ವಿಚ್ಛೇದನ ವದಂತಿ ಮಧ್ಯೆ ಐಶ್‌ ಸೆಲ್ಫಿ ವೈರಲ್‌, ಅತ್ತೆ ಜೊತೆ ಅಭಿಷೇಕ್‌ ಪೋಸ್

ಬಾಲಿವುಡ್ ನಟಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್  ವಿಚ್ಛೇದನವಾಯ್ತಾ? ಯಾಕೋ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಿಲ್ಲ? ಅತ್ತೆ ಕಾಟ ತಡೆಯೋಕೆ ಆಗ್ದೆ ಐಶ್ ಓಡಿ ಹೋಗಿರ್ಬೇಕು? ಹೀಗೆಲ್ಲ ಹೇಳ್ತಿದ್ದವರಿಗೆ ದಂಪತಿ ಉತ್ತರ ನೀಡಿದೆ. 
 

abhishek bachchan click selfie with mother in law and aishwarya rai roo

ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ಫೋಟೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಈ ಫೋಟೋದಲ್ಲಿ ಐಶ್ವರ್ಯ ರೈ ಅಮ್ಮ ವೃಂದಾ ರೈ ಹಾಗೂ ನಿರ್ಮಾಪಕಿ ಅನು ರಂಜನ್ ಕಾಣಿಸಿಕೊಂಡಿದ್ದಾರೆ. ಗುರುವಾರ ನಡೆದ ಪಾರ್ಟಿಯೊಂದರ ಫೋಟೋ ಇದಾಗಿದೆ. ಈ ಪಾರ್ಟಿಯಲ್ಲಿ ಆಯೇಶಾ ಜುಲ್ಕಾ, ಸಚಿನ್ ತೆಂಡೂಲ್ಕರ್, ತುಷಾರ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು   ಉಪಸ್ಥಿತರಿದ್ದರು.

ಅನು ರಂಜನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅತಿ ಹೆಚ್ಚು ಖುಷಿ ಎಂದು ಶೀರ್ಷಿಕೆ ಹಾಕಿ ಅನು ರಂಜನ್ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಐಶ್ವರ್ಯ ರೈ ಬಚ್ಚನ್ ಸೆಲ್ಫಿ ತೆಗೆಯುತ್ತಿರೋದನ್ನು ನೀವು ನೋಡ್ಬಹುದು. ಒಂದು ಫೋಟೋದಲ್ಲಿ ಅಭಿಷೇಕ್, ವೃಂದಾ, ಐಶ್ವರ್ಯ ಮತ್ತು ಅನು ರಂಜನ್ ಇದ್ರೆ ಇನ್ನೊಂದು ಫೋಟೋದಲ್ಲಿ ಆಯೇಶಾ ಜುಲ್ಕಾ ಕೂಡ ಫೋಟೋಕ್ಕೆ ಪೋಸ್ ನೀಡಿದ್ದಾರೆ. 

ಎರಡು ಜಡೆ ಸೇರಿದ್ರೆ ಜಗಳ ಆಗಲ್ಲ, ಬಹುತೇಕ ಗಂಡಸರು ಇದಕ್ಕೆ ಕಾರಣ : ಭಾಗ್ಯಲಕ್ಷ್ಮಿ ಅತ್ತೆ

ಅಭಿಷೇಕ್ ಮತ್ತು ಐಶ್ವರ್ಯ ದೂರವಾಗಿದ್ದಾರೆ ಎಂಬ ಸುದ್ದಿ, ಅನಂತ್ ಅಂಬಾನಿ ಮದುವೆ ಸಮಯದಲ್ಲಿ ಜೋರು ಪಡೆದಿತ್ತು. ಮದುವೆಗೆ ಐಶ್ವರ್ಯ ಹಾಗೂ ಅಭಿಷೇಕ್ ಬೇರೆಯಾಗಿ ಬಂದಿದ್ದರು. ಅದಾದ್ಮೇಲೆ, ಐಶ್ವರ್ಯ ಜೊತೆ ಯಾವುದೇ ವಿದೇಶಿ ಪ್ರವಾಸದಲ್ಲಿ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ. ಆರಾಧ್ಯ ಬರ್ತ್ ಡೇಯಲ್ಲೂ ಅಭಿಷೇಕ್ ಗೈರಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದ್ರೆ ಅಭಿಷೇಕ್ ಹಾಗೂ ಐಶ್ವರ್ಯ, ಆರಾಧ್ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಅದ್ರ ವಿಡಿಯೋಗಳು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. 

