Asianet Suvarna News Asianet Suvarna News

ಕೇನ್ಸ್‌ನಲ್ಲಿ ಕೈಗೆ ಗಾಯ ಮಾಡ್ಕೊಂಡ ಐಶ್ವರ್ಯಾ ವಾಕ್‌ ಮಾಡಲು ಸಹಾಯ ಮಾಡಿದ ಮಗಳು ಆರಾಧ್ಯ, ನೆಟ್ಟಿಗರ ಮೆಚ್ಚುಗೆ

ಅಂತಾರಾಷ್ಟ್ರೀಯ ಕೇನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಬಾರಿ ಐಶ್ವರ್ಯಾ ರೈ ಜೊತೆ ಮಗಳು ಆರಾಧ್ಯ ಬಚ್ಚನ್ ಸಹ ಕಾಣಿಸಿಕೊಂಡರು. ಐಶ್ವರ್ಯ ಜೊತೆ ಎಲ್ಲರ ಗಮನ ಸೆಳೆದಿದ್ದು ಮಗಳು ಆರಾಧ್ಯಳ ಮೆಚ್ಯೂರ್ಡ್ ವರ್ತನೆ. ಕೈಗೆ ಗಾಯಗೊಂಡಿದ್ದ ಐಶ್ವರ್ಯಾ ನಡೆಯಲು ಮಗಳು ಆರಾಧ್ಯ ಕೈ ಹಿಡಿದುಕೊಂಡು ನೆರವಾಗಿದ್ದಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Aaradhya Bachchan guides injured Aishwarya Rai down the stairs at Cannes 2024 Vin
Author
First Published May 17, 2024, 5:20 PM IST

ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವವನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಅದರಂತೆ ಮೇ 17ರಿಂದ ಮೇ 25ರ ವರೆಗೆ ಇದರ 77ನೇ ವಾರ್ಷಿಕೋತ್ಸವ ನಡೆಯುತ್ತಿದೆ. ಹಲವು ದೇಶಗಳ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಆಗಮಿಸಿದ್ದಾರೆ. ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.  ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಸಹ ಬಾರಿಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೈ ಮುರ್ಕೊಂಡ್ರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಮಾರ್ಜಾಲ ನಡಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಐಶ್ವರ್ಯಾ ರೈ ಪ್ರತಿ ಬಾರಿ ಕೇನ್ಸ್‌ಗೆ ಬಂದಾಗಲೂ ಅವರ ಸ್ಟೈಲಿಶ್ ಉಡುಪು ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿ ಐಶ್‌ ಗೌನ್ ಉದ್ದವಾದ ಸ್ಟೈಲಿಶ್ ಮಾದರಿಯಲ್ಲಿದ್ದು, ಬೃಹತ್ ಚಿನ್ನದ ಹೂವುಗಳ ಡಿಸೈನ್‌ ಹೊಂದಿತ್ತು. ಇದು ಮೆಟ್ ಗಾಲಾ ಥೀಮ್ 'ದಿ ಗಾರ್ಡನ್ ಆಫ್ ಟೈಮ್‌'ಗೆ ಸೂಕ್ತವಾಗಿ ಒಪ್ಪುವಂತಿತ್ತು. ಫಲ್ಗುಣಿ ಮತ್ತು ಶೇನ್ ವಿನ್ಯಾಸಗೊಳಿಸಿದ ಬೃಹತ್ ಗೌನ್ ರಫಲ್ಡ್ ಸ್ಲೀವ್ಸ್‌ ಮುಂಭಾಗದಲ್ಲಿ ಗೋಲ್ಡನ್ ಮಾದರಿಯನ್ನು ಹೊಂದಿದೆ. ಜೊತೆಗೆ ಐಶ್ವರ್ಯ ದೊಡ್ಡ ಗೋಲ್ಡನ್ ಕಿವಿಯೋಲೆಗಳನ್ನು ಧರಿಸಿ ರೆಟ್ರೋ ಫೀಲ್ ನೀಡಿದರು. 

ಐಶ್ವರ್ಯ ರೈ ಬಚ್ಚನ್‌ ಕೈಗೆ ಗಾಯ; ವಿಶ್ವ ಸುಂದರಿ ಐಶ್‌ಗೆ ಆಗಿದ್ದೇನು?

