ಬಾಲಿವುಡ್ ಖ್ಯಾತ ನಟ ಅಭಿಷೇಕ್ ಬಚ್ಚನ್ ಆಗಾಗ ಟ್ರೋಲಿಗರಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ನಿರುದ್ಯೋಗಿ ಎಂದು ಕರೆದ ನೆಟ್ಟಿಗನಿಗೆ ಅಭಿಷೇಕ್ ಸರಿಯಾದ ತಿರುಗೇಟು ಕೊಟ್ಟಿದ್ದಾರೆ.

ಬಾಲಿವುಡ್ ಖ್ಯಾತ ನಟ ಅಭಿಷೇಕ್ ಬಚ್ಚನ್ ಆಗಾಗ ಟ್ರೋಲಿಗರಿಗೆ ಗುರಿಯಾಗುತ್ತಿರುತ್ತಾರೆ. ಸಿನಿಮಾ ಮತ್ತು ಮಗಳ ವಿಚಾರಕ್ಕೆ ಅಭಿಷೇಕ್ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಟ್ರೋಲ್‌ಗಳನ್ನು ನೋಡಿ ಸೈಲೆಂಟ್ ಆಗಿರದ ಅಭಿಷೇಕ್ ಸರಿಯಾದ ಪ್ರತಿಕ್ರಿಯೆ ನೀಡುವ ಮೂಲಕ ಬಾಯಿ ಮುಚ್ಚಿಸುತ್ತಾರೆ. ಅಭಿಷೇಕ್ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಸಾಕಷ್ಟು ಉದಾಹರಣೆಗಳಿವೆ. ಇದೀಗ ಮತ್ತೊಮ್ಮೆ ಟ್ರೋಲಿಗನ ಬಾಯಿ ಮುಚ್ಚಿಸಿದ್ದಾರೆ. ಬಿಗ್ ಬಿ ಪುತ್ರ. ಅಭಿಷೇಕ್ ಬಚ್ಚನ್ ಸಿನಿಮಾಗಳು ಹಿಟ್ ಆಗುತ್ತಿಲ್ಲ, ಖ್ಯಾತ ನಟನ ಮಗನಾದರೂ ಚಿತ್ರರಂಗದಲ್ಲಿ ತನ್ನದೆ ಛಾಪು ಮೂಡಿಸಲು ಪರದಾಡುತ್ತಿದ್ದಾರೆ, ಅಪ್ಪನ ದುಡ್ಡಲ್ಲಿ ಬದುಕುತ್ತಿದ್ದಾರೆ, ಕೆಲಸವಿಲ್ಲದೆ ಕುಳಿತಿದ್ದಾರೆ ಹೀಗೆ ಅನೇಕ ವಿಚಾರಗಳಿಗೆ ಅಭಿಷೇಕ್ ಟ್ರೋಲ್ ಆಗಿದ್ದಾರೆ. ಇದೀಗ ನೆಟ್ಟಿಗನೊಬ್ಬ ಅಭಿಷೇಕ್ ಅವರಿಗೆ ನಿರುದ್ಯೋಗಿ ಎಂದು ಹೇಳಿದ್ದಾನೆ. 

ಇತ್ತೀಚಿನ ದಿನಗಳಲ್ಲಿ ಟ್ರೋಲ್ ಆಗುವುದು ಸಹ ಸೆಲೆಬ್ರಿಟಿಗಳ ಜೀವನದ ಒಂದು ಭಗವಾಗಿದೆ. ಕೆಲವರು ಟ್ರೋಲ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಪ್ರತಿಕ್ರಿಯೆ ನೀಡಲ್ಲ ಆದರೆ ಇನ್ನು ಕೆಲವರು ಸರಿಯಾದ ಉತ್ತರ ಕೊಡವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸುತ್ತಾರೆ. ಅಭಿಷೇಕ್ ಕೂಡ ತನ್ನ ವಿರುದ್ಧ ಬರುವ ಟೀಕೆಗೆಳಿಗೆ ಸರಿಯಾಗಿ ತಿರುಗೇಟು ನೀಡುತ್ತಾರೆ. ಇತ್ತೀಚಿಗಷ್ಟೆ ಅಭಿಷೇಕ್ ಬಚ್ಚನ್ ಪತ್ರಕರ್ತರೊಬ್ಬರು ಶೇರ್ ಮಾಡಿದ್ದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದರು. 'ಜನರು ಇನ್ನೂ ಪತ್ರಿಕೆಗಳನ್ನು ಓದುತ್ತಿದ್ದಾರಾ?' ಎಂದು ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದರು. 

