Asianet Suvarna News Asianet Suvarna News

ಕುಂಕುಮ ಇಟ್ಟು ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್; ಫೋಟೋ ವೈರಲ್

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿ ಆರತಿ ಬೆಳೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Aamir Khan performs Kalasha pooja with his ex wife Kiran Rao photo viral sgk
Author
First Published Dec 9, 2022, 10:54 AM IST

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಹಾಗಂತ ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾರಂಗದಿಂದ ದೂರ ಆಗಿಲ್ಲ. ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. ಆಮೀರ್ ಖಾನ್ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ, ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದೆ ಎಂದು ಈ ಹಿಂದೆ ಆಮೀರ್ ಖಾನ್ ಹೇಳಿದ್ದ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಆಮೀರ್ ಖಾನ್ ಬ್ಯಾನ್ ಮಾಡಬೇಕೆಂದು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆಮೀರ್ ಖಾನ್ ಹೇಳಿಕೆ ಅವರ ಸಿನಿಮಾಗಳ ಮೇಲು ಪರಿಣಾಮ ಬೀರಿತ್ತು. ಆಮೀರ್ ಖಾನ್‌ಗೆ ದೇಶ ವಿರೋಧಿ ಪಟ್ಟ ಕಟ್ಟಲಾಯಿತು. ಇತ್ತೀಚಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಸದ್ಯ ನಿರ್ಮಾಣದಲ್ಲಿ ಬ್ಯುಸಿ ಇರುವ ಆಮೀರ್ ಖಾನ್ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿ ಗಮನ ಸೆಳೆದಿದ್ದಾರೆ. 

ಆಮೀರ್ ಖಾನ್ ಕಳಶ ಪೂಜೆ ಮಾಡಿದ್ದು ತಮ್ಮ ಪ್ರೊಡಕ್ಷನ್ಸ್ ಹೌಸ್ ಆಫೀಸ್‌ನಲ್ಲಿ. ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ ಆಮೀರ್ ಖಾನ್. ಆಮೀರ್ ಖಾನ್‌ಗೆ ಮಾಜಿ ಪತ್ನಿ ಕಿರಣ್ ರಾವ್ ಸಾಥ್ ಮಾಡಿದ್ದಾರೆ. ಕಳಶ ಪೂಜೆ ಮಾಡಿ, ಆರತಿ ಬೆಳಗಿದ ಆಮೀರ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಮೀರ್ ಖಾನ್‌ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಆಮೀರ್ ಖಾನ್ ಪೂಜೆಯ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ಸಿನಿಮಾದ ನಿರ್ದೇಶಕ ಅದ್ವೈತ್ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಆಮೀರ್ ಆಫೀಸ್ ಪೂಜೆಯಲ್ಲಿ ಅನೇಕ ಮಂದಿ ಭಾಗಿಯಾಗಿದ್ದು ಅನೇಕರು ಫೋಟೋ ಹಂಚಿಕೊಂಡಿದ್ದಾರೆ. 

ಪೂಜೆಯಲ್ಲಿ ಆಮೀರ್ ಖಾನ್ ಡೆನಿಮ್ ಪ್ಯಾಂಟ್ ಮತ್ತು ಸ್ವೆಟ್ ಶರ್ಟ್ ಧರಿಸಿದ್ದಾರೆ. ನೆಹರು ಟೋಪಿ ಧರಿಸಿ ಬಿಳಿ ಶಲ್ಯಾ ಹಾಕಿದ್ದಾರೆ. ಬಲೂನ್ ಹಾಗೂ ಹೂಗಳಿಂದ ಆಮೀರ್ ಕಾನ್ ಕಚೇರಿಯನ್ನು ಡೆಕೋರೇಟ್ ಮಾಡಲಾಗಿದೆ. ಕಳಶ ಪೂಜೆ ಮತ್ತು ಆರತಿ ಬೆಳಗುವಾಗ ಮಾಜಿ ಪತ್ನಿ ಕಿರಣ್ ರಾವ್ ಪಕ್ಕದಲ್ಲಿ ನಿಂತು ಸಾಥ್ ನೀಡಿದ್ದಾರೆ. ಪಕ್ಕಾ ಹಿಂದೂ ಅಂತೆ ಪೂಜೆ ಮಾಡಿರುವ ಆಮೀರ್ ಖಾನ್ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. 

