Asianet Suvarna News Asianet Suvarna News

ಶ್ರೀದೇವಿ ಜೊತೆ ನಟಿಸಲ್ಲ ಎಂದಿದ್ದರಂತೆ ಆಮೀರ್-​ ಏನೀ ಗುಟ್ಟು?

ಇಂದು ನಟ ಆಮೀರ್​ ಖಾನ್​ ಅವರ 58ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಟ ಶ್ರೀದೇವಿ ಜೊತೆ ನಟಿಸಲು ಒಪ್ಪದ ಅವರ ಜೀವನದ ಘಟನೆಯೊಂದು ಬಹಿರಂಗಗೊಂಡಿದೆ. ಏನಿದು ಘಟನೆ? 
 

Aamir Khan birthday Did you know that Mr Perfectionist once refused a film opposite Sridevi
Author
First Published Mar 14, 2023, 6:19 PM IST | Last Updated Mar 14, 2023, 6:19 PM IST

ಎಲ್ಲಾ ಸರಿಯಾದ ಕಾರಣಗಳಿಗಾಗಿ ಅಮೀರ್ ಖಾನ್ (Aamir Khan) ಅವರನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ (Mr Perfectionist) ಎಂದು ಕರೆಯಲಾಗುತ್ತದೆ. ಅವರು ಯಾವುದೇ ಚಿತ್ರದಲ್ಲಿ ತಮ್ಮ ನಟನೆಯನ್ನು ಸರಿಯಾಗಿ ಮಾಡಲು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ.  ಅವರಿಗೆ ಇಂದು 58 ವರ್ಷ ತುಂಬಿದೆ. ಆಮೀರ್​ 14 ಮಾರ್ಚ್ 1965 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬ್ಲಾಕ್‌ಬಸ್ಟರ್ (Blockbustur) ಚಿತ್ರಗಳನ್ನು ನೀಡಿದ್ದಾರೆ ಆಮೀರ್​.  ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ 5 ಚಿತ್ರಗಳಲ್ಲಿ 3 ಆಮೀರ್​ ಖಾನ್ ಅವರದ್ದು ಎನ್ನುವ ಹೆಗ್ಗಳಿಕೆ ಇವರದ್ದು. ಇವರು  ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ.  ಎಂಟನೇ ವಯಸ್ಸಿನಲ್ಲಿ 'ಯಾದೋನ್ ಕಾ ಬಾರಾತ್' ಚಿತ್ರದ ಮೂಲಕ ಬಾಲ ಕಲಾವಿದರಾಗಿ  ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು.  ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರು ಪಡೆದಿರುವುದಕ್ಕೆ ಕಾರಣ, ಇವರು ತನ್ನ ನಟನೆ ಚೆನ್ನಾಗಿ ಆಗಬೇಕು ಎಂದರೆ ಏನು ಬೇಕಾದರೂ ಮಾಡಲು ರೆಡಿ ಇದ್ದಾರೆ. 

ಇಂತಿಪ್ಪ ಬರ್ತ್​ಡೇ ಬಾಯ್​ ಕುರಿತು ಒಂದು ಕುತೂಹಲದ ವಿಷಯ ಬಹಿರಂಗಗೊಂಡಿದೆ. ಪ್ರಸಿದ್ಧಿ ಪಡೆದಿರುವ ನಾಯಕರ ಜೊತೆ ನಾಯಕಿಯರಿಗೆ ನಟಿಸುವ ಆಸೆ ಇದ್ದರೆ, ನಟಿಯರಿಗೆ ಕೂಡ ಖ್ಯಾತನಾಮ ನಟರ ಜೊತೆ ನಟಿಸುವ ಆಸೆ ಇರುತ್ತದೆ. ಇದಕ್ಕಾಗಿಯೇ ಅಪ್ಪನ ವಯಸ್ಸಿನವನ ಜೊತೆ ನಾಯಕಿಯರು ಚಿತ್ರದಲ್ಲಿ ಕಾಣಿಸಿಕೊಳ್ಳುವುದು, ತಮಗಿಂತ ಹಿರಿಯರಾದ ನಾಯಕಿಯರ ಜೊತೆ ನಾಯಕರು ನಟಿಸುವುದು ಬಾಲಿವುಡ್​ ಮಾತ್ರವಲ್ಲದೇ ಎಲ್ಲಾ ಚಿತ್ರಗಳಲ್ಲಿಯೂ ಮಾಮೂಲಾಗಿದೆ. ಕೆಲವೊಮ್ಮೆ ಈ ಪರಿಯ ವಯಸ್ಸಿನ ಅಂತರ ನೋಡಿ  ವೀಕ್ಷಕರಿಗೆ ಅಸಹ್ಯ ಹುಟ್ಟಿದರೂ, ಅಭಿಮಾನಿಗಳು ಮಾತ್ರ ಖುಷಿಯಾಗಿ ಇರುತ್ತಾರೆ ಎನ್ನುವ ಭರವಸೆ ಚಿತ್ರನಟರದ್ದು. ಆದರೆ ಆಮೀರ್​ ಖಾನ್​ ಅವರ ಬಗ್ಗೆ ಒಂದು ಕುತೂಹಲದ ಕಥೆ ಇದೆ. 