ಅಭಿಷೇಕ್ ಮಾತಿಗೆ ನೆಟ್ಟಿಗನೊಬ್ಬ, 'ಬುದ್ಧಿವಂತರು ಓದುತ್ತಾರೆ. ಆದರೆ ನಿಮ್ಮಂದ ನಿರುದ್ಯೋಗಿಗಳು ಅಲ್ಲ' ಎಂದು ಹೇಳಿ ನಗುವ ಇಮೋಜಿ ಹಾಕಿದ್ದ. ಈ ಕಾಮೆಂಟ್ ನೋಡಿ ಸುಮ್ಮನಾಗದ ಅಭಿಷೇಕ್ ಆತನಿಗೆ ಖಡಕ್ ಉತ್ತರ ನೀಡಿದ್ದಾರೆ. 'ಓಹೋ ಹಾಗಾ. ನಿಮ್ಮ ಈ ಮಾಹಿತಿಗೆ ಧನ್ಯವಾದಗಳು. ಬುದ್ಧಿವಂತಿಕೆ ಮತ್ತು ಉದ್ಯೋಗಕ್ಕೆ ಸಂಬಂಧವಿಲ್ಲ. ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ. ನೀವು ಮಾಡಿರು ಟ್ವೀಟ್ ಪ್ರಕಾರ ನೀವು ಉದ್ಯೋಗದಲ್ಲಿ ಇರುವುದು ಖಾತ್ರಿಯಾಯಿತು. ಹಾಗೆ ನೀವು ಬುದ್ಧಿವಂತರಲ್ಲ ಎನ್ನುವುದು ನನಗೆ ಖಾತ್ರಿಯಾಯಿತು' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.

Scroll to load tweet…


ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ನಂಬಿಕೆ ಇಲ್ಲ; ಸೌತ್ ಸಿನಿಮಾ ಸಕ್ಸಸ್ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

ಇನ್ನು ಅಭಿಷೇಕ್ ಬಚ್ಚನ್ ಸಿನಿಮಾ ವಿಚಾರಕ್ಕೆ ಬರುವುದಾರೆ, ಇತ್ತೀಗೆ ಬಿಗ್ ಬಿ ಪುತ್ರ ಒಟಿಟಿಯಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಅಭಿಷೇಕ್ ನಟನೆಯ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿವೆ. ಸೋಲಿನಿಂದ ಕಂಗೆಟ್ಟಿದ್ದ ಅಭಿಷೇಕ್ ಕೆಲವು ಸಿನಿಮಾ ಬ್ರೇಕ್ ಪಡೆದಿದ್ದರು. ಬಳಿಕ ಲೂಡೋ ಮೂಲಕ ಒಟಿಟಿಗೆ ಎಂಟ್ರಿ ಕೊಟ್ಟರು. ಈ ಸೀರಿಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಳಿಕ ದಿ ಬಿಗ್ ಬುಲ್ ಮೂಲಕ ಮತ್ತೆ ಒಟಿಟಿಯಲ್ಲಿ ಮಿಂಚಿದರು. ಕೊನೆಯದಾಗಿ ಬಾಬ್ ಬಿಸ್ವಾಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ದಸ್ವಿ ಹಾಗೂ ಇನ್ನು ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅಮ್ಮ ನನಗೆ ತುಂಬಾ ಹೊಡೆಯುತ್ತಿದ್ದರು ಎಂಬ ರಹಸ್ಯ ರೀವಿಲ್‌ ಮಾಡಿದ ಅಮಿತಾಬ್ ಮಗಳು

ಅಭಿಷೇಕ್ ಬಚ್ಚನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡದಿದ್ದರೂ ವರ್ಷಕ್ಕೊಂದರಂತೆ ಸಿನಿಮಾ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸದ್ಯ ಒಟಿಟಿಯಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಇನ್ನು ಅಭಿಷೇಕ್ ಬಚ್ಚನ್ ಪತ್ನಿ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಮತ್ತೆ ಸಿನಿಮಾಗಳಲ್ಲಿ ಮಿಂಚಿತ್ತಿದ್ದಾರೆ. ಅಪರೂಪಕ್ಕೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯಾ ಕೊನೆಯದಾಗಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ.