ಬಾಲಿವುಡ್ ನಟ ಅಮೀರ್ ಖಾನ್ ಮುಂಬೈನ ಬೀದಿಗಳಲ್ಲಿ ಭಿಕ್ಷುಕನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್ ತಮ್ಮ ಮುಂಬರುವ ಚಿತ್ರಕ್ಕಾಗಿ ಆದಿಮಾನವನಂತೆ ವೇಷ ಧರಿಸಿದ್ದರು ಎಂದು ತಿಳಿದುಬಂದಿದೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂಬೈ: ಕಳೆದ ಗುರುವಾರ ಮುಂಬೈನ ಜನನಿಬಿಡ ಪ್ರದೇಶಗಳಲ್ಲಿ ಬೀದಿಗಳಲ್ಲಿ ಮೈಮೇಲೆ ಒಂದರ ಮೇಲೊಂದು ಅಂಗಿ ಕೆದರಿದ ಕೂದಲು ಮುಖ ಕಾಣದಷ್ಟು ಗಡ್ಡ ಮೀಸೆ ಬಿಟ್ಟು ಮೈಮೇಲೆ ಕೊಳೆ ತುಂಬಿದ ಭಿಕ್ಷುಕನ ರೀತಿಯಲ್ಲಿ ಒಬ್ಬ ವ್ಯಕ್ತಿ ತಿರುಗಾಡಿದ ಸುದ್ದಿಗಳು ಹರಿದಾಡಿದವು. ಬೀದಿಯಲ್ಲಿ ತಿರುಗಾಡಿದ ಈ ವ್ಯಕ್ತಿಯನ್ನ ಯಾರು ಸಹ ಗುರುತಿಸಲಿಲ್ಲ. ಭಿಕ್ಷುಕನೋ ಮಾನಸಿಕ ಅಸ್ವಸ್ಥನೋ, ಹುಚ್ಚನೋ ಇರಬೇಕೆಂದು ಸಮೀಪಕ್ಕೂ ಜನರು ಹೋಗಿಲ್ಲ. ಆದರೆ ಯಾವಾಗ ಆ ವ್ಯಕ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಲಾಯಿತು ಆಗ ಅಭಿಮಾನಿಗಳು, ಅಯ್ಯೋ ಕಣ್ಮುಂದೆ ಹೋದ್ರೂ ಗುರುತಿಸಲಾಗಲಿಲ್ಲ ಅಂತಾ ಚಡಪಡಿಸಿದ್ದಾರೆ. 

ಹೌದು ಮುಂಬೈನ ಬೀದಿಗಳಲ್ಲಿ ಆದಿಮಾನವನ ಅಲೆದಾಡಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್! circle Of Bollywood, POSITIVE FAN ಹೆಸರಿನ ಟ್ವಿಟರ್ ಎಕ್ಸ್‌ನಲ್ಲಿ ಅಮಿರ್ ಅಲೆದಾಡಿ ದೃಶ್ಯಗಳು, ಅದಕ್ಕೆ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋಗಳು ಇದೀಗ ವಾರದ ಬಳಿಕ ವೈರಲ್ ಆಗಿವೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಟಿಎಸ್ ಚಿತ್ರದಲ್ಲಿ, ಅಮೀರ್ ಖಾನ್ ತನ್ನ ಆದಿಮಾನವನ ರೀತಿ ಲುಕ್‌ಗಾಗಿ ಪ್ರಾಸ್ತೆಟಿಕ್ಸ್‌ನೊಂದಿಗೆ ಮೇಕ್ಅಪ್ ಪ್ರಕ್ರಿಯೆಗೆ ಒಳಗಾಗುವುದನ್ನು ಕಾಣಬಹುದು ಇಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್

 ಅಮಿರ್ ಖಾನ್ ಈ ಫೋಟೋಗಳಿಗೆ ಫ್ಯಾನ್ಸ್ ಭಾರೀ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಅಭಿಮಾನಿಯು " ಲಗ್ತಾ ಹೈ ಲವ್ಯಾಪಾ ದೇಖ್ ಲಿ (ಅವರು ಈಗಾಗಲೇ ಲವ್ಯಾಪಾವನ್ನು ವೀಕ್ಷಿಸಿದ್ದಾರೆಂದು ತೋರುತ್ತಿದೆ) ಎಂದು ಕಾಮೆಂಟ್ ಮಾಡಿದ್ದಾರೆ ಮುಂಬರುವ ಚಿತ್ರ 'ಲವೇಯಪಾ' ಬಗ್ಗೆ ಸುಳಿವು ನೀಡಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್. ಫೆಬ್ರವರಿ 7 ರಂದು ಬಿಡುಗಡೆಯಾಗಲಿರುವ ಚಿತ್ರದ ಸಾಮರ್ಥ್ಯದ ಬಗ್ಗೆ ಅನೇಕ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಮೀರ್ ಅವರ ಗುಹೆ ಮಾನವನ ವೇಷದ ಬಗ್ಗೆ ಮತ್ತೊಬ್ಬ ಅಭಿಮಾನಿಯೊಬ್ಬರು, 'ಏನೋ ಶೂಟಿಂಗ್ ಆಗುತ್ತಿದೆ, ಕ್ಯಾಮೆರಾವನ್ನು ಎಲ್ಲೋ ಮರೆಮಾಡರಬೇಕು' ಎಂದು ಹೇಳಿದರು. ಮತ್ತೊಬ್ಬರು ಬರೆದುಕೊಂಡಿದ್ದಾರೆ, 

ಇದನ್ನೂ ಓದಿ: ಸೈಫ್​ ಅಲಿ ಇರಿತದ ಕೇಸ್​ಗೆ ರೋಚಕ ಟ್ವಿಸ್ಟ್​! 'ಅಕ್ರಮ' ಮಹಿಳೆ ಅರೆಸ್ಟ್​- ಯಾರೀಕೆ? ಹಿನ್ನೆಲೆ ಏನು?

ಈ ಹಿಂದೆ, ಅಮೀರ್ ಖಾನ್ 'ದಂಗಲ್', 'ಗಜಿನಿ' ಮತ್ತು 'ಲಾಲ್ ಸಿಂಗ್ ಚಡ್ಡಾ' ಮುಂತಾದ ಚಿತ್ರಗಳಲ್ಲಿ ಪಾತ್ರಕ್ಕಾಗಿ ತಮ್ಮ ದೇಹವನ್ನು ತೀವ್ರವಾಗಿ ಪರಿವರ್ತಿಸಿದ್ದಾರೆ. ಅಮಿರ್ ಖಾನ್ ಈ ರೀತಿ ದೇಹ ಪರಿವರ್ತನೆ ಮಾಡುವಲ್ಲಿ ಪ್ರಸಿದ್ಧರಾಗದ್ದಾರೆ. ಸಿನಿಮಾಗಳಲ್ಲಿ ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳಬಲ್ಲ ನಟರಾಗಿದ್ದಾರೆ.

ಅವರ ನಟನಾ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅಮೀರ್ ಅವರ ಮುಂದಿನ ಚಿತ್ರ, 2007 ರ 'ತಾರೆ ಜಮೀನ್ ಪರ್' ಚಿತ್ರದ ಮುಂದುವರಿದ ಭಾಗವಾದ 'ಸಿತಾರೆ ಜಮೀನ್ ಪರ್' ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜೆನಿಲಿಯಾ ದೇಶಮುಖ್ ಮತ್ತು ದರ್ಶೀಲ್ ಸಫಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

Scroll to load tweet…

Scroll to load tweet…