Salman - Aamir Khan: ಆಮೀರ್​ ಖಾನ್​ ಮನೆಗೆ ಮಧ್ಯರಾತ್ರಿ ಬಂದ ಸಲ್ಮಾನ್,​ ಕಾರಣವೇನು?

ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ 80-90ರ ದಶಕವನ್ನು ಆಳಿದ, ಬಹುತೇಕ ಯುವಕರ ನಿದ್ದೆ ಕದ್ದ ಸೌಂದರ್ಯದ ಖನಿಯಾಗಿದ್ದವರು ಶ್ರೀದೇವಿ. ಶ್ರೀದೇವಿಯ (Shreedevi) ಜೊತೆ ನಟಿಸುವುದು ಎಂದರೆ ಹಲವು ನಾಯಕರು ತುದಿಗಾಲಿನಲ್ಲಿ ನಿಲ್ಲುತ್ತಿದ್ದ ಕಾಲವದು. ಆದರೆ ಇವರ ಜೊತೆ ನಟಿಸಲು ಆಮೀರ್​ ಖಾನ್​ ಒಪ್ಪಿಕೊಂಡಿರಲಿಲ್ಲ ಎಂಬ ವಿಷಯ ಈಗ ಹುಟ್ಟುಹಬ್ಬದಂತೆ ಬಹಿರಂಗಗೊಂಡಿದೆ.  ಶ್ರೀದೇವಿ ಎದುರು ನಟಿಸಲು ಅಮೀರ್ ಖಾನ್ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಇದು ಕೇವಲ ಆರೋಪ ಮಾತ್ರವಲ್ಲ. ನಿಜವಾಗಿಯೂ ಆಮೀರ್​ ಶ್ರೀದೇವಿ ಜೊತೆ  ನಟಿಸಲು ಒಪ್ಪಿಕೊಂಡಿರಲಿಲ್ಲ ಎನ್ನುವುದು ಸತ್ಯ. ಆಮೀರ್ ಖಾನ್  ದೊಡ್ಡ ತಾರೆಗಳಲ್ಲಿ ಒಬ್ಬರಾದರೆ  ಶ್ರೀದೇವಿ  ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್​ಸ್ಟಾರ್​ ಎಂದೇ ಬಿರುದು ಪಡೆದವರು. ಆದರೂ  ಅಮೀರ್ ಖಾನ್ ಅವಕಾಶವನ್ನು ಕಳೆದುಕೊಂಡರು. ಏಕೆ ಎನ್ನುವುದು ಬಹಳ ಜನರಿಗೆ ಪ್ರಶ್ನೆಯಾಗಿಯೇ ಉಳಿದಿದೆ.

