ಬೇರೊಬ್ಬ ನಟಿಯ ಜೊತೆಗೆ ಅಭಿಷೇಕ್ ಬಚ್ಚನ್ ಎಂಗೇಜ್‌ಮೆಂಟ್ ವಿಡಿಯೋ ವೈರಲ್!

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದ ಬಗ್ಗೆ ವಿಚ್ಛೇದನದ ವದಂತಿಗಳು ಹರಿದಾಡುತ್ತಿವೆ. ಅಭಿಷೇಕ್ ಬೇರೊಬ್ಬ ನಟಿಯ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ವಿಡಿಯೋ ವೈರಲ್‌ ಆಗಿದೆ. 

Abhishek Bachchan Engagement with karishma kapoor video goes viral bni

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡೈವೋರ್ಸ್‌ ಬಗ್ಗೆ ಹರಿದಾಡುತ್ತಿರುವ ರೂಮರ್‌ಗಳು, ಸುದ್ದಿಗಳಿಗೆ ಕೊನೆಯೇ ಇಲ್ಲ. ಅವರಿಬ್ಬರೂ ಸಪರೇಟಾಗಿ ವಾಸಿಸುತ್ತಿದ್ದಾರೆ ಎಂದು ಹೇಳುವವರೂ ಇದ್ದಾರೆ. ಆದರೆ ಬಚ್ಚನ್‌ ಫ್ಯಾಮಿಲಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಆದರೆ ಈ ನಡುವೆ, ಅಭಿಷೇಕ್‌ ಬಚ್ಚನ್‌ ಬೇರೊಬ್ಬ ನಟಿಯ ಜೊತೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡ ವಿಡಿಯೋ ಹರಿದಾಡುತ್ತಿದೆ. ಮಾತ್ರವಲ್ಲ, ವೈರಲ್‌ ಆಗಿದೆ. 

ಹೌದು. ಐಶ್ವರ್ಯಾಳನ್ನು ಮದುವೆಯಾಗುವ ಮುನ್ನ ಅಭಿಷೇಕ್ ಇಂಡಸ್ಟ್ರಿಯಲ್ಲಿ ಮತ್ತೊಬ್ಬ ಖ್ಯಾತ ನಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೇ? ಅವಳು ಆಗಲೇ ಬಾಲಿವುಡ್‌ನಲ್ಲಿ ಪ್ರಸಿದ್ಧ ನಟಿಯಾಗಿದ್ದವಳು. ನಟರಿಂದ ತುಂಬಿದ ಕುಟುಂಬದಿಂದ ಬಂದವಳು. ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಬೇರಾರೂ ಅಲ್ಲ ಕರಿಷ್ಮಾ ಕಪೂರ್ ಜೊತೆ. 2002ರಲ್ಲಿ ಅಮಿತಾಭ್ ಬಚ್ಚನ್ ಅವರ 60ನೇ ಹುಟ್ಟುಹಬ್ಬದ ಆಚರಣೆಯಲ್ಲಿ ದಂಪತಿಗಳು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು.‌

ಇದರ ವಿಡಿಯೋವೇ ಈಗ ಹರಿದಾಡುತ್ತಿರುವುದು. ಇದನ್ನೀಗ ಅಭಿ- ಐಶ್‌ ಡೈವೋರ್ಸ್‌ ಗಾಸಿಪ್‌ ನಡುವೆ ಯಾರು ತಂದುಹಾಕಿದರೋ ಕಾಣೆ. ಆದರೆ ಇದು ಸದ್ದು ಮಾಡುತ್ತಿರುವುದಂತೂ ನಿಜ. ಅದಿರಲಿ, ಆ ಎಂಗೇಜ್‌ಮೆಂಟ್‌ ಕತೆಯೇನಾಯಿತು ಎಂದು ಗೊತ್ತೆ?

ಎಂಗೇಜ್‌ಮೆಂಟ್‌ ಆದ ಕೆಲವೇ ದಿನಗಳಲ್ಲಿ, ಇಬ್ಬರೂ ಜನವರಿ 2003ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು. ಈ ವಿಘಟನೆ ಇವರ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿತು. ಬೇರಾಗುವುದರ ಹಿಂದಿನ ಕಾರಣಗಳ ಬಗ್ಗೆ ಎಲ್ಲರು ಆಶ್ಚರ್ಯ ಪಡುವಂತೆ ಆಯಿತು. ಆಗ ಇಷ್ಟೊಂದು ಇಂಟರ್‌ನೆಟ್‌ ಸೆನ್ಸೇಷನ್‌ ಇಲ್ಲದ ಕಾಲ. ಏನಿದ್ದರೂ ಪತ್ರಿಕೆಗಳ ಮೂಲಕ ಗೊತ್ತಾಗಬೇಕಿತ್ತು. ಆದರೂ ವಿವಿಧ ಗಾಸಿಪ್‌ಗಳು ಪ್ರಸಾರವಾಗತೊಡಗಿದವು. ಅಭಿಷೇಕ್ ಅವರ ತಾಯಿ ಜಯಾ ಬಚ್ಚನ್ ಅವರು ಮದುವೆಯ ನಂತರ ಕರಿಷ್ಮಾ ನಟನೆಯನ್ನು ತ್ಯಜಿಸಬೇಕೆಂದು ಬಯಸಿದ್ದರಂತೆ. ಇದನ್ನು ಕರಿಷ್ಮಾ ತಾಯಿ ಬಬಿತಾ ಕಪೂರ್ ಒಪ್ಪಲಿಲ್ಲ. ಮತ್ತೊಂದು ವರದಿಯ ಪ್ರಕಾರ ಬಚ್ಚನ್ ಕುಟುಂಬವು ಆ ಸಮಯದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿತ್ತು ಮತ್ತು ಬಬಿತಾ ತನ್ನ ಮಗಳನ್ನು ಅಂತಹ ಸವಾಲುಗಳನ್ನು ಹೊಂದಿರುವ ಕುಟುಂಬಕ್ಕೆ ಮದುವೆ ಮಾಡಿ ಕಳಿಸಲು ಹಿಂಜರಿಯುತ್ತಿದ್ದರು.

