ಪಠಾಣ್​ ಚಿತ್ರದಲ್ಲಿ ಆಮೀರ್​ ಖಾನ್​ ಸಹೋದರಿ ನಿಖತ್​! ಕುತೂಹಲದ ವಿಷಯ ಬಹಿರಂಗಗೊಳಿಸಿದ ನಟ

ಬ್ಲಾಕ್​ಬಸ್ಟರ್​ ಪಠಾಣ್​ ಚಿತ್ರದಲ್ಲಿ ಆಮೀರ್​ ಖಾನ್​ ಸಹೋದರಿಯೂ ನಟಿಸಿದ್ದರು! ಈ ಕುತೂಹಲದ ವಿಷಯ ಹೇಳಿದ್ದಾರೆ ನಟ
 

Aamir Khan Introduced Sister Nikhat As Pathaan Actor On The Great Indian Kapil Sharmas Show suc

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್​​ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ  ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇದೀಗ ಅವರ ಇಂಟರೆಸ್ಟಿಂಗ್​ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬ್ಲಾಕ್​ಬಸ್ಟರ್​ ಚಿತ್ರ ಪಠಾಣ್​ನಲ್ಲಿ ಆಮೀರ್​ ಖಾನ್​ ಅವರ ಸಹೋದರಿ ನಿಖತ್​ ಖಾನ್​ ಪಾತ್ರ ಮಾಡಿದ್ದಾರೆ ಎನ್ನುವುದು! ಹೌದು. ಈ ಕುತೂಹಲದ ವಿಷಯವನ್ನು ಖುದ್ದು ನಟ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಷೋ’ದಲ್ಲಿ ಹೇಳಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಷೋ’ ನಡೆಸಿಕೊಡುತ್ತಿದ್ದು, ಇಲ್ಲಿಗೆ  ಅತಿಥಿಯಾಗಿ ಬಂದಿದ್ದ ಆಮೀರ್​ ಈ ವಿಷಯನ್ನು ತಿಳಿಸಿದ್ದಾರೆ. 


ಅಷ್ಟಕ್ಕೂ ಈ ಚಿತ್ರದಲ್ಲಿ ನಿಖತ್​ ಅವರು ಬಹುದೊಡ್ಡ ಪಾತ್ರ ಮಾಡಲಿಲ್ಲ. ಬದಲಿಗೆ, ಚಿಕ್ಕದೊಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಹೇಳಿರುವ ಆಮಿರ್​ ಖಾನ್​,  ‘ನನ್ನ ಅಕ್ಕ ನಿಖತ್ ಅವರು ಪಠಾಣ್​ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದಿನಿಂದ ನೀವು ಪಠಾಣ್ ಎಂದು ಶಾರುಖ್​ಗೆ ಒಂದು ದಾರ ಕಟ್ಟುತ್ತಾರೆ. ಅದು ನನ್ನ ಸಹೋದರಿ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಆಮಿರ್. ಈ ವೇಳೆ ಅಲ್ಲಿ ನಿಖತ್ ಕೂಡ ಇದ್ದರು ಎಂದಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮೇಲೆ ತೀವ್ರ ದಾಳಿ ನಡೆದು ಒಂದು ಪ್ರದೇಶಕ್ಕೆ ಬರುತ್ತಾರೆ. ಈ ಪ್ರದೇಶದಲ್ಲಿ ಅವರಿಗೆ ಚಿಕಿತ್ಸೆ ಸಿಗುತ್ತದೆ. ಆ ಸ್ಥಳದಲ್ಲೇ ಶಾರುಖ್ ಖಾನ್​ಗೆ ಪಠಾಣ್ ಎನ್ನುವ ಟೈಟಲ್ ಸಿಗುತ್ತದೆ. ಈ ಪಾತ್ರವನ್ನು ತಮ್ಮ ಅಕ್ಕ ಮಾಡಿರುವುದಾಗಿ ಆಮೀರ್​ ಖಾನ್​ ಹೇಳಿದ್ದಾರೆ. 

