2020ರ ವರ್ಷಾರಂಭದಲ್ಲಿ ಟ ಅಭಿಷೇಕ್ ಬಚ್ಚನ್ 'ಬಾಬ್ ಬಿಸ್ವಾಸ್' ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದರು. ಆದರೆ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆದ ಕಾರಣ ಚಿತ್ರೀಕರಣ ನಿಲ್ಲಿಸಲಾಗಿತ್ತು. ಸುಮಾರು 8 ತಿಂಗಳ ನಂತರ ಕೋಲ್ಕತ್ತಾದಲ್ಲಿ ಮತ್ತೆ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದೆ.

ಅಭಿಷೇಕ್‌ ಬಚ್ಚನ್‌ರನ್ನು ಪಿಗ್ಗಿ ಜೊತೆ ಕೆಲಸ ಮಾಡದಂತೆ ತಡೆದ ಐಶ್ವರ್ಯಾ ರೈ! 

ಬುಧವಾರ ಚಿತ್ರೀಕರಣದಲ್ಲಿ ಪಾಲ್ಗೊಂಡ ಅಭಿಷೇಕ್ ಹಾಗೂ ಚಿತ್ರಾಂಗದ ಸಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಂಪು ಸೀರೆ ಹಾಗೂ ವಾಕಿಂಗ್ ಶೋನಲ್ಲಿ ಚಿತ್ರಾಂಗದ ಕಾಣಿಸಿಕೊಂಡರೆ, ಅಭಿಷೇಕ್ ಸ್ವೆಟರ್ ಹಾಗೂ ಬಾಬ್‌ ಲುಕ್‌ನಲ್ಲಿದ್ದರು. ಆದರೆ ಎಲ್ಲರ ಗಮನ ಸೆಳೆದದ್ದು ಮಾತ್ರ ಅಭಿಷೇಕ್ ದಪ್ಪ ಕನ್ನಡಕ.  

ಸುಜಯ್ ಘೋಷ್‌ ಈ ಪಾತ್ರವನ್ನು ಕಹಾನಿ ಚಿತ್ರದಲ್ಲಿ ಪರಿಚಯಿಸಿದ್ದರು ಈಗ ಅದೇ ಪಾತ್ರ ಹಿಡಿದು ಸುಜಯ್ ಪುತ್ರಿ ದಿವ್ಯಾ ಘೋಷ್‌ 'ಬಾಬ್‌ ಬಿಸ್ವಾಸ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.  ದಿವ್ಯಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಹೇಗಿರುತ್ತದೆ ಎಂದು ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಐಶ್ವರ್ಯಾಗಾಗಿ ಕರ್ವಾ ಚೌತ್ ಉಪವಾಸ: ಮುಖ್ಯವಾದುದ್ದನ್ನೇ ಮರೆತ ಅಭಿಷೇಕ್! 

ಅಮಿತಾಭ್ ಬಚ್ಚನ್ ಅವರ ವಿಭಿನ್ನ ಲುಕ್ ಹಾಗೂ ಚಿತ್ರಕಥೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಹೆಸರುವಾಸಿ. ಈಗ ಅದೇ ಲಿಸ್ಟ್‌ನಲ್ಲಿ ಅಭಿಷೇಕ್‌ ಸೇರಿಕೊಳ್ಳುತ್ತಿದ್ದಾರೆ, ಎಕ್ಸಪರಿಮೆಂಟ್ ಮಾಡಲು ನಿರ್ಧರಿಸಿದ್ದಾರೆ ಎಂದು ಬಿ-ಟೌನ್‌ನಲ್ಲಿ ಮಾತುಕತೆ ನಡೆಯುತ್ತಿದೆ.