ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ನ ಡ್ರಗ್ಸ್ ದಂಧೆಯ ಮೂಗು ಹಿಡಿದು ಎಳೆದ ಎನ್‌ಸಿಬಿಯ ಮುಂದೆ ಇಡೀ ಬಾಡಿಯೇ ಮುರಿದುಕೊಂಡು ಬೀಳುತ್ತಿದೆ. ಮೊದಲು ಸುಶಾಂತ್ ಪ್ರಕರಣದ ತನಿಖೆಯಾಗಬೇಕು ಎಂದು ಕಂಗನಾ ದೊಡ್ಡದಾಗಿ ಬಾಯಿ ಬಡಿದುಕೊಂಡಳು. ಅದನ್ನು ಹಿಂಬಾಲಿಸಿ ಒಂದೊಂದೇ ಹಾವುಗಳ ಬಿಲದಿಂದ ಹೊರಗೆ ಬರಲು ಆರಂಭಿಸಿದವು. ಎನ್‌ಸಿಬಿ ಒಬ್ಬೊಬ್ಬರನ್ನೇ ತನಿಖೆ ಮಾಡುತ್ತ ಮಾಡುತ್ತ ಈಗ ದೀಪಿಕಾ ಪಡುಕೋಣೆ, ಸಲ್ಮಾನ್‌ ಖಾನ್ ಮುಂತಾದವರ ಬುಡಕ್ಕೂ ಬಂದಿದೆ. ಅದು ಹೇಗೆ? ಇದಕ್ಕೆ ಲಿಂಕ್‌ ಹಾಕಿಕೊಂಡಿರುವುದು ಕ್ವಾನ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ ಎಂಬ ಸಂಸ್ಥೆ.

ಮುಂಬಯಿಯಾದ್ಯಂತ ಇಂಥ ಹಲವು ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿಗಳಿವೆ. ಇವುಗಳ ಕೆಲಸ ಬೇರೇನಲ್ಲ, ಸಿನಿಮಾ ಶೂಟಿಂಗ್‌ಗೆ ಜನರನ್ನು ಒದಗಿಸುವುದು. ಎಲ್ಲ ನಿರ್ದೇಶಕರು, ನಿರ್ಮಾಪಕರ ಬಳಿಯೂ ಸಿನೆಮಾಗೆ ಬೇಕಾದ ಎಲ್ಲ ಬಗೆಯ ಜನರೂ  ಇರುವುದಿಲ್ಲ ತಾನೆ? ನಿರ್ದೇಶಕರ ಬೇಡಿಕೆಗೆ ಅನುಗುಣವಾಗಿ ಇವರು ಜನರನ್ನು ಒದಗಿಸಿಕೊಡುತ್ತಾರೆ. ಹೀರೋನ ಹಿಂದೆ ಕುಣಿಯುವ ಸೈಡ್ ಆಕ್ಟ್ರೆಸ್‌ಗಳಿಂದ ಆರಂಭಿಸಿ ಲೈಟ್‌ ಬಾಯ್‌ಗಳ ವರೆಗೆ, ವಿಡಿಯೋ ಎಡಿಟಿಂಗ್‌ನಿಂದ ಆರಂಭಿಸಿ ಟ್ರಾಲಿ ತಳ್ಳುವವನವರೆಗೆ- ಎಲ್ಲರನ್ನೂ ಎಲ್ಲವನ್ನೂ ಒದಗಿಸಿಕೊಡುವ ದಂಧೆ ಇವರದ್ದು. ಅಂಥ ಒಂದು ಸಂಸ್ಥೆ ಕ್ವಾನ್. 

ಡ್ರಗ್ಸ್ ದಂಧೆ: ಹೆಸರು ಕೇಳಿ ಬರುತ್ತಿದ್ದಂತೆ ಕಾಮೆಂಟ್‌ ಲಿಮಿಟ್‌ ಮಾಡಿದ ಸ್ಟಾರ್ ನಟನ ಪತ್ನಿ ...

ಕ್ವಾನ್‌ನ ಉದ್ಯೋಗಿ ಕರಿಶ್ಮಾ ಪ್ರಕಾಶ್‌ ಎಂಬಾಕೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ದೊರೆತದ್ದು, ಆಕೆಗೂ ದೀಪಿಕಾ ಪಡುಕೋಣೆಗೂ ನಡೆದ ಚಾಟಿಂಗ್. ಅದರಲ್ಲಿ ತನಗೆ ಡ್ರಗ್ಸ್ ಒದಗಿಸಿಕೊಡುವಂತೆ ದೀಪಿಕಾ ಕೇಳಿಕೊಂಡಿದ್ದಳು ಎಂಬ ಅರ್ಥ ಬರುವ ಮೆಸೇಜ್‌ಗಳು ಪತ್ತೆಯಾದವು. ಇದು ನಿಜವೋ ಸುಳ್ಳೋ ತನಿಖೆ ಆಗಬೇಕಿದೆ. ಹಾಗಿದ್ದರೆ ಕ್ವಾನ್‌ ಸಂಸ್ಥೆ ನಟ ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತದೆಯೇ? ಈ ಲಿಂಕಿನ ಬೆನ್ನು ಬಿದ್ದ ಪೊಲೀಸರು ಕ್ವಾನ್‌ ಸಂಸ್ಥೆಯ ಮಾಲೀಕರು ಯಾರು ಎಂಬ ಜಾತಕ ಜಾಲಾಡಿದರು. ಆಗ ಧ್ರುವ ಚಿಟಗೋಪೇಕರ್ ಎಂಬಾತ ಸಿಕ್ಕಿಬಿದ್ದ. ಈತ ಕ್ವಾನ್‌ ಅಕಾಡೆಮಿಯ ಸಿಇಒ ಮತ್ತು ಮಾಲೀಕ. ಈತನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು- ಕ್ವಾನ್‌ ಅಕಾಡೆಮಿಯಲ್ಲಿ ಸಲ್ಮಾನ್‌ ಖಾನ್‌ ದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿದ್ದಾನೆ! 

ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದೆ ಎಂದು ಒಪ್ಪಿಕೊಂಡ ನಿರ್ದೇಶಕ..! ...

ಸಲ್ಮಾನ್‌ ಖಾನ್‌ ಇದನ್ನು ಅಲ್ಲಗಳೆದಿದ್ದಾನೆ. ನೇರವಾಗಿ ಆತನ ಹೆಸರಿನಲ್ಲಿಯೇ ಷೇರುಗಳು ಇಲ್ಲದಿರಲೂಬಹುದು. ಆದರೆ ಇನ್ನೊಬ್ಬರ ಹೆಸರಿನಲ್ಲಿ ಅವನದೇ ಹೂಡಿಕೆ ಇರುವ ಸಾಧ್ಯತೆ ಇದೆ. ಕ್ವಾನ್‌ ಅಕಾಡೆಮಿಯ ಒಳಗಿಂದೊಳಗೇ ಡ್ರಗ್ಸ್ ವ್ಯವಹಾಋ ನಡೆಸುತ್ತಿತ್ತೇ? ಟ್ಯಾಲೆಂಟ್‌ಗಳನ್ನು ಸಪ್ಲೈ ಮಾಡುವ ಜೊತೆಗೆ ಸೆಲೆಬ್ರಿಟಿಗಳಿಗೆ ಬೇಕಾದ ಡ್ರಗ್ಸ್ ಕೂಡ ಸಪ್ಲೈ ಮಾಡುವ ಬ್ಯುಸಿನೆಸ್ ಕ್ವಾನ್‌ನದಾಗಿತ್ತೇ? ಇದು ಸಲ್ಮಾನ್‌ಗೂ ಗೊತ್ತಿತ್ತೇ ಅಥವಾ ಆತನಿಗೆ ಗೊತ್ತಿಲ್ಲದೆ ನಡೆಯುತ್ತಿದ್ದ ಸಂಗತಿಯೇ? ಈ ವಿಚಾರಗಳೆಲ್ಲ ಇನ್ನಷ್ಟೇ ತನಿಖೆಯ ಮೂಲಕ ಹೊರಗೆ ಬರಬೇಕಿವೆ.

ಲೈಂಗಿಕ ಕಿರುಕುಳ ಅರೋಪ ಎದುರಿಸಿದ ಬಾಲಿವುಡ್‌ನ ಸೆಲೆಬ್ರೆಟಿಗಳು! ...

ಈ ನಡುವೆ ಬಾಲಿವುಡ್‌ನ ಐವರು ದೊಡ್ಡ ದೊಡ್ಡ ನಟರು, ಭಯದಿಂದ ಬೆಚ್ಚಿಬಿದ್ದು ತಮ್ಮ ವಕೀಲರನ್ನು ಕರೆಸಿಕೊಂಡು ಸಮಾಲೋಚನೆ ನಡೆಸುತ್ತಿದ್ದಾರೆ. ಎನ್‌ಸಿಬಿ ತಮ್ಮನ್ನು ಯಾವ ಕ್ಷಣದಲ್ಲೂ ಕರೆಸಿಕೊಳ್ಳಬಹುದು ಎಂಬ ಆತಂಕ ಇವರಿಗೆ. ಕ್ವಾನ್‌ ಅಕಾಡೆಮಿಯ ಲಿಸ್ಟಿನಲ್ಲಿ ಇವರ ಹೆಸರಿದೆಯಂತೆ. ಪೊಲೀಸರು ಕರೆಸಿಕೊಂಡು ತನಿಖೆ ನಡೆಸುವ ಮುನ್ನವೇ ಜಾಮೀನಿಗೆ ಎಲ್ಲವನ್ನೂ ರೆಡಿ ಮಾಡಿಕೊಳ್ಳುವುದು ಇವರ ಚಿಂತನೆ. ಅಂತೂ ಡ್ರಗ್ಸ್ ದಂಧೆ ಯಾರನ್ನೂ ಬಿಡುವುದಿಲ್ಲ ಎಂಧಾಯಿತು. ಇದು ಇನ್ನೂ ಯಾರ್ಯಾರ ಮನೆ ಬಾಗಿಲುಗಳನ್ನು ತಟ್ಟುತ್ತದೆಯೋ ಗೊತ್ತಿಲ್ಲ.