ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಚಿತ್ರರಂಗ್ಕಕೆ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗುವ ಮೊದಲೇ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಬಾಲಿವುಡ್ ನಟ ಆಮೀರ್ ಖಾನ್(Aamir Khan) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಆಮೀರ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿರುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹಾಡಿ ಹೊಗಳಿ, ಟ್ರೋಲಿಗರಿಗೆ ಆಹಾರವಾಗಿದ್ದರು. ಇದರ ಬೆನ್ನಲ್ಲೇ ಈಗ ಆಮೀರ್ ಖಾನ್ ಸಿನಿಮಾರಂಗಕ್ಕೆ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದ ಬಗ್ಗೆ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಆಮೀರ್ ಖಾನ್ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದರಂತೆ. ಕಳೆದ ಎರಡು ವರ್ಷಗಳ ಹಿಂದೆ ಅಂದರೆ ಕೋವಿಡ್ ಸಮಯದಲ್ಲಿ ಆಮೀರ್ ಖಾನ್ ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದರಂತೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೂ ಮೊದಲೇ ಚಿತ್ರರಂಗದಿಂದ ದೂರ ಸರಿಯಬೇಕು ಎಂದುಕೊಂಡಿದ್ದೆ ಎಂದು ಆಮೀರ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಎಲ್ಲಿಯೂ ಹೇಳಿಲ್ಲ, ಯಾಕೆಂದರೆ ಇದು ಕೂಡ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮಾರ್ಕೆಟಿಂಗ್ ಪ್ಲಾನ್ ಎನ್ನುತ್ತಾರೆ ಎನ್ನುವ ಕಾರಣಕ್ಕೆ ಬಹಿರಂಗ ಪಡಿಸಿಲ್ಲ ಎಂದಿದ್ದಾರೆ.
ಈ ಬಗ್ಗೆ ಕುಟುಂಬದವರ ಜೊತೆ ಮತ್ತು ಮಾಜಿ ಪತ್ನಿ ಕಿರಣ್ ರಾವ್ ಬಳಿ ಹೇಳಿಕೊಂಡಿದ್ದರಂತೆ. ಆದರೆ ಆಮೀರ್ ಖಾನ್ ನಿರ್ಧಾರ ಸರಿಯಲ್ಲ ಎಂದು ಕಿರಣ್ ರಾವ್(Kiran Rao) ವಿವರಿಸುವ ಜೊತೆಗೆ ಕಣ್ಣೀರಾಕಿದ್ದರು ಎಂದು ಮಿಸ್ಟರ್ ಪರ್ಫೆಕ್ಷನಿಸ್ಟ್ ಬಹಿರಂಗ ಪಡಿಸಿದ್ದಾರೆ. 'ಈ ನಿರ್ಧಾರದ ಬಳಿಕ ಮಗಳು ಇರಾ ಖಾನ್(Ira Khan) ಜೊತೆ ಕೆಲಸ ಮಾಡಲು ಪ್ರಾರಂಭ ಮಾಡಿದೆ' ಎಂದು ಆಮೀರ್ ಖಾನ್ ಹೇಳಿದ್ದಾರೆ. ಈ ನಿರ್ಧಾರ ತಪ್ಪು ಎಂದು ಮಕ್ಕಳು ಸಹ ಹೇಳಿದರು ಎಂದಿದ್ದಾರೆ.