ಕಾಂಗ್ರೆಸ್​ನಿಂದ ಹೆಸರು ದುರುಪಯೋಗ: ಆಮೀರ್​, ರಣವೀರ್​ ಬಳಿಕ ಅಲ್ಲು ಅರ್ಜುನ್ ಗರಂ-ತಪ್ಪಿತಸ್ಥರಿಗೆ ಶಿಕ್ಷೆ ಏನು?

ಇನ್ನು ನಟನ ಸಿನಿ ವಿಷಯಕ್ಕೆ ಬರುವುದಾದರೆ,   ಆಮಿರ್ ಖಾನ್  ಅವರು ಇತ್ತೀಚೆಗೆ ನಟನೆಯಿಂದ ದೂರವೇ ಇದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಬದಲಿಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.  ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್​ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜೆನಿಲಿಯಾ ಡಿಸೋಜಾ ನಾಯಕಿ. ಒಂದು ಸಿಂಡ್ರೋಮ್ ಬಗ್ಗೆ ಈ ಸಿನಿಮಾ ಇರಲಿದೆ. ಇನ್ನು ‘ಪಠಾಣ್’ ಕುರಿತು ಹೇಳುವುದಾದರೆ, 2023ರ ಜನವರಿ 25ರಂದು ರಿಲೀಸ್ ಆದ ಈ ಚಿತ್ರ  ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿಗೂ ಅಧಿಕ ಕಮಾಯಿ ಮಾಡಿತು.  

ಈಚೆಗಷ್ಟೇ ಆಮೀರ್​ ಖಾನ್​  59ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.   ವರ್ಷಗಳ ಕಾಲ ವೃತ್ತಿಜೀವನದೊಂದಿಗೆ,  ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಬೇಡಿಕೆಯಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಆದರೆ 90 ರ ದಶಕದಲ್ಲಿ ಆಮೀರ್​ ಖಾನ್​ ಚಿತ್ರರಂಗವನ್ನೇ ತೊರೆಯುವ ನಿರ್ಧಾರವನ್ನು ಮಾಡಿದ್ದರು ಎಂಬ ವಿಷಯದ ಬಗ್ಗೆ ಅವರು ಷೋನಲ್ಲಿ ಮಾತನಾಡಿದ್ದರು.  ತಮಿಳುನಾಡಿನ ಗಿರಿಧಾಮ ಊಟಿ ಸಮೀಪದ ಕುನೂರಿಗೆ  ತೆರಳಿ ಅಲ್ಲಿಯೇ ಸೆಟ್ಲ್​ ಆಗುವ ಬಗ್ಗೆ ನಿರ್ಧರಿಸಿದ್ದಂತೆ ನಟ.  1994ರ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದುದಾಗಿ ಅವರು ಹೇಳಿದ್ದಾರೆ.  ಕುನೂರಿನಲ್ಲಿ  ಹೊಸ ಜೀವನ ಆರಂಭಿಸಲು ಅವರು ಇಷ್ಟಪಟ್ಟಿದ್ದರು. ಆ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ಆಮೀರ್​ ಖಾನ್​, ಸದ್ಯ ನಾನು ಚಿತ್ರರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೇನೆ.  ಕೂನೂರಿಗೆ ಹೋಗಿ ಸಮಯ ಕಳೆಯಲು ಬಯಸಿದ್ದೇನೆ. ಅಲ್ಲಿಯೇ  ಹೊಸ ಜೀವನವನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇನೆ.  ಬದುಕಲು ಇದು ಉತ್ತಮವಾದ ಸ್ಥಳವಾಗಿದೆ. ಆದ್ದರಿಂದ ಇಲ್ಲಿಯೇ  ಮನೆ ಖರೀದಿ ಮಾಡಲು ಯೋಚಿಸಿದ್ದೇನೆ ಎಂದಿದ್ದರು.  

ರಾಖಿ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು: ಫಾತೀಮಾ ಏನು ನಿನ್ನೀ ಅವತಾರವಮ್ಮಾ ಎಂದ ಫ್ಯಾನ್ಸ್​!

Latest Videos
Follow Us:
Download App:
  • android
  • ios