ಇದರ ಪರಿಣಾಮವಾಗಿ, ಅಭಿಷೇಕ್ ಮತ್ತು ಕರಿಷ್ಮಾ ತಮ್ಮ ನಿಶ್ಚಿತಾರ್ಥವನ್ನು ನಿಲ್ಲಿಸಲು ಸೌಹಾರ್ದಯುತವಾಗಿ ನಿರ್ಧರಿಸಿದರು ಮತ್ತು ತಮ್ಮ ತಮ್ಮ ದಾರಿಯಲ್ಲಿ ಹೋದರು. ವಿಘಟನೆಯ ನಂತರ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಸಾಗಿದರು. ಅಭಿಷೇಕ್ ಐಶ್ವರ್ಯಾ ರೈ ಅವರನ್ನು ವಿವಾಹವಾದರೆ, ಕರಿಷ್ಮಾ ಕಪೂರ್ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ ಕರಿಷ್ಮಾ ಅವರ ದಾಂಪತ್ಯ ಸ್ಥಿರವಾಗಿ ಉಳಿಯಲಿಲ್ಲ. ದಂಪತಿಗಳು 2016 ರಲ್ಲಿ ವಿಚ್ಛೇದನ ಪಡೆದರು.

ಸಲ್ಮಾನ್ ಖಾನ್ ಮನೆಯಲ್ಲಿ ಬೆಳೆದ ಅನಾಥೆ ಅರ್ಪಿತಾ 'ಟೈಗರ್‌'ಗೆ ಕಣ್ಣೀರು ಹಾಕಿಸಿದ್ದೇಕೆ?

ಅಭಿಷೇಕ್ ಬಗ್ಗೆ ಹೇಳುವುದಾದರೆ, ಐಶ್ವರ್ಯಾ ಅವರೊಂದಿಗಿನ ಸಂಬಂಧವೂ ತೊಂದರೆಯಲ್ಲಿದೆ ಎಂಬ ವದಂತಿಗಳು ಹರಡಿವೆ. ಆನ್‌ಲೈನ್‌ನಲ್ಲಿ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. ದಂಪತಿಗಳು ಈಗಾಗಲೇ ಬೇರ್ಪಟ್ಟಿದ್ದಾರೆ ಆದರೆ ಅದನ್ನು ಸಾರ್ವಜನಿಕಗೊಳಿಸದಿರಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಮತ್ತೊಂದಷ್ಟು ಗಾಸಿಪ್‌ಗಳ ಪ್ರಕಾರ, ಅಭಿಷೇಕ್ ತನ್ನ ʼದಸ್ವಿʼ ಸಹನಟಿ ನಿಮ್ರತ್ ಕೌರ್ ಜೊತೆ ಓಡಾಡುತ್ತಿದ್ದಾನೆ, ಐಶ್ವರ್ಯಾಗೆ ಮೋಸ ಮಾಡಿದ್ದಾನೆ ಎಂದೆಲ್ಲ ಹೇಳಿದೆ. 

ಗ್ಯಾಂಗ್‌ಸ್ಟರ್‌ ಬಿಷ್ಣೋಯ್ ಗಿಂತ ಸಲ್ಮಾನ್ ಖಾನ್‌ ಕೆಟ್ಟವ, ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ

ಕೆಲವು ತಿಂಗಳ ಹಿಂದೆ, ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಅವರ ವಿವಾಹದ ಸಂದರ್ಭದಲ್ಲಿ, ಐಶ್ವರ್ಯಾ ಮತ್ತು ಆರಾಧ್ಯ ಅವರನ್ನು ಹೊರತುಪಡಿಸಿ ಇಡೀ ಬಚ್ಚನ್ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ತಾಯಿ-ಮಗಳು ಪ್ರತ್ಯೇಕವಾಗಿ ಆಗಮಿಸಿದ್ದರು. ಅವರ ಸಂಬಂಧದಲ್ಲಿ ಕ್ಷೋಭೆ ಉಂಟಾಗಿರಬಹುದು ಎಂಬ ಊಹಾಪೋಹಗಳಿಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ.

 

Latest Videos
Follow Us:
Download App:
  • android
  • ios