ಆ ಪ್ರಶ್ನೆಗೆ ಈಗ ಅವರ ಜನ್ಮದಿನದಂದು ಉತ್ತರ ಸಿಕ್ಕಿದೆ. ಅದೇನೆಂದರೆ   ಅದು ಬ್ಲಾಕ್​ಬಸ್ಟರ್​ ಆಗಿದ್ದ  ಖಯಾಮತ್ ಸೆ ಖಯಾಮತ್ ತಕ್ ಚಿತ್ರದ ವಿಷಯವಿದು. ಆಗ ಆಮೀರ್​ ಖಾನ್​ ರಾತ್ರೋರಾತ್ರಿ ಸೂಪರ್​ಸ್ಟಾರ್​ ಎನಿಸಿಕೊಂಡಿದ್ದರು. ಹಲವು ದಾಖಲೆಗಳನ್ನು ಈ ಚಿತ್ರ ಮುರಿದಿತ್ತು. 1988ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿತ್ತು. ಇದಾದ ಬಳಿಕ ಆಮೀರ್​ ಅವರ ಖ್ಯಾತಿ ಉತ್ತುಂಗಕ್ಕೆ ಏರಿತ್ತು. ಆದರೆ ಇದಾದ ಬಳಿಕ ಇನ್ನೊಂದು ಚಿತ್ರದಲ್ಲಿ ಸೂಪರ್​ಸ್ಟಾರ್​ ಎನಿಸಿಕೊಂಡಿದ್ದ ಶ್ರೀದೇವಿಯವರ ಜೊತೆ ನಟಿಸುವಂತೆ  ಆಮೀರ್​ ಅವರಿಗೆ ನಿರ್ಮಾಪಕರು ಹೇಳಿದ್ದರು. ಆಮೀರ್​ ಮತ್ತು ಶ್ರೀದೇವಿ ಅವರನ್ನು ವಿಮಾನದಲ್ಲಿ ಕುಳ್ಳರಿಸಿಕೊಂಡು ಈ ಚಿತ್ರದ ಕಥೆಯನ್ನೂ ಹೇಳಿದ್ದರು. ಆದರೆ  ಅಮೀರ್ ಖಾನ್ ಚಿತ್ರಕ್ಕೆ ಒಪ್ಪಿಕೊಂಡಿದ್ದರೂ,  ಶ್ರೀದೇವಿ ತಮ್ಮ ನಾಯಕಿಯಾಗುವುದು ಅವರಿಗೆ ಇಷ್ಟವಾಗಿರಲಿಲ್ಲ!

Shraddha Arya: 35 ವರ್ಷಗಳಲ್ಲಿ 10 ಮದ್ವೆಯಾದೆ: ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಟಿ!

ಅಷ್ಟಕ್ಕೂ ಶ್ರೀದೇವಿ ಮೇಲೆ ಆಮೀರ್​ ಅವರಿಗೆ ಮುನಿಸೇನೂ ಇರಲಿಲ್ಲ. ಕಾರಣ ಇಷ್ಟೇ. ಶ್ರೀದೇವಿ ಅವರು ತಮಗಿಂತಲೂ ವಯಸ್ಸಿನಲ್ಲಿ ಹಿರಿಯರು ಎನ್ನುವುದು! ಏಕೆಂದರೆ,  ಕಯಾಮತ್ ಸೆ ಕಯಾಮತ್ ತಕ್‌ನಲ್ಲಿ ಕಾಲೇಜು ಹುಡುಗನಾಗಿ ನಟಿಸಿ ಸೂಪರ್​ಸ್ಟಾರ್​ (Superstar) ಎನ್ನಿಸಿಕೊಂಡಿದ್ದಾಗ, ತಮಗಿಂತ ಹಿರಿಯರಾಗಿರುವ  ಶ್ರೀದೇವಿ ಎದುರು ಜೋಡಿಯಾಗಲು ಇದು ಸಮಯವಲ್ಲ ಎಂದು ಆಮೀರ್​ ಖಡಾಖಂಡಿತವಾಗಿ ಆಫರ್​ ನಿರಾಕರಿಸಿಬಿಟ್ಟರು. ಶ್ರೀದೇವಿ ಅವರು 1963ರಲ್ಲಿ ಜನಿಸಿದ್ದರೆ, 1965ರಲ್ಲಿ ಜನಿಸಿದವರು. ಎರಡೇ ವರ್ಷಗಳ ಅಂತರವಿತ್ತು. ಆದರೂ ಎರಡು ವರ್ಷ ಹಿರಿಯವರಾದ ಶ್ರೀದೇವಿ ಜೊತೆ ನಟಿಸುವುದಿಲ್ಲ ಎಂದಿದ್ದರು ಆಮೀರ್​ ಖಾನ್​. ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಇವರಿಬ್ಬರ ಅಭಿನಯದ ಫೋಟೋಶೂಟ್ ನಡೆಯಿತು. ನಂತರ, ಅಮೀರ್ ಖಾನ್ ಮನಿಶಾ ಕೊಯಿರಾಲಾ, ಜೂಹಿ ಚಾವ್ಲಾ, ರಾಣಿ ಮುಖರ್ಜಿ ಮತ್ತು ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡರು.  ಸದ್ಯ ಆಮೀರ್​ ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ ಮತ್ತು ಹೆಚ್ಚಿನ ಹೊಸ ಮತ್ತು ಮುಂಬರುವ ನಾಯಕಿಯರೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದಾರೆ.
 

Latest Videos
Follow Us:
Download App:
  • android
  • ios