ಕುರಿತು  ಸ್ವತಃ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

ಗಂಡಸ್ರು ಕಿಸ್​ ಕೊಟ್ರೆ ಮಾತ್ರ ಲೈಂಗಿಕ ದೌರ್ಜನ್ಯನಾ? ಈ ವೈರಲ್​ ವಿಡಿಯೋಗೆ ಶುರುವಾಗಿದೆ ಸಕತ್​ ಚರ್ಚೆ!

Follow Us:
Download App:
  • android
  • ios