Asianet Suvarna News Asianet Suvarna News

ಅಪ್ಪನ ಬಳಿ ಹಣ ಇರ್ಲಿಲ್ಲ, ಅವರು ಕಷ್ಟ ನೋಡಿದ್ರೆ ತುಂಬಾ ನೋವಾಗ್ತಿತ್ತು; ತಂದೆ ನೆನೆದು ಆಮೀರ್ ಭಾವುಕ

ಬಾಲಿವುಡ್ ಸ್ಟಾರ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ತನ್ನ ತಂದೆಯ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ತಂದೆಯ ಬಳಿ ಹಣ ಇರ್ರಿಲ್ಲ ಎಂದು ಆಮೀರ್ ಖಾನ್ ಹೇಳಿದ್ದಾರೆ. 

Aamir Khan recalls his father's financial struggle sgk
Author
First Published Dec 5, 2022, 2:41 PM IST

ಬಾಲಿವುಡ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇಂದು ಸ್ಟಾರ್ ಆಗಿ ಖ್ಯಾತಿಗಳಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಆಮೀರ್ ಖಾನ್. ಬುದ್ಧಿವಂತ ನಟ ಆಮೀರ್ ಖಾನ್‌ಗೆ ಸಿನಿಮಾದ ಮೇಲೆ ಅಪಾರ ಪ್ರೀತಿ ಮತ್ತು ಬದ್ದತೆ. ಇಂದು ಸ್ಟಾರ್ ಆಗಿ ಹೊರ ಹೊಮ್ಮಿರುವ ಆಮೀರ್ ಖಾನ್ ಅವರ ತಂದೆ ಆರ್ಥಿಕವಾಗಿ ಎದುರಿಸಿದ ಸಮಸ್ಯೆಯನ್ನು ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್ ಖಾನ್ ತನ್ನ ತಂದೆ, ನಿರ್ಮಾಪಕ ತಾಹಿರ್ ಹುಸೇನ್ ಎದುರಿಸಿದ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ.    

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಆಮೀರ್ ಖಾನ್ 10 ವರ್ಷದವರಾಗಿದ್ದಾಗ ಹೇಗೆ ಆರ್ಥಕ ಸಂಕಷ್ಟಕ್ಕೆ ಸಿಲುಕಿದರು ಎನ್ನುವುದನ್ನು ನೆನಪಿಸಿಕೊಂಡರು. ತಂದೆ ಸಿನಿಮಾಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಬಡ್ಡಿ ಹೆಚ್ಚಾಗಿ ಕಷ್ಟ ಅನುಭವಿಸಬೇಕಾಯಿತು ಎಂದು ಆಮೀರ್ ಖಾನ್ ಹೇಳಿದ್ದಾರೆ. 
ಈ ಬಗ್ಗೆ ಮಾತನಾಡಿ ಅಮೀರ್ ಖಾನ್ ಭಾವುಕರಾದರು. 'ನಮ್ಮ ತಂದೆಯನ್ನು ನೋಡುವುದೇ ನಮಗೆ ತೊಂದರೆಯ ಕೆಲಸವಾಗಿತ್ತು. ಯಾಕೆಂದರೆ ಅವರು ತುಂಬಾ ಸರಳ ವ್ಯಕ್ತಿ. ಇಷ್ಟು ಸಾಲ ಮಾಡಬಾರದಿತ್ತೇನೋ ಎಂಬ ಪ್ರಜ್ಞೆ ಅವರಿಗಿರಲಿಲ್ಲ' ಎಂದು ಆಮೀರ್ ಖಾನ್ ಹೇಳಿದ್ದಾರೆ. 'ತಂದೆಯ ಕೆಲವು ಸಿನಿಮಾಗಳು ಸಕ್ಸಸ್ ಕಂಡಿದ್ದರೂ ಸಹ ಅವರ ಬಳಿ ಹಣ ಇರಲಿಲ್ಲ. ಹಾಗಾಗಿ ಅವರು ಕಷ್ಟದಲ್ಲಿರುವುದನ್ನು ನೋಡಿದರೆ ನಮಗೆ ನೋವಾಗುತ್ತಿತ್ತು. ಏಕೆಂದರೆ ಸಾಲ ಕೊಟ್ಟವರು ನಮ್ಮಗೆ ಕರೆ ಮಾಡುತ್ತಿದ್ದರು. ಅವರು ಫೋನ್‌ನಲ್ಲಿ ಜಗಳವಾಡುವುದನ್ನು ನಾವು ಕೇಳಿದ್ದೇವೆ. ನಾನೇನು ಮಾಡಲಿ, ನನ್ನ ಚಿತ್ರ ನಿಂತಿದೆ. ನಟರಿಗೆ ಡೇಟ್ಸ್ ಕೊಡಲು ಹೇಳಿ ಎನ್ನುತ್ತಿದ್ದರು' ಎಂದು ಆಮೀರ್ ಖಾನ್ ತಂದೆಯ ಕಷ್ಟವನ್ನು ನೆನೆದು ಭಾವುಕರಾದರು. 

