ಸಲ್ಮಾನ್​ ಖಾನ್​ ಅವರ ಬಳಿ ಸದಾ ಇರುವ ಬ್ರೆಸ್​ಲೆಟ್​ ಆಮೀರ್​ ಖಾನ್​ ಕೈ ಸೇರಿದ್ದು ಹೇಗೆ? ಯುಟ್ಯೂಬರ್​ ಬಿಚ್ಚಿಟ್ಟ ಸತ್ಯ 

ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ (Salman Khan) ಈ ವರ್ಷ ಈದ್ ಅನ್ನು ಸಲ್ಮಾನ್ ಖಾನ್​ ಅವರ ನಿವಾಸದಲ್ಲಿ ಆಚರಿಸಿದರು. ಈ ಆಚರಣೆಯ ಸೆಲ್ಫಿಗಳನ್ನು ಸಲ್ಮಾನ್ ಖಾನ್​ ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರು ಏರ್ಪಡಿಸಿದ್ದ ಈ ವಾರ್ಷಿಕ ಈದ್ ಪಾರ್ಟಿಯಲ್ಲಿ, ಇಬ್ಬರೂ ನಟರು ಸಕತ್​ ಟೈಟ್​ ಆಗಿರುವ ಬಗ್ಗೆ ಖುದ್ದು ಆಮೀರ್​ ಖಾನ್​ ಹೇಳಿಕೊಂಡಿದ್ದಾರೆ. ಕುತೂಹಲದ ಸಂಗತಿಯೆಂದರೆ ಪಾರ್ಟಿ ಮಾಡಿ ರಾತ್ರಿ ಬೆಳಗಾಗುವುದರೊಳಗೆ ಸಲ್ಮಾನ್​ ಖಾನ್​ ಅವರ ಬ್ರೆಸ್​ಲೆಟ್​ ​ ಫಿರೋಜ್​ ಆಮೀರ್​ ಖಾನ್​ ಕೈಯಲ್ಲಿತ್ತು. ಇದರ ಬಗ್ಗೆ ಅಮೀರ್ ಮನೆಗೆ ಭೇಟಿ ನೀಡಿದ ಯೂಟ್ಯೂಬರ್ ಜೇಬಿ ಕೋಯ್, ಬಹಿರಂಗಪಡಿಸಿದ್ದಾರೆ. ಈ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಅಮೀರ್ ಹೇಗೆ ಕುಡಿದಿದ್ದಾರೆ ಮತ್ತು ಸಲ್ಮಾನ್ ತಮ್ಮ ಅದೃಷ್ಟದ ಕಂಕಣವನ್ನು ಹೇಗೆ ಆಮೀರ್​ ಖಾನ್​ ಅವರಿಗೆ ನೀಡಿದರು ಎನ್ನುವುದನ್ನು ಉಲ್ಲೇಖಿಸಿದ್ದಾರೆ. 

ಜೇಬಿ ಅವರ ಹೊಸ ವ್ಲಾಗ್‌ನಲ್ಲಿ 'ಮೀಟಿಂಗ್ ಆಮೀರ್ ಖಾನ್' (Aamir Khan) ಎಂಬ ಶೀರ್ಷಿಕೆಯಡಿಯಲ್ಲಿ, ಅವರು ಅಮೀರ್ ಅವರ ಮನೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಮತ್ತು ಆಮೀರ್​ ಕೈಯಲ್ಲಿ ಬ್ರೆಸ್​ಲೆಟ್​ ​ ಇರುವುದನ್ನು ಗಮನಿಸಿದೆ ಎಂದು ಹೇಳಿದ್ದಾರೆ. ತಾವು ಇದರ ಬಗ್ಗೆ ಕೇಳಿದಾಗ, ವಿಷಯವನ್ನು ಆಮೀರ್​ ಬಾಯಿ ಬಿಟ್ಟಿರುವುದಾಗಿ ಜೇಬಿ ಹೇಳಿದ್ದಾರೆ. 'ನಾನು ನಿನ್ನೆ ರಾತ್ರಿ ಸಲ್ಮಾನ್ ಜೊತೆ ಹ್ಯಾಂಗ್ ಔಟ್ ಮಾಡುತ್ತಿದ್ದೆ, ಮತ್ತು ನಾವು ಅವರ ಚಲನಚಿತ್ರವನ್ನು ನೋಡುತ್ತಿದ್ದೆವು. ಆತ ಚೆನ್ನಾಗಿ ಕುಡಿದಿದ್ದ. ನನಗೂ ಕುಡಿಯಲು ಕೊಟ್ಟ. ನೀನು ನನ್ನ ಸಹೋದರ. ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ತಿಳಿದಿದ್ದೇವೆ ಎಂದು ಹೇಳಿ ತನ್ನ ನೆಚ್ಚಿನ ಬ್ರೆಸ್​ಲೆಟ್​ ​ ನನಗೆ ಕೊಟ್ಟ' ಎಂದು ಹೇಳಿರುವುದಾಗಿ ಜೇಬಿ ವಿವರಿಸಿದ್ದಾರೆ. 

