ಅರ್ಪಿತಾ ಆಗಿನ್ನೂ ತುಂಬಾ ಚಿಕ್ಕವಳು. ತಂದೆಯನ್ನು ಕಳೆದುಕೊಂಡವಳಿಗೆ ಬೇರೆ ಯಾರೂ ದಿಕ್ಕೇ ಇರಲಿಲ್ಲ. ಇನ್ನೆಲ್ಲಿಗೆ ಹೋಗುವುದು? ಸತ್ತ ತಂದೆಯ ದೇಹದ ಮುಂದೆ ನಿಂತು ಅಳುತ್ತಾ ಕುಳಿತಿದ್ದಳು.. ಆಕೆಗೆ ಮುಂದಿನ ಜೀವನದ ಬಗ್ಗೆ ಯಾವುದೇ ಆಸೆಯಾಗಲೀ..

ತಂದೆ ಮೃತದೇಹದ ಮುಂದೆ ಅಳುತ್ತಾ ಕುಳಿತಿದ್ದ ಅರ್ಪಿತಾಳನ್ನು (Arpitha) ಮನೆಗೆ ಕರೆತಂದು ದತ್ತು ತೆಗೆದುಕೊಂಡರು ಸಲ್ಮಾನ್ ಖಾನ್ (Salman Khan) ತಂದೆ ಸಲೀಂ ಖಾನ್. ಅಪ್ಪ ಮನೆಗೆ ಕರೆತಂದ ತಂಗಿಯನ್ನು ಸ್ವಂತ ತಂಗಿಯಂತೆ ನೋಡಿಕೊಂಡು ಅವಳನ್ನು ಪ್ರೀತಿಯಿಂದ ಕಣ್ಣೀರು ತುಂಬಿಕೊಂಡು ಮದುವೆ ಮಾಡಿಕೊಟ್ಟಿದ್ದಾರೆ ನಟ ಸಲ್ಮಾನ್ ಖಾನ್. ಇದು ಯಾವುದೇ ಸಿನಿಮಾ ಕಥೆಯಲ್ಲ, ರಿಯಲ್ ಸ್ಟೋರಿ. ಹೌದು ಅರ್ಪಿತಾ ಅನಾಥೆ. ತಂದೆಯನ್ನು ಕಳೆದುಕೊಂಡು ದಿಕ್ಕಿಲ್ಲದೇ ನಿಂತಿದ್ದ ಹುಡುಗಿ!

ಅರ್ಪಿತಾ ಆಗಿನ್ನೂ ತುಂಬಾ ಚಿಕ್ಕವಳು. ತಂದೆಯನ್ನು ಕಳೆದುಕೊಂಡವಳಿಗೆ ಬೇರೆ ಯಾರೂ ದಿಕ್ಕೇ ಇರಲಿಲ್ಲ. ಇನ್ನೆಲ್ಲಿಗೆ ಹೋಗುವುದು? ಸತ್ತ ತಂದೆಯ ದೇಹದ ಮುಂದೆ ನಿಂತು ಅಳುತ್ತಾ ಕುಳಿತಿದ್ದಳು ಬಾಲೆ ಅರ್ಪಿತಾ. ಆಕೆಗೆ ಮುಂದಿನ ಜೀವನದ ಬಗ್ಗೆ ಯಾವುದೇ ಆಸೆಯಾಗಲೀ ಭರವಸೆಯಾಗಲೀ ಇರಲಿಲ್ಲ. ಆದರೆ, ದೇವರಂತೆ ಬಂದು ಯೋಗ್ಯ ಹಾಗೂ ಉತ್ತಮ ಬದುಕು ಕೊಟ್ಟರು ನಟ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ (Saleem Khan). 

ನಟ ದರ್ಶನ್‌ ಮಧ್ಯಂತರ ಬೇಲ್‌ಗೆ ಶ್ಯೂರಿಟಿ ಕೊಟ್ಟ 'ಆಪದ್ಭಾಂಧವ' ಧನ್ವೀರ್ ಗೌಡ!

