Asianet Suvarna News Asianet Suvarna News

ಐಶ್ವರ್ಯ ರೈ ಬಚ್ಚನ್‌ ಕೈಗೆ ಗಾಯ; ವಿಶ್ವ ಸುಂದರಿ ಐಶ್‌ಗೆ ಆಗಿದ್ದೇನು?

ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಐಶ್ವರ್ಯಾ ರೈ ಬಚ್ಚನ್ ಫಿಲಂ ಫೆಸ್ಟಿವಲ್‌ಗೆ ತೆರಳಿದ್ದಾರೆ. ಐಶ್ವರ್ಯ ಕೈಗೆ ಏನಾಗಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

injured Aishwarya Rai leave for Cannes Film Festival mrq
Author
First Published May 16, 2024, 5:14 PM IST | Last Updated May 16, 2024, 5:14 PM IST

ಮುಂಬೈ: ಬಾಲಿವುಡ್‌ ಬಿ ಟೌನ್ ಸುಂದರಿ, ನೀಲಿ ಕಣ್ಣಿನ ಚೆಲುವೆ ಐಶ್ವರ್ಯಾ ರೈ ಬಚ್ಚನ್ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಮಗಳು ಆರಾಧ್ಯ ಜೊತೆಯಲ್ಲಿ ಫ್ರೆಂಚ್ ರಿವೇರಾದತ್ತ ಬುಧವಾರ ರಾತ್ರಿ ಪ್ರಯಾಣ ಬೆಳೆಸಿದ್ದಾರೆ. ರಿವೇರಾದ ಕ್ಯಾನೇಸ್ ಫಿಲಂ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಭಾಗಿಯಾಗಲಿದ್ದಾರೆ.

ಬುಧವಾರ ರಾತ್ರಿ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಪಾಪರಾಜಿಗಳು ಫೋಟೋ ಕ್ಲಿಕ್ ಮಾಡಲು ಶುರು ಮಾಡಿದರು. ಆದ್ರೆ ಐಶ್ವರ್ಯ ಕೈಗೆ ಬ್ಯಾಂಡೇಜ್ ಹಾಕಿಕೊಂಡು ಬರುತ್ತಿರೋದನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಕೈಗೆ ಬ್ಯಾಂಡೇಜ್ ಹಾಕಿಕೊಂಡು ಕೆಳಗೆ ಇಳಿದ ಐಶ್ವರ್ಯ ನಗುತ್ತಲೇ ಏರ್ಪೋರ್ಟ್ ಒಳಗೆ ಹೊರಟರು. ಆರಾಧ್ಯ ತಾಯಿಯ ಕೈಯಲ್ಲಿದ್ದ ಬ್ಯಾಗ್‌ ತೆಗೆದುಕೊಂಡರು. ನಂತರ ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಕ್ಯಾಮೆರಾಗಳತ್ತ ಕೈ ಬೀಸಿ ಹೊರಟರು

ಐಶ್ವರ್ಯ ಅವರ ಏರ್‌ಪೋರ್ಟ್ ಲುಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಐಶ್ವರ್ಯಾಗೆ ಏನಾಯ್ತು ಎಂದು ಅಭಿಮಾನಿಗಅಳು ಕೇಳುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಭಕ್ತಿ ಸಿರೀಸ್‌ಗಾಗಿ ಹೊಸ ಒಟಿಟಿ ವೇದಿಕೆ ಆರಂಭಿಸಿದ ಅಡಲ್ಟ್‌ OTT ಸೈಟ್‌ Ullu

ಐಶ್ವರ್ಯಾ ರೈ ಬಚ್ಚನ್ ಲಾಂಗ್ ಲೆಂಥ್ ಬ್ಲ್ಯಾಕ್ ಔಟ್‌ಫಿಟ್, ಮೇಲೆ ಕೋಟ್ ಧರಿಸಿ ಸಿಂಪಲ್ ಆಗಿ ಕ್ಲಾಸಿಕ್ ಆಗಿ ಕಾಣಿಸುತ್ತಿದ್ದರು. ಐಶ್ವರ್ಯಾ ರೈ ಬಚ್ಚನ್ ಟ್ರಾವೆಲ್ ಪಾರ್ಟನರ್ ಮಗಳು ಆರಾಧ್ಯ, ಬ್ಲ್ಯೂ ಹುಡ್ಡಿ ಮತ್ತು ಬ್ಲ್ಯಾಕ್ ಪ್ಯಾಂಟ್ ಧರಿಸಿದ್ರು.

ಮೊದಲ ಬಾರಿಗೆ 2002ರಲ್ಲಿ ಐಶ್ವರ್ಯ ರೈ ಬಚ್ಚನ್ ಕ್ಯಾನೇಸ್ ಫಿಲಂ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಮೊದಲ ರೆಡ್ ಕಾರ್ಪೆಟ್‌ನಲ್ಲಿ ನೀತಾ ಲುಲ್ಲಾ ಸೀರೆ ಧರಿಸ, ಭಾರೀ ಚಿನ್ನಾಭರಣಗಳನ್ನು ಐಶ್ ಧರಿಸಿದ್ದರು. ಈ ವೇಳೆ ಶಾರೂಖ್ ಖಾನ್ ಜೊತೆಗಿನ ದೇವದಾಸ್ ಸಿನಿಮಾದ ಪ್ರೀಮಿಯರ್ ಶೋಗಳಲ್ಲಿಯೂ ಸೀರೆ ಜೊತೆಗೆ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ಈ ಚಿತ್ರಕ್ಕೆ ಸಂಜಯ್ ಲೀನಾ ಬನ್ಸಾಲಿ ಆಕ್ಷನ್ ಕಟ್ ಹೇಳಿದ್ದರು.

ವೀರಭದ್ರ ದೇಗುಲಕ್ಕೆ ಸೈಲೆಂಟಾಗಿ 12.5 ಲಕ್ಷ ರೂ. ದೇಣಿಗೆ ನೀಡಿದ ಜ್ಯೂನಿಯರ್​ ಎನ್​ಟಿಆರ್​

ಈ ಬಾರಿಯ ಕ್ಯಾನೇಸ್‌ನಲ್ಲಿ ನಟಿಯರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಳಿಪಾಲ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಕಿಯಾರಾ ಅಡ್ವಾಣಿ ಭಾಗಿಯಾಗಲಿದ್ದಾರೆ. ತಾರಕ್ ಮೆಹ್ತಾ ಉಲ್ಟಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟಿ ದೀಪ್ತಿ ಸಾಧ್ವನಿ ಮೊದಲ ಬಾರಿಗೆ ರೆಡ್‌ ಕಾರ್ಪೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios