Asianet Suvarna News Asianet Suvarna News

bollywood : ರಿಂಗ್ ತೋರಿಸಿ still married ಎಂದ ಅಭಿಷೇಕ್..! ಡಿವೋರ್ಸ್ ಬಗ್ಗೆ ಮೊದಲ ಮಾತು

ಬಾಲಿವುಡ್ ಜೋಡಿ ಅಭಿಷೇಕ್ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿಮಾನಿಗಳಿಗೆ ಸ್ವಲ್ಪ ನೆಮ್ಮದಿಯಾಗಿದೆ. ಅಭಿಷೇಕ್ ಬಚ್ಚನ್ ಇದೇ ಮೊದಲ ಬಾರಿ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ರಿಂಗ್ ತೋರಿಸಿ ಅವರು ಹೇಳಿದ್ದೇನು ಗೊತ್ತಾ?
 

abhishek bachchan breaks silence on news of divorce with aishwarya rai flaunts wedding ring roo
Author
First Published Aug 12, 2024, 2:59 PM IST | Last Updated Aug 12, 2024, 2:59 PM IST

ಬಾಲಿವುಡ್ ಡಿವೋರ್ಸ್ (Bollywood Divorce) ವಿಷ್ಯದಲ್ಲಿ ಟ್ರೆಂಡ್ (Trend ) ನಲ್ಲಿರೋದು ನಟಿ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan). ಕಳೆದ ಒಂದು ವರ್ಷದಿಂದ ಅಭಿ – ಐಶ್ ವಿಚ್ಛೇದನದ ವಿಷ್ಯ ಚರ್ಚೆಯಲ್ಲಿದ್ರೂ ಈಗ ಮೂರ್ನಾಲ್ಕು ತಿಂಗಳಿಂದ ಈ ಸುದ್ದಿಗೆ ಮತ್ತಷ್ಟು ಹೈಪ್ ಸಿಕ್ಕಿದೆ. ಇಬ್ಬರ ಮಧ್ಯೆ ಏನೂ ಸರಿ ಇಲ್ಲ, ಡಿವೋರ್ಸ್ ತೆಗೆದುಕೊಳ್ತಿದ್ದಾರೆ ಎಂಬ ಗುಸುಗುಸು ಕೇಳಿ ಬರ್ತಿರುವ ಸಮಯದಲ್ಲೇ ಅಭಿಷೇಕ್ ಬಚ್ಚನ್ ಮೌನ ಮುರಿದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅಭಿಷೇಕ್, ತಮ್ಮ ಮದುವೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಡಿವೋರ್ಸ್ ಬಗ್ಗೆ ಅಭಿಷೇಕ್ ಹೇಳಿದ್ದೇನು? : ಯುಕೆ ಮೀಡಿಯಾ ಒಂದಕ್ಕೆ ನೀಡಿದ ಸಂದರ್ಶನದಲ್ಲಿ  ನಟ ಅಭಿಷೇಕ್ ಬಚ್ಚನ್, ನೀವು ನಮ್ಮ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದೀರಿ. ಈ ಎಲ್ಲಾ ಪ್ರಶ್ನೆಗಳು ತಪ್ಪಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಮಯದಲ್ಲಿ ತಮ್ಮ ರಿಂಗ್ ತೋರಿಸಿ, ನಾನಿನ್ನು ವಿವಾಹಿತ ಎಂದಿದ್ದಾರೆ. ನನಗೆ ಈ ವಿಷ್ಯದ ( ಡಿವೋರ್ಸ್) ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಬೇಸರದ ವಿಷ್ಯ ಅಂದ್ರೆ ಸಂಗತಿಗಳು ಮಿತಿ ಮೀರುತ್ತಿವೆ. ಜನರು ಏಕೆ ಹೀಗೆ ಮಾಡ್ತಿದ್ದಾರೆ ಅನ್ನೋದು ನನಗೆ ಗೊತ್ತು. ಜನರಿಗೆ ಸ್ಟೋರಿ ಫೈಲ್ ಮಾಡ್ಬೇಕು. ಹಾಗಾಗಿ ಇಂಥ ಸುದ್ದಿ ಹುಡುಕ್ತಾರೆ. ನೋ ಪ್ರಾಬ್ಲಂ. ನಾವು ಸೆಲೆಬ್ರಿಟಿಗಳು, ಇದನ್ನು ಅರ್ಥ ಮಾಡಿಕೊಳ್ತೇವೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. 

ತುಂಡುಡುಗೆ ತೊಡಲ್ಲ ಎಂದಿದ್ದಕ್ಕೆ ಶಾರುಖ್‌ ಜೊತೆ ಮೂವೀ ತಪ್ತು ಎಂದ ಕೆಜಿಎಫ್‌ ನಟಿ!

ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಫೇಕ್ ವಿಡಿಯೋ ಒಂದು ವೈರಲ್ ಆಗಿತ್ತು. ಅದ್ರ ನಂತ್ರ ಅಭಿಷೇಕ್, ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಹಾಗೂ ಐಶ್ವರ್ಯ ರೈ ಅನೇಕ ದಿನಗಳಿಂದ ಒಟ್ಟಿಗೆ ಮಾಧ್ಯಮದ ಮುಂದೆ ಬಂದಿಲ್ಲ. ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ಜನರಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿತ್ತು.

ಐಶ್ವರ್ಯ – ಅಭಿಷೇಕ್ ವಿಚ್ಛೇದನಕ್ಕೆ ಜಯಾ ಬಚ್ಚನ್ ಕಾರಣ ಎನ್ನುತ್ತಿದ್ದ ಜನರು, ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ ಇಬ್ಬರೂ ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬುದನ್ನು ಕನ್ಫರ್ಮ್ ಮಾಡ್ಕೊಂಡು ಬಿಟ್ಟಿದ್ದರು. ಮದುವೆಯಲ್ಲಿ ಐಶ್ ಹಾಗೂ ಮಗಳು ಆರಾಧ್ಯ ಒಟ್ಟಿಗೆ ಬಂದ್ರೆ ಅಭಿಷೇಕ್, ಅಪ್ಪ – ಅಮ್ಮ, ಸಹೋದರಿ ಜೊತೆ ಬಂದಿದ್ದರು. ಇದ್ರ ಮಧ್ಯೆ, ಡಿವೋರ್ಸ್ ಪೋಸ್ಟ್ ಗೆ ಲೈಕ್ ಮಾಡಿದ್ದ ಅಭಿಷೇಕ್ ಮತ್ತಷ್ಟು ಚರ್ಚೆ ಹುಟ್ಟು ಹಾಕಿದ್ದರು. ಇಬ್ಬರು ಡಿವೋರ್ಸ್ ತೆಗೆದುಕೊಳ್ಳೋದು ನಿಶ್ಚಿತ. ಹಾಗಾಗಿಯೇ ಅಭಿಷೇಕ್ ಈ ಪೋಸ್ಟ್ ಲೈಕ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಾದ್ಮೇಲೆ ಲಂಡನ್ ಪ್ರವಾಸಕ್ಕೆ ಐಶ್ವರ್ಯ ಮತ್ತು ಆರಾಧ್ಯ ಮಾತ್ರ ಹೋಗಿ ಬಂದಿದ್ದರು. ಪ್ಯಾರಿಸ್ ನಲ್ಲಿ ಅಭಿಷೇಕ್ ಮಾತ್ರ ಕಾಣಿಸಿಕೊಂಡಿದ್ದರು. ಇವೆಲ್ಲವೂ ದಂಪಾತ್ಯ ಬಿರುಕಿಗೆ ಕೆಲ ಸಾಕ್ಷ್ಯ ಎಂದುಕೊಂಡಿದ್ದರು ಅಭಿಮಾನಿಗಳು. ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಸಾಕಷ್ಟು ಗೊಂದಲದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮತ್ತಷ್ಟು ಅನುಮಾನ ಸೃಷ್ಟಿಸಿದ್ದರು. ಆದ್ರೆ ಅಭಿಷೇಕ್ ಆಗ್ಲಿ, ಐಶ್ವರ್ಯ ಆಗ್ಲಿ ಇಲ್ಲ ಬಿಗ್ ಬಿ ಕುಟುಂಬಸ್ಥರಾಗ್ಲಿ ಈವರೆಗೆ ಅಭಿ – ಐಶ್ ವಿಚ್ಛೇದನದ ಬಗ್ಗೆ ಮಾತನಾಡಿರಲಿಲ್ಲ.

'ಅಂಬಾನಿ ಸೊಸೆಯೇ ತಾಳಿ ಹಾಕೊಂಡು ತಿರುಗಾಡ್ತಾರೆ.. ನಿಮಗೇನಾಗಿದೆ?..' ಸುಶ್ಮಿತಾ ಜಗ್ಗಪ್ಪ ಲುಕ್‌ಗೆ ನೆಟ್ಟಿಗರ ಕಿಡಿ!

ಇದೇ ಮೊದಲ ಬಾರಿ ಅಭಿಷೇಕ್, ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತ್ರ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಭಿಷೇಕ್ ಅಭಿನಯದ ಕಿಂಗ್ ಚಿತ್ರ ಶೀಘ್ರವೇ ತೆರೆಗೆ ಬರಲಿದೆ. ಇದ್ರಲ್ಲಿ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ನಟಿಸಿದ್ದಾರೆ. 

Latest Videos
Follow Us:
Download App:
  • android
  • ios