ಅಭಿಷೇಕ್ ಮತ್ತು ಐಶ್ ಎಲ್ಲಿಯೂ ತಮ್ಮ ವೈಯಕ್ತಿಕ ವಿಷ್ಯವನ್ನು ಬಿಟ್ಟುಕೊಟ್ಟಿಲ್ಲ. ನಾನು ಇನ್ನೂ ಎಂಗೇಜ್ ಎಂದೇ ಉಂಗುರ ತೋರಿಸಿ ಆರಂಭದಲ್ಲಿಯೇ ಅಭಿಷೇಕ್ ಹೇಳಿದ್ದರು. ಐಶ್ ಕೂಡ ಉಂಗುರ ತೋರಿಸಿದ್ದರು. ಆದ್ರೆ, ಬೇರೆಯಾದ ಬಗ್ಗೆಯಾಗ್ಲಿ, ಒಟ್ಟಿಗಿರುವ ಬಗ್ಗೆಯಾಗ್ಲಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಸೋಶಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಮಾತ್ರ ಇಬ್ಬರು ದೂರವಾಗಿದ್ದಾರೆಂಬ ಸುದ್ದಿ ಹರಿದಾಡ್ತಾನೆ ಇದೆ. ಅನೇಕರು ಇವರಿಬ್ಬರು ಬೇರ್ಪಡಲು ಜಯಾ ಬಚ್ಚನ್ ಕಾರಣ ಅಂದ್ರೆ ಮತ್ತೆ ಕೆಲವರು ದಸ್ವಿ ನಟಿ ನಿಮ್ರತ್ ಕೌರ್ ಕಾರಣ ಎಂದಿದ್ದರು. ಮಿತಿ ಮೀರಿದ ಪೋಸ್ಟ್ ನೋಡಿ ಮೊನ್ನೆಯಷ್ಟೇ ಅಮಿತಾಬ್ ಬಚ್ಚನ್ ಸಿಡಿದಿದ್ದರು. ಸುಮ್ಮನಿರಿ ಅಂತ ಪೋಸ್ಟ್ ಹಂಚಿಕೊಂಡಿದ್ದರು.  ಸಿನಿಮಾ ಪ್ರಚಾರದ ವೇಳೆ ಅಭಿಷೇಕ್ ಕೂಡ, ಸಂಸಾರ ಖುಷಿಯಾಗಿರಬೇಕು ಅಂದ್ರೆ ಏನ್ ಮಾಡ್ಬೇಕು ಎಂಬ ಗುಟ್ಟನ್ನು ಹಂಚಿಕೊಂಡಿದ್ದರು.

ಸಿಹಿ ಅಂತ್ಯಸಂಸ್ಕಾರ ಸೀನ್‌ಗೆ ವೀಕ್ಷಕರ ವಿರೋಧ, ರಿಯಲ್ ಅಮ್ಮನನ್ನು ತರಾಟೆಗೆ ತೆಗೆದುಕೊಂಡ

ಅನು ರಂಜನ್ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಐಶ್ ಹಾಗೂ ಅಭಿ ನಗು ನೋಡಿ ನೆಮ್ಮದಿಯಾಗಿದೆ. ಇಬ್ಬರು ಹೀಗೆ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಬ್ಬರೂ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದಾರೆ.

 
 
 
 
 
 
 
 
 
 
 
 
 
 
 

A post shared by Anu Ranjan (@anuranjan1010)

Latest Videos
Follow Us:
Download App:
  • android
  • ios