35 ವರ್ಷಗಳ ನಟನೆಗೆ ಬ್ರೇಕ್ ಘೋಷಿಸಿದ ಮಿ.ಪರ್ಫೆಕ್ಷನಿಸ್ಟ್ ಆಮೀರ್ ಖಾನ್! ಮುಂದೇನು?

'ಆರ್ಥಿಕವಾಗಿ ಎಷ್ಟೇ ಕಷ್ಟವಿದ್ದರೂ ತಂದೆ ಶಾಲೆಯ ಶುಲ್ಕವನ್ನು ಯಾವಾಗಲೂ ಕಟ್ಟುದ್ದಿದ್ದರು ಎಂದು ಆಮೀರ್ ಖಾನ್ ಹೇಳಿದರು. ತಾಯಿಗಾಗಿ ಉದ್ದದ ಪ್ಯಾಂಟ್‌ಗಳನ್ನು ಖರೀದಿಸುತ್ತಿದ್ದರು. ಅದನ್ನು ಮಡಚಿ ಹೆಚ್ಚು ಕಾಲ ಬಳಸಬಹುದು ಎಂದು ಅದನ್ನೇ ಖರೀದಿಸುತ್ತಿದ್ದರು' ಎಂದು ಆಮೀರ್ ಖಾನ್ ತಂದೆಯ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 

Ira Khan: ಆಮೀರ್‌ ಖಾನ್‌ ಪುತ್ರಿ ಇರಾಳ ನಿಶ್ಚಿತಾರ್ಥದ ಇನ್ನಷ್ಟೂ ಫೋಟೋಗಳು ವೈರಲ್‌

ಆಮೀರ್ ಖಾನ್ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ. ಸಾಲು ಸಾಲು ಸೋಲಿನಂದ ಕಂಗೆಟ್ಟ ಆಮೀರ್ ಖಾನ್ ನಟನೆಯಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ. ಸದ್ಯ ನಿರ್ಮಾಣದ ಕಡೆ ಗಮನ ಹರಿಸುವುದಾಗಿ ಆಮೀರ್ ಖಾನ್ ಬಹಿರಂಗ ಪಡಿಸಿದ್ದರು. ಕೊನೆಯದಾಗಿ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೀನಾಯ ಸೋಲು ಕಂಡಿತು. ಸದ್ಯ ಆಮೀರ್ ಖಾನ್ ಕಾಜೋಲ್ ನಟನೆಯ ಸಲಾಂ ವೆಂಕಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫನಾ ಸಿನಿಮಾ ಬಳಿಕ ಕಾಜೋಲ್ ಮತ್ತು ಆಮೀರ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.  
 

Follow Us:
Download App:
  • android
  • ios