Asianet Suvarna News Asianet Suvarna News

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ನಂಬಿಕೆ ಇಲ್ಲ; ಸೌತ್ ಸಿನಿಮಾ ಸಕ್ಸಸ್ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ ಅಭಿಷೇಕ್ ಬಚ್ಚನ್, ಈ ಕಾನ್ಸೆಪ್ಟ್ ಬಗ್ಗೆ ನನಗೆ ನಂಬಿಕೆ ಇಲ್ಲ. ಹೀಗಂದ್ರೆ ಅರ್ಥವೇನು, ನಾವು ಸಿನಿಮಾ ನೋಡುವ ದೊಡ್ಡ ಜನಸಂಖ್ಯೆನ್ನು ಹೊಂದಿದ್ದೇವೆ. ನಾವು ಸಿನಿಮಾವನ್ನು ಪ್ರೀತಿಸುತ್ತೇವೆ. ಯಾವ ಭಾಷೆಯಲ್ಲಿ ಬಂದಿದೆ ಎನ್ನುವುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

Abhishek Bachchan talks about South film success and The Pan Indian Films concept sgk
Author
Bengaluru, First Published Apr 29, 2022, 4:21 PM IST

ಬಾಲಿವುಡ್ ನಲ್ಲಿ ಈಗ ಸೌತ್ ಸಿನಿಮಾಗಳದ್ದೇ ಹವಾ. ದಕ್ಷಿಣದ ಅನೇಕ ಸಿನಿಮಾಗಳು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚಿಗಷ್ಟೆ ಬಿಡುಗಡೆಯಾದ ಕೆಜಿಎಫ್-2 (KGF 2),ಆರ್ ಆರ್ ಆರ್(RRR) ಮತ್ತು ಪುಷ್ಪ(Pushpa) ಸಿನಿಮಾಗಳು ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿವೆ. ಬಾಲಿವುಡ್‌ನ ಘಟಾನುಘಟಿ ಸ್ಟಾರ್ ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಸೌತ್ ಸಿನಿಮಾಗಳನ್ನು ನೋಡಿ ಹಿಂದಿ ಮಂದಿ ಆತಂಕಕ್ಕೊಳಗಾಗಿದ್ದಾರೆ. ಕನ್ನಡದ ಕೆಜಿಎಫ್-2 ಸಿನಿಮಾ ಬಾಲಿವುಡ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಎಲ್ಲಾ ಸಿನಿಮಾಗಳ ಕಲೆಕ್ಷನ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಕೆಜಿಎಫ್-2 ನೋಡಿ ಪರಭಾಷಾ ಕಲಾವಿದರು ಹಾಡಿಹೊಗಳಿದ್ದಾರೆ.

ಸೌತ್ ಸಿನಿಮಾಗಳಿಂದ ಬಾಲಿವುಡ್‌ನಲ್ಲಿ ನಡುಕ ಹುಟ್ಟಿಸಿದೆ ಎಂದು ಇತ್ತಾಚಿಗಷ್ಟೆ ಬಾಲಿವುಡ್ ಸ್ಟಾರ್ ಮನೋಜ್ ಬಾಜಪೇಯಿ(Manoj Bajpayee) ಪ್ರತಿಕ್ರಿಯೆ ನೀಡಿದ್ದರು. ಇದೀಗ ಬಾಲಿವುಡ್‌ನ ಮತ್ತೊರ್ವ ನಟ ಅಭಿಷೇಕ ಬಚ್ಚನ್(Abhishek Bachchan) ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್, ಪ್ಯಾನ್ ಇಂಡಿಯಾ ಫಿಲ್ಮ್ ಎನ್ನುವ ಕಾನ್ಸೆಪ್ಟ್ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಈ ಬಗ್ಗೆ ಮಾತನಾಡಿದ್ದಾರೆ.

'ನಾನು ಈ ಅರ್ಥದಲ್ಲಿ ಸಿನಿಮಾಗಳನ್ನು ವರ್ಗೀಕರಿಸುವುದಿಲ್ಲ. ಒಳ್ಳೆಯ ಸಿನಿಮಾಗಳು ಗೆಲ್ಲುತವೆ ಕೆಟ್ಟ ಸಿನಿಮಾಗಳು ವರ್ಕ್ ಆಗಲ್ಲ. ಇದು ತುಂಬಾ ಸರಳ ಅಷ್ಟೆ' ಎಂದಿದ್ದಾರೆ. 'ಹಿಂದಿಯಲ್ಲೂ ಉತ್ತಮ ಸಿನಿಮಾಗಳು ಬಂದಿವೆ. ಗಂಗೂಬಾಯಿ ಕಾಠಿಯಾವಾಡಿ ಮತ್ತು ಸೂರ್ಯವಂಶಿ ಅಂತಹ ಅದ್ಭುತ ಸಿನಿಮಾಗಳು ಬಂದಿವೆ. ಕೊನೆಯದಾಗಿ ಪ್ರೇಕ್ಷಕರನ್ನು ಮನರಂಜಿಸುವುದು' ಮುಖ್ಯ ಎಂದಿದ್ದಾರೆ.

Abhishek- Aishwarya ಈ ಜೋಡಿ ಫಸ್ಟ್ ಮೀಟ್‌ ಆಗಿದ್ದು ಹೇಗೆ ಗೊತ್ತಾ?

ಇದೇ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ ಅಭಿಷೇಕ್ ಬಚ್ಚನ್, 'ಈ ಕಾನ್ಸೆಪ್ಟ್ ಬಗ್ಗೆ ನನಗೆ ನಂಬಿಕೆ ಇಲ್ಲ. ಹೀಗಂದ್ರೆ ಅರ್ಥವೇನು, ನಾವು ಸಿನಿಮಾ ನೋಡುವ ದೊಡ್ಡ ಜನಸಂಖ್ಯೆನ್ನು ಹೊಂದಿದ್ದೇವೆ. ನಾವು ಸಿನಿಮಾವನ್ನು ಪ್ರೀತಿಸುತ್ತೇವೆ. ಯಾವ ಭಾಷೆಯಲ್ಲಿ ಬಂದಿದೆ ಎನ್ನುವುದು ಮುಖ್ಯವಲ್ಲ ಎಂದು ಹೇಳಿದ್ದಾರೆ. ರಿಮೇಕ್ ಬಗ್ಗೆ ಮಾತನಾಡಿದ ಅಭಿಷೇಕ್ ಹಿಂದಿ ಸಿನಿಮಾಗಳು ಸೌತ್‌ಗೆ ರಿಮೇಕ್ ಆಗುವುದಿಲ್ಲವಾ, ನಾವೆಲ್ಲರೂ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ಭಾಗವಾಗಿದ್ದೇವೆ. ಆದರೆ ಬೇರೆ ಬೇರೆ ಭಾಷೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಅಷ್ಟೆ. ಹಿಂದಿ ಭಾಷೆಯ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ಬೇರೆ ಭಾಷೆಯ ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಇದೇನು ಹೊಸದಲ್ಲ. ಇದು ಯಾವಾಗಲು ಇರುತ್ತದೆ. ಇದರಲ್ಲಿ ತಪ್ಪೇನಿದೆ' ಎಂದಿದ್ದಾರೆ.

Abhishek Bachchanಗೆ ಪತ್ನಿಯನ್ನು ಎಷ್ಟು ಹೊಗಳಿದರೂ ಸಾಕೋಗಲ್ಲ ಕಾರಣವೇನು ಗೊತ್ತಾ?

'ಕೆಜಿಎಫ್-2, ಆರ್ ಆರ್ ಆರ್, ಪುಷ್ಪ ಸಿನಿಮಾಗಳು ಹಿಟ್ ಆಗಿವೆ. ಅವರು ಯಾವಾಗಲು ಉತ್ತಮವಾದುದ್ದನ್ನು ಮಾಡುತ್ತಾರೆ. ನಮ್ಮ ಹಿಂದಿ ಸಿನಿಮಾಗಳು ಸಹ ಸೌತ್‌ನಲ್ಲಿ ಉತ್ತಮವಾಗಿ ಓಡುತ್ತವೆ. ಇದೇನು ಹೊಸದಲ್ಲ' ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

Follow Us:
Download App:
  • android
  • ios