ಅಪ್ಪನ ಬಳಿ ಹಣ ಇರ್ಲಿಲ್ಲ, ಅವರು ಕಷ್ಟ ನೋಡಿದ್ರೆ ತುಂಬಾ ನೋವಾಗ್ತಿತ್ತು; ತಂದೆ ನೆನೆದು ಆಮೀರ್ ಭಾವುಕ

ಅನೇಕ ಕಾಮೆಂಟ್ ಮಾಡಿ 'ಈ ಫೋಟೋ ಎಷ್ಟು ಅದ್ಭುತವಾಗಿದೆ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ಈ ಫೋಟೋ ಹೃದಯಸ್ಪರ್ಶಿಯಾಗಿದೆ'  ಎಂದು ಹೇಳುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಕಾಮೆಂಟ್ 'ವಾವ್, ಆಮೀರ್ ಮತ್ತು ಕಿರಣ್ ರಾವ್ ನಿಮ್ಮಬ್ಬನ್ನು ಹೀಗೆ ನೋಡಿ ತುಂಬಾ ತುಂಬಾ ಖುಷಿ ಆಯ್ತು' ಎಂದಿದ್ದಾರೆ. ಮತ್ತೋರ್ವ 'ನಿಬ್ಬರನ್ನು ತುಂಬಾ ಇಷ್ಟ ಪಡುತ್ತೀನಿ' ಎಂದು ಹೇಳಿದ್ದಾರೆ. 

ಅಂದಹಾಗೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಕಳೆದ ವರ್ಷ 2021ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. ಇಬ್ಬರೂ ದಾಂಪತ್ಯ ಜೀವನ ಕಡಿದು ಕೊಂಡರೂ ಉತ್ತವಾದ ಸಂಬಂಧ ಹೊಂದಿದ್ದಾರೆ. ಅಂದಹಾಗೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಆವರದ್ದು 15 ವರ್ಷದ ದಾಂಪತ್ಯ ಜೀವನ. ಇಬ್ಬರಿಗೂ ಆಜಾದ್ ಖಾನ್ ಎನ್ನುವ 11 ವರ್ಷದ ಮಗನಿದ್ದಾನೆ. ಮಗನಿಗಾಗಿ ಆಮೀರ್ ಮತ್ತು ಕಿರಣ್ ರಾವ್ ಇಬ್ಬರೂ ಪೋಷಕರಾಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಮೊದಲ ಪತ್ನಿಯ ಮಗಳು ಇರಾ ಖಾನ್ ನಿಶ್ಚಿತಾರ್ಥದ ಸಂಭ್ರಮದಲ್ಲೂ ಇಡೀ ಕುಟುಂಬ ಭಾಗಿಯಾಗಿತ್ತು. ಇಬ್ಬರೂ ಮಾಜಿ ಪತ್ನಿಯರು ಸಹ ನಿಶ್ಚಿತಾರ್ಥದ ಸಮಾರಂಭದಲ್ಲಿ ಭಾಗಿಯಾಗಿದ್ದರು.

Ira Khan: ಆಮೀರ್‌ ಖಾನ್‌ ಪುತ್ರಿ ಇರಾಳ ನಿಶ್ಚಿತಾರ್ಥದ ಇನ್ನಷ್ಟೂ ಫೋಟೋಗಳು ವೈರಲ್‌

ಆಮೀರ್ ಖಾನ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಹೀನಾಯ ಸೋಲಿನಿಂದ ಆಮೀರ್ ಖಾನ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಸದ್ಯ ನಿರ್ಮಾಣನದಲ್ಲಿ ಬ್ಯುಸಿಯಾಗಿರುವ ಆಮೀರ್ ಖಾನ್ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿ ಮುಂದಿನ ಸಿನಿಮಾ ಪ್ರಾಜೆಕ್ಟ್ ಪ್ರಾರಂಭಿಸಲಿದ್ದಾರೆ.  

Follow Us:
Download App:
  • android
  • ios