ತುಂಬಾ ಮೈ ತೋರಿಸುವ, ಬಿಕಿನಿ ಥರದ ತುಂಡುಡುಗೆ ತೊಡಲ್ಲ ಎಂದಿದ್ದಕ್ಕೆ ಶಾರುಖ್‌ ಖಾನ್‌ ಜೊತೆಗೆ ತಾನು ನಟಿಸಬೇಕಿದ್ದ ಒಂದು ಸಿನಿಮಾ ಆಫರೇ ಹೊರಟುಹೋಯ್ತಂತೆ ಈ ನಟಿಗೆ. 

ರವೀನಾ ಟಂಡನ್, ಇತ್ತೀಚಿನ ಸಂದರ್ಶನವೊಂದರಲ್ಲಿ, ಶಾರುಖ್ ಖಾನ್ ಅವರೊಂದಿಗಿನ ಸಿನಿಮಾಕ್ಕೆ ತಾನು ನೋ ಹೇಳಿದ ಬಗ್ಗೆ ಮಾತನಾಡಿದ್ದಾಳೆ. ಶಾರುಖ್ ಜೊತೆಗಿನ ಪ್ರಾಜೆಕ್ಟ್ ಏಕೆ ವರ್ಕ್ ಔಟ್ ಆಗಲಿಲ್ಲ ಎಂದು ಫಿಲ್ಮ್ ಫೇರ್‌ಗೆ ಹೇಳಿದ್ದಾಳೆ. ಚಿತ್ರದ ಹೆಸರನ್ನು ಬಹಿರಂಗಪಡಿಸಿಲ್ಲ ಅಥವಾ ಇತರ ವಿವರಗಳನ್ನು ನೀಡಿಲ್ಲ. ಚಿತ್ರದಲ್ಲಿ ಆಕೆಯ ಡ್ರೆಸ್‌ ಹೇಗಿರುತ್ತದೆ ಎಂದು ನಿರ್ದೇಶಕರು ಹೇಳಿದರಂತೆ. ಅದನ್ನು ಕೇಳಿ ರವೀನಾಗೆ ಮುಜುಗರ ಆಯ್ತಂತೆ. ಅಂದರೆ ಆ ಸೀನ್‌ ಅದು ಅಷ್ಟೊಂದು ಆಕ್‌ವರ್ಡ್‌ ಅಥವಾ ಮುಜುಗರ ತರಿಸುವಂಥದಾಗಿತ್ತಂತೆ.

"ಶಾರುಖ್ ಖಾನ್ ಜೊತೆಗಿನ ಆ ಚಿತ್ರಕ್ಕೆ ನಾನು ಬಹುತೇಕ ಸಹಿ ಹಾಕಿದ್ದೆ. ಆದರೆ ಅದರಲ್ಲಿ ನಾನು ಧರಿಸಬೇಕಿದ್ದ ಡ್ರೆಸ್‌ ನಿಜವಾಗಿಯೂ ವಿಚಿತ್ರವಾಗಿತ್ತು. ಅದು ನನಗೆ ಆರಾಮದಾಯಕ ಎನಿಸಲಿಲ್ಲ. ಇಲ್ಲ ಕ್ಷಮಿಸಿ, ಇದು ನನ್ನಿಂದ ಧರಿಸಲು ಸಾಧ್ಯವಿಲ್ಲ ಎಂದೆ. ಹಾಗೆ ಆ ಫಿಲಂ ಆಫರ್‌ ಕೈಬಿಟ್ಟುಹೋಯಿತುʼ ಅಂತಾಳೆ ರವೀನಾ. ಆದರೆ ಇದು ಶಾರುಖ್‌ಗೆ ತಿಳಿದಾಗ ಆತ ಏನು ಹೇಳಿದ ಅಂತಲೂ ರವೀನಾ ಹೇಳಿದ್ದಾಳೆ.

ʼಆರ್‌ ಯು ಮ್ಯಾಡ್?‌ ಈಗ ಯಾಕೆ ಬೇಡ ಎನ್ನುತ್ತಿದ್ದೀರಿ? ಎಂದು ಶಾರುಖ್‌ ಖಾನ್‌ ನನ್ನಲ್ಲಿ ಕೇಳಿದರು. ನಾನು ಅದು ಅಷ್ಟೊಂದು ವಿಚಿತ್ರವಾಗಿದೆ, ನನಗೆ ನನ್ನ ಬಗ್ಗೆಯೇ ಫನ್ನಿ ಅನ್ನಿಸಬಹುದು ಎಂದು ಹೇಳಿದೆ. ನಾವು ಅದಾಗಲೇ ಜಾದು ಎಂಬ ಅದ್ಭುತ ಸಂಗೀತವಿರುವ ಸಿನಿಮಾ ಮಾಡುತ್ತಿದ್ದೆವು. ಜಮಾನಾ ದೀವಾನಾ ಮಾಡುತ್ತಿದ್ದೆವು. ಆಗೆಲ್ಲ ನಾವು ನಿಜವಾಗಿಯೂ ಜೊತೆಯಾಗಿರುತ್ತಿದ್ದೆವು. ಶಾರುಖ್‌ ಜೊತೆಗೆ ಕೆಲಸ ಮಾಡಲು ಅತ್ಯಂತ ಯೋಗ್ಯ ವ್ಯಕ್ತಿ. ಹಾಸ್ಯಮಯ, ಬೆಚ್ಚಗಿನ ವ್ಯಕ್ತಿತ್ವದ, ಸಂಭಾವಿತ ಸಹನಟ ಆತ. ನಾನು ಆ ಡ್ರೆಸ್‌ ಧರಿಸಲು ಸಾಧ್ಯವಿಲ್ಲ ಎಂದು ನಾನು ಅವನಿಗೆ ಹೇಳಿದೆ. ಆತ ಒಪ್ಪಿದʼ ಎಂದು ರವೀನಾ ಹೇಳುತ್ತಾಳೆ.