ಸಲ್ಮಾನ್​ ಕೈಯಲ್ಲಿ ಸದಾ ಇರೋ ಬ್ರೆಸ್​ಲೆಟ್​ ಹೀಗೆಲ್ಲಾ ಮಾಡತ್ತಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

ಮರುದಿನ ಬೆಳಿಗ್ಗೆ ಆದಾಗಲೇ ಆಮೀರ್ ಅವರಿಗೆ ತಮ್ಮ ಕೈಯಲ್ಲಿ ಈ ಬ್ರೆಸ್​ಲೆಟ್​ ​ ಇರುವುದು ತಿಳಿಯಿತಂತೆ. ಅದನ್ನು ನೋಡಿ ತಾವು ಒಹ್​ ಷಟ್​ ಎಂದು ಹೇಳಿದುದಾಗಿ ವಿವರಿಸಿದ್ದಾರೆ. ಅಂದಹಾಗೆ ಈ ಬ್ರೆಸ್​ಲೆಟ್​ ಹಿಂದೆ ಸಲ್ಮಾನ್​ ಖಾನ್​ ಅವರ ದೊಡ್ಡ ಕಥೆಯೇ ಇದೆ. ಸಲ್ಮಾನ್​ ಖಾನ್​, ಎಷ್ಟೇ ಸ್ಟೈಲ್​ ಮಾಡಲಿ, ಯಾವುದೇ ಬಟ್ಟೆ ಧರಿಸಲಿ, ಬರಿ ಮೈಯಲ್ಲೇ ಇರಲಿ... ಸ್ಟೈಲ್​ ಏನೇ ಇದ್ದರೂ ಅವರ ಬಲಗೈನಲ್ಲಿ ಸದಾ ಒಂದು ಬ್ರೆಸ್​ಲೆಟ್​ (bracelet) ಇರುತ್ತದೆ. ನೀಲಿ ಹರಳು ಇರುವ ಬ್ರೆಸ್​ಲೆಟ್​ ಇದು. ಅಷ್ಟಕ್ಕೂ ಈ ಬ್ರೆಸ್​ಲೆಟ್​ಗೂ ಸಲ್ಮಾನ್​ ಖಾನ್​ ಜೀವನಕ್ಕೂ ಭಾರಿ ನಂಟು ಉಂಟಂತೆ. ಇದನ್ನು ಅವರೇ ಹೇಳಿದ್ದರು. ಇದೇ ರೀತಿಯ ಬ್ರೆಸ್​ಲೆಟ್​ ಅನ್ನು ಅವರ ತಂದೆ ಸಲೀಂ ಖಾನ್ ಧರಿಸುತ್ತಿದ್ದರು. ಬಾಲ್ಯದಿಂದಲೂ ಸಲ್ಮಾನ್ ಈ ಬ್ರೆಸ್​ಲೆಟ್​ ಗಾಗಿ ಅಪ್ಪನನ್ನು ಒತ್ತಾಯಿಸುತ್ತಿದ್ದರು. ಆದ್ದರಿಂದ ತಂದೆ ಸಲೀಂ ಖಾನ್ (Saleem Khan) ಮಗನಿಗೆ ಅದೇ ರೀತಿಯ ಬ್ರೆಸ್​ಲೆಟ್​ ಉಡುಗೊರೆಯಾಗಿ ನೀಡಿದ್ದು, ಅದನ್ನು ಸಲ್ಲುಭಾಯಿ ಧರಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಈ ಬ್ರೆಸ್​ಲೆಟ್​ ನಲ್ಲಿ ಇರುವ ಶಕ್ತಿಯ ಬಗ್ಗೆಯೂ ಸಲ್ಮಾನ್​ ಮಾತನಾಡಿದ್ದಾರೆ. 

'ಇದಕ್ಕೆ ನಾನು ಫಿರೋಜಾ ಎಂದು ಕರೆಯುತ್ತೇನೆ. ದುಷ್ಟ ಕಣ್ಣಿನಿಂದ ನನ್ನನ್ನು ರಕ್ಷಿಸಲು ಇದು ಕಾರ್ಯನಿರ್ವಹಿಸುತ್ತಿದೆ. ಈ ಕಲ್ಲಿನ ವಿಶೇಷವೆಂದರೆ ಯಾರದೇ ಕೆಟ್ಟ ದೃಷ್ಟಿ ಬೀಳದಂತೆ ಇದು ತಡೆಯುತ್ತಿದೆ. ಈ ಬ್ರೆಸ್​ಲೆಟ್​ ನಲ್ಲಿ ನೀಲಿ ಹರಳು ಇದ್ದು, ಇದುವರೆಗೆ 7 ರಿಂದ 8 ಬಾರಿ ಬಿರುಕು ಬಿಟ್ಟಿದೆ. ಇದರ ಅರ್ಥ ಅಷ್ಟು ದೃಷ್ಟಿ ನನ್ನ ಮೇಲೆ ಬಿದ್ದಿದೆ ಎಂದು. ಆದ್ದರಿಂದ ಕೆಟ್ಟ ದೃಷ್ಟಿ ಅಥವಾ ನನಗೆ ಸಂಭವಿಸುವ ಯಾವುದೇ ಅಹಿತಕರ ಘಟನೆಯನ್ನು ಈ ಹರಳು ತಡೆಯುತ್ತದೆ ಎಂದಿದ್ದಾರೆ. ಅದನ್ನು ಸಲ್ಮಾನ್​ ಯಾರಿಗೂ ಕೊಡುವುದಿಲ್ಲ. ಆದರೆ ಈದ್​ ಪಾರ್ಟಿಯ ವೇಳೆ ಆಮೀರ್​ ಖಾನ್​ಗೆ ಕೊಟ್ಟಿರುವುದು ಸಕತ್​ ಸುದ್ದಿ ಮಾಡುತ್ತಿದೆ. 

'ಬಿಗ್ ಬಾಸ್'ನಲ್ಲಿ ಲಿಪ್​ಲಾಕ್​- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್​ ಹೇಳಿದ್ದೇನು?

View post on Instagram