ಸುಮಾರು 27 ದಿನಗಳಿಂದಲೂ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಕೊರೋನಾವನ್ನು ಸೋಲಿಸಿದ್ದಾರೆ. ಆಗಸ್ಟ್ 8ರಂದು ಅಭಿಷೇಕ್ ಕೊರೋನಾ ಟೆಸ್ಟ್‌ ನೆಗೆಟಿವ್ ಬಂದಿದೆ.

ಸುಮಾರು 27 ದಿನಗಳಿಂದಲೂ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಕೊರೋನಾವನ್ನು ಸೋಲಿಸಿದ್ದಾರೆ. ಆಗಸ್ಟ್ 8ರಂದು ಅಭಿಷೇಕ್ ಕೊರೋನಾ ಟೆಸ್ಟ್‌ ನೆಗೆಟಿವ್ ಬಂದಿದೆ.

Add Asianetnews Kannada as a Preferred SourcegooglePreferred

ಇಂದು ಮಧ್ಯಾಹ್ನ ನನ್ನ ಕೊರೋನಾ ಪರೀಕ್ಷೆ ನೆಗೆಟಿವ್ ಬಂದಿದೆ. ನಾನು ಕೊರೋನಾ ಸೋಲಿಸುತ್ತೇನೆಂದು ಹೇಳಿದ್ದೆ. ನನಗೆ ಹಾಗೂ ನನ್ನ ಕುಟುಂಬಕ್ಕಾಗಿ ನಿಮ್ಮೆಲ್ಲರ ಪ್ರಾರ್ಥನೆಗಳಿಗೆ ಧನ್ಯವಾದ. ಥಂಕ್ಯೂ ಎಂದು ಬರೆದುಕೊಂಡಿದ್ದಾರೆ.

ಮೋಟಿವೇಷನ್‌ಗಾಗಿ ಶಾರುಖಾನ್ ಹಾಡು ಕೇಳಿದ ಅಭಿಷೇಕ್ ಬಚ್ಚನ್..!

ತಮ್ಮ ಕೇರ್ ಬೋರ್ಡ್ ಫೋಟೋ ಶೇರ್ ಮಾಡಿಕೊಂಡ ನಟ, ನಾನು ನಿಮಗೆ ಹೇಳಿದ್ದೆ, ಡಿಸ್ಚಾರ್ಜ್ ಆಗುತ್ತಿದ್ದೇನೆ. ಮನೆಗೆ ಹೋಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಬರೆದಿದ್ದಾರೆ.

Scroll to load tweet…

ನನ್ನ ಹಾಗೂ ನನ್ನ ಕುಟುಂಬದ ಆರೋಗ್ಯದ ಕಾಳಜಿ ವಹಿಸಿದ ಮುಂಬೈಯ ನನಾವತಿ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ನನ್ನ ಧನ್ಯವಾದ. ಅವರಿಲ್ಲದಿದ್ದರೆ ಕೊರೋನಾ ಗೆಲ್ಲಲು ಸಾಧ್ಯವಿರಲಿಲ್ಲ ಎಂದು ಬರೆದಿದ್ದಾರೆ.

ಆಗಸ್ಟ್‌ 2ರಂದು ಅಮಿತಾಭ್ ಬಚ್ಚನ್ ಡಿಸ್ಚಾರ್ಜ್ ಆಗಿದ್ದರು. ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯಾ, ಪುತ್ರಿ ಆರಾಧ್ಯ, ತಂದೆ ಅಮಿತಾಭ್ ಅವರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿತ್ತು.

View post on Instagram