ರವೀನಾ ಮತ್ತು ಶಾರುಖ್ 1995ರ ಚಲನಚಿತ್ರ ಜಮಾನಾ ದೀವಾನಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇಬ್ಬರೂ ನಟಿಸಬಹುದಾದ ಇನ್ನಷ್ಟು ಸಿನಿಮಾಗಳ ಅವಕಾಶಗಳು ತಪ್ಪಿದ್ದವಂತೆ. ಯಶ್ ಚೋಪ್ರಾ ಅವರ ಡರ್‌ನಲ್ಲಿ ಜೂಹಿ ಚಾವ್ಲಾ ನಿರ್ವಹಿಸಿದ ಪಾತ್ರವನ್ನು ರವೀನಾಗೆ ಪ್ರಸ್ತಾಪಿಸಲಾಗಿತ್ತು. ಕೆಲವು ದೃಶ್ಯಗಳಲ್ಲಿನ ಅಸ್ವಸ್ಥತೆಯಿಂದಾಗಿ ರವೀನಾ ಅದನ್ನು ನಿರಾಕರಿಸಿದ್ದರು. ಡರ್ ಶಾರುಖ್‌ಗೆ ಮಹತ್ವದ ಪಾತ್ರವಾಗಿತ್ತು. ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುವ ನಾಯಕನ ಚಿತ್ರಣ ಅದಾಗಿತ್ತು. ಈ ಸಿನಿಮಾದಿಂದ ಶಾರುಖ್‌ಗೆ ಮಹತ್ವದ ಬ್ರೇಕ್‌ ಸಿಕ್ಕಿತ್ತು.

ಬೆಂಗಳೂರಲ್ಲೇ ಡೆಲಿವರಿ ಆದ್ಮೇಲೂ ಬೇಬಿ ಬಂಪ್​ನಲ್ಲಿ ಕಾಣಿಸಿಕೊಂಡ ದೀಪಿಕಾ? ತಲೆ ಕೆಡಿಸಿಕೊಂಡ ಫ್ಯಾನ್ಸ್​

ಇತ್ತೀಚೆಗೆ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ರವೀನಾ ಟಂಡನ್ ಪ್ರತಿಕ್ರಿಯಿಸಿದ್ದರು. "ನನ್ನ ವೃತ್ತಿಜೀವನವನ್ನು ನಾಶಮಾಡಲು ಅನೇಕರು ಪಿತೂರಿಗಳನ್ನು ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಕಾರಣವಿದೆ. ಅದೇ ನಾನು ಅವರ ಮಲಗುವ ಕೋಣೆಗೆ ಹೋಗಲಿಲ್ಲ ಎನ್ನುವುದು. ಕೇವಲ ಹಾಸಿಗೆಯ ಸುಖಕ್ಕಾಗಿ ನಾಯಕಿಯರ ವೃತ್ತಿ ಜೀವನವನ್ನೇ ಹಾಳು ಮಾಡುವ ಬ್ಯಾಚ್ ಬಾಲಿವುಡ್‌ನಲ್ಲಿ ಈಗಲೂ ಇದೆ" ಎಂದು ನಟಿ ಚಿತ್ರರಂಗದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದರು.

ಸುಶಾಂತ್ ರಜಪೂತ್ ನಿಧನದ ನಂತರ, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಮತ್ತು ಕಾಸ್ಟಿಂಗ್ ಕೌಚ್‌ನಿಂದ ಪ್ರತಿಭೆ ಇರುವ ನಟರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ದೊಡ್ಡ ಕುಟುಂಬದಿಂದ ಬಂದವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ ಎಂದು ಕೂಡ ರವೀನಾ ಸೆನ್ಸೇಷನಲ್ ಕಾಮೆಂಟ್‌ ಮಾಡಿದ್ದರು.

ಅಬ್ಬಬ್ಬಾ! ಇವರೆಲ್ಲಾ ಬೇರೊಬ್ಬರ ಪತಿಯನ್ನೇ ಕದ್ದುಬಿಟ್ಟಿದ್ರಾ? ಬಾಲಿವುಡ್​ ಬೆಡಗಿಯರ ರಹಸ್ಯ ಬಯಲಿಗೆ!

ಇತ್ತೀಚೆಗೆ ಮುಂಬಯಿಯಲ್ಲಿ ರವೀನಾ ಟಂಡನ್ ಅವರು ಪ್ರಯಾಣಿಸುತ್ತಿದ್ದ ಕಾರು ಮೂವರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಕಾರಿನ ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ರವೀನಾ ಹೊರಗೆ ಬಂದು ತಮ್ಮ ಚಾಲಕನನ್ನು ಪಾರು ಮಾಡುವುದಕ್ಕೆ ಪ್ರಯತ್ನಿಸಿ ಜನರಲ್ಲಿ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದರು.