ಬಾಲಿವುಡ್ ನಟ ಆಮಿರ್ ಖಾನ್ ಅವರ ಬಾಂದ್ರಾ ನಿವಾಸಕ್ಕೆ 25ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕುತೂಹಲ ಕೆರಳಿಸಿದೆ. ಭೇಟಿಯ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಅಭಿಮಾನಿಗಳಲ್ಲಿ ಕಳವಳ ಮೂಡಿದೆ. 

'ತಾರೇ ಜಮೀನ್ ಪರ್'ಸಿನಿಮಾದ ಖುಷಿಯಲ್ಲಿರುವ ಬಾಲಿವುಡ್‌ ನಟ ಆಮಿರ್ ಖಾನ್ ಅವರ ಬಾಂದ್ರಾ ನಿವಾಸಕ್ಕೆ 25ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕುತೂಹಲ ಕೆರಳಿಸಿದೆ. ಆಮೀರ್ ಖಾನ್ ಅವರ ಮನೆಯಿಂದ ಬಸ್ ಮತ್ತು ಹಲವಾರು ಪೊಲೀಸ್ ವಾಹನಗಳು ಹೊರಟು ಹೋಗುತ್ತಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಅವರ ಭೇಟಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ವೀಡಿಯೊಗಳಲ್ಲಿ, ಪೊಲೀಸ್ ವಾಹನಗಳು ನಟನ ಮನೆಯಿಂದ ಹೊರಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಬಾಲಿವುಡ್ ಉದ್ಯಮದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೆಲ ವರದಿಗಳ ಪ್ರಕಾರ ಮುಂಬೈ ಪೊಲೀಸರ ತಂಡ ಅಮೀರ್ ಖಾನ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಭೇಟಿ ನೀಡಿದೆ. ಆದರೆ ಈ ವೀಡಿಯೊದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ಅವರ ಅಭಿಮಾನಿಗಳಲ್ಲಿ ಈ ವಿಚಾರ ಕಳವಳವನ್ನು ಹುಟ್ಟುಹಾಕಿವೆ.

ಏತನ್ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ಅವರ ಚಿತ್ರವನ್ನು ವೀಕ್ಷಿಸಲು ಐಪಿಎಸ್ ಅಧಿಕಾರಿಗಳು ನಟನ ಮನೆಯಲ್ಲಿದ್ದರು ಎಂದು ಅವರ ಅಭಿಮಾನಿಗಳು ಊಹಿಸಿದ್ದಾರೆ. ಆಮಿರ್ ಈ ಹಿಂದೆ ತಮ್ಮ 'ಸೀತಾರೆ ಜಮೀನ್ ಪರ್' ಚಿತ್ರವನ್ನು ಬಾಲಿವುಡ್ ಮತ್ತು ಹಲವಾರು ಪ್ರಮುಖ ಸೆಲೆಬ್ರಿಟಿಗಳಿಗಾಗಿ ಶೋ ಆಯೋಜಿಸಿದ್ದರು. ಹಾಗೆಯೇ ಸಚಿವರು ಮತ್ತು ಪ್ರೇಕ್ಷಕರಿಗಾಗಿ ಅವರು ಹಲವಾರು ವಿಶೇಷ ಪ್ರದರ್ಶನ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದರು.

ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಸೀತಾರೆ ಜಮೀನ್ ಪರ್ ಬಿಡುಗಡೆಯಾಯಿತು. ಈ ಚಿತ್ರವು ಬ್ಯಾಸ್ಕೆಟ್‌ಬಾಲ್ ತರಬೇತುದಾರನ ಕತೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ, ಜೆನಿಲಿಯಾ ದೇಶ್‌ಮುಖ್‌ ಸೇರಿದಂತೆ ಸುಮಾರು 10 ಹೊಸ ಕಲಾವಿದರು ನಟಿಸಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ನಲ್ಲಿ ಈ ಸಿನಿಮಾವನ್ನು ಆರ್.ಎಸ್. ಪ್ರಸನ್ನ ನಿರ್ದೇಶಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ರಸ್ತೆ ತೆರಿಗೆ ಪಾವತಿಸಲು ವಿಫಲವಾದ ಕಾರಣ ಅಮೀರ್‌ ಖಾನ್ ಹಾಗೂ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿ ನೋಂದಾಯಿಲಾಗಿದ್ದ ಎರಡು ರೋಲ್ಸ್ ರಾಯ್ಸ್ ಕಾರುಗಳಿಗೆ ಇತ್ತೀಚೆಗೆ ಕ್ರಮವಾಗಿ 18 ಲಕ್ಷ ಮತ್ತು 19 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಗಿತ್ತು. ಈ ಎರಡೂ ಕಾರುಗಳನ್ನು ಪ್ರಸ್ತುತ ಬೆಂಗಳೂರಿನ ಸ್ಥಳೀಯ ಉದ್ಯಮಿ ರಾಜಕಾರಣಿ ಯೂಸುಫ್ ಷರೀಫ್ ಅವರು ಖರೀದಿ ಮಾಡಿದ್ದರು. ಆದರೆ ದಾಖಲೆಗಳನ್ನು ಬದಲಿಸದ ಕಾರಣ ಬಾಲಿವುಡ್ ನಟರ ಕಾರುಗಳಿಗೆ ದಂಡ ವಿಧಿಸಲಾಗಿದೆ ಎಂದು ದೊಡ್ಡ ಸುದ್ದಿಯಾಗಿತ್ತು.

View post on Instagram