ಈ ಬಾರಿ ಐಶ್ವರ್ಯಾ ರೈ ಜೊತೆ ಮಗಳು ಆರಾಧ್ಯ ಬಚ್ಚನ್ ಸಹ ಕಾಣಿಸಿಕೊಂಡರು. ಐಶ್ವರ್ಯ ಜೊತೆ ಎಲ್ಲರ ಗಮನ ಸೆಳೆದಿದ್ದು ಮಗಳು ಆರಾಧ್ಯಳ ಮೆಚ್ಯೂರ್ಡ್ ವರ್ತನೆ. ಕೈಗೆ ಗಾಯಗೊಂಡಿದ್ದ ಐಶ್ವರ್ಯಾ ನಡೆಯಲು ಮಗಳು ಆರಾಧ್ಯ ಕೈ ಹಿಡಿದುಕೊಂಡು ನೆರವಾದರು.

ಐಶ್ವರ್ಯಾ ರೈ ಬಚ್ಚನ್ ಧರಿಸಿರುವಂತೆ ಆರಾಧ್ಯ ಬಚ್ಚನ್‌ ಸಹ ಮ್ಯಾಚಿಂಗ್ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಐಶ್ವರ್ಯಾ ವಾಕ್ ಮಾಡಲು ಸಹಾಯ ಮಾಡಿದರು. ಆರಾಧ್ಯ ತನ್ನ ತಾಯಿ ಐಶ್ವರ್ಯಾ ರೈಗೆ ಕೇನ್ಸ್‌ನಲ್ಲಿ ಸಹಾಯ ಮಾಡುತ್ತಿರುವ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಒಂದು ವೀಡಿಯೊದಲ್ಲಿ, ಅವಳು ತಾಯಿಯ ಕೈಯನ್ನು ಹಿಡಿದು ಎಚ್ಚರಿಕೆಯಿಂದ ಅವಳ ಪಕ್ಕದಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಮತ್ತೊಂದು ವೀಡಿಯೊದಲ್ಲಿ ಅವಳು ತನ್ನ ತಾಯಿಯನ್ನು ಹೋಟೆಲ್‌ನ ಮೆಟ್ಟಿಲುಗಳ ಕೆಳಗೆ ಇಳಿಯಲು ಸಹಾಯ ಮಾಡುತ್ತಾಳೆ.

ಐಶ್ವರ್ಯ- ಕತ್ರಿನಾ ಇಬ್ಬರಲ್ಲಿ ಸುಂದರಿಯರು ಯಾರು ಎಂದಾಗ ಮಾಜಿ ಲವರ್​ ಸಲ್ಮಾನ್​ ಖಾನ್​ ಹೇಳಿದ್ದೇನು?

12 ವರ್ಷದ ಆರಾಧ್ಯ ಕೆಲಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು, 'ಆರಾಧ್ಯ ನಿಜವಾಗಿಯೂ ಮಗಳಾಗಿ ತನ್ನ ಕರ್ತವ್ಯ ಮಾಡುತ್ತಿದ್ದಾಳೆ' ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು, 'ಎಲ್ಲಿ ಐಶ್ವರ್ಯಾ ಹೋದರೂ ಅಲ್ಲಿ ಆರಾಧ್ಯ ಇರುತ್ತಾಳೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಬ್ಬರು, 'ಐಶ್ವರ್ಯಾ ಮಗಳನ್ನು ಎಷ್ಟು ಉತ್ತಮವಾಗಿ ಬೆಳೆಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.

2002ರಲ್ಲಿ ತಮ್ಮ ಚಿತ್ರ 'ದೇವದಾಸ್'ಗಾಗಿ ಕಾಣಿಸಿಕೊಂಡಾಗಿನಿಂದ ಐಶ್ವರ್ಯಾ ಕೇನ್ಸ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಸಂಜಯ್ ಲೀಲಾ ಬನ್ಸಾಲಿ ಚಲನಚಿತ್ರವನ್ನು ಪ್ರತಿಷ್ಠಿತ ಉತ್ಸವದಲ್ಲಿ ಪ್ರದರ್ಶಿಸಲಾಯಿತು. ನಂತರ ಐಶ್ವರ್ಯಾ ತಮ್ಮ ಸಹನಟ ಶಾರುಖ್ ಖಾನ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ವಾಕ್‌ ಮಾಡಿದ್ದರು. ಈ ಸಂದರ್ಭದಲ್ಲಿ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸುಂದರವಾದ ಗೋಲ್ಡನ್ ಸೀರೆಯನ್ನು ಅವಳು ಧರಿಸಿದ್ದರು.

ನಟಿ ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ ತಮಿಳು ಚಿತ್ರ ಪೊನ್ನಿಸ್ ಸೆಲ್ವನ್ ನಲ್ಲಿ ಕಾಣಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ನಂದಿನಿ ಮತ್ತು ಊಮೈರಾಣಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Latest Videos
Follow Us:
Download App:
  • android
  • ios