ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಯಿಂದಲೇ ಫೊಟೋ ಶೇರ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ 28ನೇ ದಿನ ಕಳೆಯುತ್ತಿದ್ದು, ಶಾರೂಖ್ ಖಾನ್ ಹಾಡನ್ನ ಕೇಳುತ್ತಿರುವುದಾಗಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆಸ್ಪತ್ರೆ ಕೊಠಡಿಯ ಫೋಟೋ ಶೇರ್ ಮಾಡಿಕೊಂಡಿದ್ದು, ಹಾಸ್ಪಿಟಲ್ ಡೇ - 28 ಎಂದು ಬರೆದುಕೊಂಡಿದ್ದಾರೆ. ಶಾರೂಖ್‌ ನಟನೆಯ 2004ರ ಯೂ ಹೀ ಚಲಾ ಚಲ್ ಹಾಡನ್ನು ಕೇಳುತ್ತಿದ್ದರು. ಈ ಹಾಡು ತುಂಬ ವಿಶ್ವಾಸದ ಸಾಲುಗಳಿದ್ದು, ಇದು ಅಭಿಷೇಕ್‌ ಮನಸ್ಥಿತಿಯನ್ನು ತೋರಿಸಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಮಿತಾಭ್‌ಗೆ ಈಗ ಮಗ ಅಭಿಷೇಕ್‌ನದ್ದೇ ಚಿಂತೆ..!

ಅಭಿಷೇಕ್ ಜುಲೈನಲ್ಲಿ ತಂದೆ ಅಮಿತಾಭ್‌ ಜೊತೆ ಆಸ್ಪತ್ರೆಗೆ ದಾಖಲಾಗಿದ್ದರು. ಯಶ್ವರ್ಯಾ ಹಾಗೂ ಆರಾಧ್ಯಾಗೂ ಕೊರೋನಾ ಪಾಸಿಟಿವ್ ಬಂದಿತ್ತು. ಅವರಿಬ್ಬರೂ ಡಿಸ್ಚಾರ್ಜ್ ಆಗಿದ್ದು, ಅಮಿತಾಭ್ ಕೂಡಾ ಡಿಸ್ಚಾರ್ಜ್‌ ಆಗಿದ್ದಾರೆ. ಐಶ್ವರ್ಯಾ ಜು.27ರಂದು ಡಿಸ್ಚಾರ್ಜ್ ಆಗಿದ್ದು, ಅಮಿತಾಭ್ ಆಗಸ್ಟ್ 2ರಂದು ಡಿಸ್ಚಾರ್ಜ್ ಆಗಿದ್ದರು.

ರಕ್ಷಾ ಬಂಧನ ಸಂಭ್ರಮದಲ್ಲಿ ಅಭಿಷೇಕ್‌ನನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಆಸ್ಪತ್ರೆಯಿಂದ ಹೊರಗೆ ಬಂದಿರುವುದು ಭಾವುಕ ಸಮಯ. ಕೊರೋನಾದಿಂದ ಮುಕ್ತಿ ಸಿಕ್ಕಿತು ಎಂದಿದ್ದಾರೆ. ಆದರೆ ಅಭಿಷೇಕ್‌ಗೆ ಇನ್ನೂ ಚಿಕಿತ್ಸೆಯ ಅಗತ್ಯವಿದೆ ಎಂದು ಅಮಿತಾಭ್ ಬರೆದುಕೊಂಡಿದ್ದರು.