ಆಮೀರ್, ಶಾರೂಖ್, ಸಲ್ಮಾನ್- ಅಂಬಾನಿ ಸಮಾರಂಭದಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಬಾರದೆ ಒದ್ದಾಡಿದ 'ಖಾನ್'ದಾನ್
RRRನ ಜನಪ್ರಿಯ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಲು ಬಾರದೆ ಒದ್ದಾಡಿದ ಬಾಲಿವುಡ್‌ನ ಮೂವರು ಖಾನ್‌ಗಳು ಕಡೆಗೆ ತಮ್ಮದೇ ಚಿತ್ರಗಳ ಸ್ಟೆಪ್ಸ್ ಹಾಕಿ ಮೇಕ್ ಓವರ್ ಮಾಡಿದ ಘಟನೆ ಅಂಬಾನಿ ಕುಟುಂಬದ ವಿವಾಹ ಪೂರ್ವ ಸಮಾರಂಭದಲ್ಲಿ ನಗು ತರಿಸಿತು.
ಬಾಲಿವುಡ್‌ನ ಮೂವರು ಖಾನ್‌ಗಳು - ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಗಾಲಾದ ಎರಡನೇ ದಿನದಂದು ಪ್ರದರ್ಶನಗಳನ್ನು ನೀಡಲು ಒಟ್ಟಿಗೆ ಸೇರಿದರು. ಮೂವರೂ ಸಂಗೀತಕ್ಕೆ ಕುಣಿಯುತ್ತಿರುವ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು.
ಶಾರುಖ್ ಖಾನ್, ಸಲ್ಮಾನ್ ಮತ್ತು ಅಮೀರ್ ವರ್ಷಗಳ ನಂತರ ಒಟ್ಟಿಗೆ ಬಂದಿದ್ದಾರೆ. ಈವೆಂಟ್‌ಗಾಗಿ ಶಾರುಖ್ ಮತ್ತು ಸಲ್ಮಾನ್ ಖಾನ್ ಕಪ್ಪು ಕುರ್ತಾ ಮತ್ತು ಪೈಜಾಮಾ ಧರಿಸಿದ್ದರೆ, ಅಮೀರ್ ಹಸಿರು ಉಡುಗೆಯನ್ನು ಆರಿಸಿಕೊಂಡಿದ್ದಾರೆ.
ನಾಟು ನಾಟು ಬಾರದೆ ಅಮೀರ್, ಸಲ್ಮಾನ್, ಶಾರುಖ್ ಒದ್ದಾಟ
ಕ್ಲಿಪ್‌ನಲ್ಲಿ, ಅವರು ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಅಭಿನಯದ ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಹುಕ್ ಸ್ಟೆಪ್ ಮಾಡುತ್ತಿರುವುದು ಕಾಣಬಹುದು. ಆದರೆ, ಆ ಸ್ಟೆಪ್ ಹಾಕಲು ಅವರಿಂದ ಸಾಧ್ಯವಾಗಿಲ್ಲ. ಇದು ತಮ್ಮಿಂದ ಆಗಲ್ಲ ಎಂದು ತೋರುತ್ತಲೇ ಅವರೆಲ್ಲರೂ ಪರಸ್ಪರರ ಪ್ರಸಿದ್ಧ ಹಾಡುಗಳ ಸ್ಟೆಪ್ಸ್ ಹಾಕಿ ಪ್ಯಾಚಪ್ ಮಾಡಲು ಪ್ರಯತ್ನಿಸಿದರು.
ಅಮೆರಿಕದಲ್ಲಿ ಸುಖಾಸುಮ್ಮನೆ ಗುಂಡಿನ ದಾಳಿಗೆ ಬಲಿಯಾದ ಡ್ಯಾನ್ಸರ್ ಅಮರನಾಥ್ ಘೋಷ್ ಯಾರು?
ವೀಡಿಯೊದಲ್ಲಿ ಸಲ್ಮಾನ್, ಅಮೀರ್ ಮತ್ತು ಶಾರುಖ್ ಅವರು ದಿಲ್ ಸೇ ಚಿತ್ರದ ಚೈಯಾ ಚೈಯಾ, ಮುಜ್ಸೆ ಶಾದಿ ಕರೋಗಿಯಿಂದ ಜೀನೆ ಕೆ ಹೈ ಚಾರ್ ದಿನ್ ಮತ್ತು ರಂಗ್ ದೇ ಬಸಂತಿಯಿಂದ ಮಸ್ತಿ ಕಿ ಪಾಠಶಾಲಾ ಹಾಡಿನ ಟ್ರೆಂಡೀ ಸ್ಟೆಪ್ಸ್‌ಗಳನ್ನು ಹಾಕಿದರು.
ಸಲ್ಮಾನ್, ಶಾರುಖ್ ಏಕವ್ಯಕ್ತಿ ಪ್ರದರ್ಶನ
ಹಮ್ ಆಪ್ಕೆ ಹೈ ಕೌನ್, ಸಲಾಮ್-ಇ-ಇಷ್ಕ್ ಮತ್ತು ಕುಚ್ ಕುಚ್ ಹೋತಾ ಹೈ ಸೇರಿದಂತೆ ಹಲವು ಹಿಟ್ ಚಿತ್ರಗಳ ಹಾಡುಗಳಿಗೆ ಸಲ್ಮಾನ್ ಒಬ್ಬರೇ ನೃತ್ಯ ಮಾಡಿದ್ದಾರೆ. ಒಂದು ಕ್ಲಿಪ್‌ನಲ್ಲಿ, ಶಾರುಖ್ ಪಠಾನ್‌ನ ಝೂಮ್ ಜೋ ಪಠಾನ್ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಈ ಫೋಟೋದಲ್ಲಿರುವ ಕನ್ನಡತಿ, ಖ್ಯಾತ ನಟಿಯನ್ನು ಗುರುತಿಸಿ..
ಅನಂತ್-ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಗಣ್ಯರು
ಉದ್ಯಮಿ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಈ ವರ್ಷ ಜುಲೈನಲ್ಲಿ ವಿವಾಹವಾಗಲಿದ್ದಾರೆ. ಸಧ್ಯ ನಡೆಯುತ್ತಿರುವ ವಿವಾಹಪೂರ್ವ ಸಮಾರಂಭದಲ್ಲಿ ಶಾರುಖ್, ಸಲ್ಮಾನ್ ಮತ್ತು ಅಮೀರ್ ಅಲ್ಲದೆ, ಹಲವಾರು ಬಾಲಿವುಡ್ ತಾರೆಯರು ಕಾಣಿಸಿಕೊಂಡರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್, ವರುಣ್ ಧವನ್, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಸೇರಿದ್ದಾರೆ.