ಅರ್ಪಿತಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಬೆಳೆಸಿದರು. ಬಳಿಕ, ದತ್ತು ತೆಗೆದುಕೊಂಡು ಮನೆಮಗಳಂತೆ ಬೆಳೆಸಿದರು, ಅದಾಗಲೇ ಅವರಿಗೊಬ್ಬ ಮಗನಿದ್ದ. ಅವನರೇ ಬಾಲಿವುಡ್‌ ಸ್ಟಾರ್ ನಟರಾಗಿ ಬೆಳೆದ ಸಲ್ಮಾನ್ ಖಾನ್. ಸ್ಟಾರ್ ನಟರಾದರೂ ಸಲ್ಲುಗೆ ಅರ್ಪಿತಾ ಅಂದ್ರೆ ಪಂಚಪ್ರಾಣವಂತೆ. ಆಕೆಯನ್ನು ಮದುವೆ ಮಾಡಿಕೊಡುವಾಗ ಸಣ್ಣ ಮಗುವಿನಂತೆ ಅತ್ತಿದ್ದರಂತೆ ಹೀರೋ ಸಲ್ಮಾನ್ ಖಾನ್. ಅದನ್ನು ನೋಡಿದ ಅನೇಕರು ಬೆಕ್ಕಸಬೆರಗಾಗಿದ್ದರಂತೆ!

ಅದಿರಲಿ, ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್ ಕೂಡ ಅರ್ಪಿತಾ ಹೆಸರಲ್ಲಿಯೇ ಇದೆಯಂತೆ. ಅಷ್ಟು ಇಷ್ಟವಂತೆ ಸಲ್ಲುಗೆ ಅರ್ಪಿತಾ ಅಂದ್ರೆ! ಅಷ್ಟೇ ಅಲ್ಲ, ಚಿಕ್ಕವಳಿದ್ದಾದ ಆಕೆಯ ತಂದೆ ಇಟ್ಟ ಹೆಸರನ್ನೇ ಮುಂದುವರೆಸಿದ್ದಾರೆ. ಅರ್ಪಿತಾಳನ್ನು ತಮ್ಮ ಮನೆಗೆ ಕರೆತಂದ ಮೇಲೆ ತಮ್ಮ ಸಮುದಾಯದ ಸಂಪ್ರದಾಯದಂತೆ ಬೇರೆ ಏನಾದ್ರೂ ಹೆಸರು ಇಡಬಹುದಾಗಿತ್ತು. ಆದರೆ, ಹಾಗೆ ಮಾಡದೇ ಅರ್ಪಿತಾ ಎಂಬ ಹೆಸರನ್ನೇ ಮುಂದುವರೆಸಿದೆ ಸಲೀಂ ಖಾತ್ ಫ್ಯಾಮಿಲಿ. 

ದರ್ಶನ್ ಸರ್ ನಿರಪರಾಧಿ ಆಗ್ಬಿಟ್ರೆ ನಂಗೆ ಹಬ್ಬ; ಏಷ್ಯಾನೆಟ್ ಸುವರ್ಣಗೆ ತರುಣ್ ಸುಧೀರ್ ಹೇಳಿಕೆ!

ಒಟ್ಟಿನಲ್ಲಿ ಹೇಳಬೇಕು ಎಂದರೆ, ಅರ್ಪಿತಾ ಒಮ್ಮೆ ಅನಾಥೆ ಎನ್ನಿಸಿದ್ದರೂ, ಬಳಿಕ ಸ್ಟಾರ್ ನಟನನ್ನೇ ಅಣ್ಣನಾಗಿ ಪಡೆದ ಭಾಗ್ಯವಂತೆ ಎಂದೇ ಹೇಳಬೇಕು. ಸಲ್ಲುಗೂ ಅಷ್ಟೇ, ಯಾರೋ ಅನಾಥೆ ಮನೆಗೆ ಬಂದು ತಂಗಿ ಪ್ರೀತಿಯನ್ನು ಧಾರೆ ಎರೆದಿದ್ದಾಳೆ. ಅದನ್ನೇ ಹೇಳುವುದು 'ಋಣಾನುಬಂಧ' ಅಂತ! ತಂಗಿ ಮದುವೆಯಲ್ಲಿ ಅಣ್ಣ ಸಲ್ಲು ಕಣ್ಣಿರು ಹಾಕಿದ್ದಕ್ಕೆ, ಈಗ ತಮಾಷೆಗೆ ಕೆಲವರು 'ಅಣ್ಣನಿಗೆ ಕಣ್ಣೀರು ಹಾಕಿಸಿದವಳು' ಎಂದರೆ ಅರ್ಪಿತಾ ಹಾಗು ಸಲ್ಲು ಇಬ್ಬರೂ ನಗುತ್ತಾರಂತೆ!