'ಕಳೆದ 30 ವರ್ಷಗಳಲ್ಲಿ ಅವರೊಂದಿಗೆ ಕಳೆದ ಸಮಯಕ್ಕಿಂತ ಮೂರು ತಿಂಗಳಲ್ಲಿ ಕಳೆದ ಸಮಯ ಹೆಚ್ಚು ಎಂದು ಮಕ್ಕಳು ಹೇಳಿದರು' ಎಂದು ಆಮೀರ್ ಖಾನ್ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
'ನಾನು ಸಿನಿಮಾರಂಗದಿಂದ ದೂರ ಸರಿಯುತ್ತೇನೆ. ಆದರೆ ಇದು ಯಾರಿಗೂ ತಿಳಿದಿಲ್ಲ. ನಾನು ಮೊದಲ ಬಾರಿಗೆ ಹೇಳುತ್ತಿದ್ದೇನೆ. ಇದು ನಿಮಗೆ ಶಾಕ್ ಎನಿಸಬಹುದು. ನಾನು ಇನ್ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದು ನನ್ನ ಮನೆಯವರಿಗೆ ತಿಳಿಸಿದ್ದೆ. ನಾನು ಯಾವುದೇ ಚಿತ್ರಗಳನ್ನು ನಿರ್ಮಿಸುವುದಿಲ್ಲ, ನಟಿಸುವುದಿಲ್ಲ ಇದ್ಯಾವುದನ್ನು ನಾನು ಮಾಡಲು ಬಯಸಲ್ಲ ಎಂದು ಹೇಳಿದ್ದೆ. ನಾನು ನಿಮ್ಮ ಜೊತೆ (ಕಿರಣ್ ಮತ್ತು ಅವಳ ಪೋಷಕರು, ನನ್ನ ಮಕ್ಕಳು, ಕುಟುಂಬದ) ಸಮಯ ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದೆ. ಶಾಕ್ ಆದರು ಆದರೆ ಆಗ ಯಾರು ನನ್ನ ಜೊತೆ ವಾದ ಮಾಡಲಿಲ್ಲ. ಆಗ ನಾನು ಜನರಿಗೆ ತಿಳಿಸಿಬೇಕೆಂದುಕೊಂಡಿದ್ದೆ. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯಾಗಲಿರುವ ಕಾರಣ ತಿಳಿಸಿಲ್ಲ. ಇದೊಂದು ಮಾರ್ಕೆಟಿಂಕ್ ತಂತ್ರ ಎನ್ನುತ್ತಾರೆ ಕಾರಣಕ್ಕೆ ಬಹಿರಂಗ ಪಡಿಸಿಲ್ಲ' ಎಂದಿದ್ದಾರೆ.
'ಮೂರ್ನಾಲ್ಕು ವರ್ಷಗಳ ಬಳಿಕ ನನ್ನ ಸಿನಿಮಾ ಬರುತ್ತಿದೆ. ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಬಳಿಕ ನಾನು ಏನು ಮಾಡುತ್ತೇನೆ ಎಂದು ಯಾರಿಗೂ ತಿಳಿದಿಲ್ಲ. ಅಷ್ಟರೊಳಗೆ ನಾನು ಚಿತ್ರರಂಗ ತೊರೆಯುತ್ತೇನೆ ಇದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಏನನ್ನು ಹೇಳಬಾರದು ಎಂದು ನಿರ್ಧರಿಸಿ ಮೂರು ತಿಂಗಳು ಕಳೆಯಿತು. ಒಂದು ದಿನ ಮಕ್ಕಳು ನೀನು ತುಂಬಾ ಅತಿರೇಕದ ವ್ಯಕ್ತಿ, ಹೀಗೆ ಮಾಡಬೇಡಿ ಎಂದು ಹೇಳಿದರು. ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳಬೇಕು ಅದು ಉತ್ತಮ ಎಂದರು'
ನನ್ನ ಹೃದಯದಲ್ಲಿ ಈಗಾಗಲೇ ಸಿನಿಮಾ ತೊರೆದಿದ್ದೀನಿ
'ನನ್ನ ಹೃದಯದಲ್ಲಿ ನಾನು ಸಿನಿಮಾಗಳನ್ನು ತೊರೆದಿದ್ದೇನೆ. ನಾನು ತಪ್ಪು ಮಾಡುತ್ತಿದ್ದೇನೆ ಎಂದು ನನ್ನ ಮಕ್ಕಳು ಮತ್ತು ಕಿರಣ್ ನನಗೆ ವಿವರಿಸಿದರು. ಕಿರಣ್ ಅಳುತ್ತ ಹೇಳಿದಳು. ನಾನು ನಿನ್ನನ್ನು ನೋಡಿದಾಗ ನಿಮ್ಮೊಳಗೆ ವಾಸಿಸುವ ಚಲನಚಿತ್ರಗಳನ್ನು ನಾನು ನೋಡುತ್ತೇನೆ. ನೀವೀಗ ಏನು ಹೇಳುತ್ತಿದ್ದೀರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಎರಡು ವರ್ಷಗಳಲ್ಲಿ ಏನೇನೋ ಆಗಿದೆ. ನಾನು ಚಿತ್ರರಂಗ ತೊರೆದು ಮತ್ತೆ ಬಂದಿದ್ದೇನೆ' ಎಂದಿದ್ದಾರೆ.
ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇದು ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ.
