Asianet Suvarna News Asianet Suvarna News

ಗರ್ಲ್‌ಫ್ರೆಂಡ್‌ ಅಂದ್ರೆ ಬೆಚ್ಚಿ ಬೀಳ್ತಾರಂತೆ ಸಿಂಬು, ರೀಸನ್ ಏನ್ ಗೊತ್ತಾ?

ಸದ್ಯ ಕಮಲ ಹಾಸನ್ ಜೊತೆಗೆ ಥಗ್‌ ಲೈಫ್‌ ಸಿನಿಮಾ ಮಾಡ್ತಿರೋ ಸಿಂಬುಗೆ ಗರ್ಲ್‌ಫ್ರೆಂಡ್‌ ಅಂದ್ರೆ ಬೆಚ್ಚಿ ಬೀಳೋ ಹಾಗಾಗುತ್ತಂತೆ. ಇದರ ಹಿಂದಿನ ಕಾರಣ ತಿಳಿದರೆ ಕಣ್ಣೀರು ಬರುತ್ತೆ.

a rumor about tamil actor simbu
Author
First Published Apr 28, 2024, 3:47 PM IST

ತಮಿಳು ನಟ ಸಿಂಬರಸನ್ ಅರ್ಥಾತ್ ಸಿಂಬು ಸದ್ಯ ಕಮಲಹಾಸನ್ ನಟನೆಯ 'ಥಗ್ಸ್ ಲೈಫ್‌' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ಡೈರೆಕ್ಷನ್‌ನಲ್ಲಿ ಮೂಡಿ ಬರ್ತಿರೋ ಬಹು ನಿರೀಕ್ಷಿತ ಸಿನಿಮಾ ಇದು. ರಾಜಸ್ತಾನದ ಜೈಸಲ್ಮೇರ್‌ನಲ್ಲಿ ಈ ಸಿನಿಮಾ ಶೂಟಿಂಗ್ ಬಿರುಸಿನಿಂದ ನಡೆಯಿತು. ಆ ಬಳಿಕ ದೆಹಲಿಯಲ್ಲಿ ಚಿತ್ರೀಕರಣ, ಇನ್ನೇನು ಕ್ಲೈಮ್ಯಾಕ್ಸ್ ಶೂಟ್ ಸೈಬೀರಿಯಾದಲ್ಲಿ ನಡೆಯಲಿದೆ. ಈ ಸಿನಿಮಾ ಸೆಟ್‌ನಲ್ಲಿ ಟೀಮ್‌ನವರು ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಿಂಬು ಅವರ ಕಾಲೆಳೆದದ್ದೇ ಎಳೆದದ್ದು. ಕಾರಣ ಸಿಂಬು ಅವರ ಗರ್ಲ್‌ಫ್ರೆಂಡ್ ವಿಷಯ. ಅದು ಈಗಿರುವ ಗರ್ಲ್ ಫ್ರೆಂಡ್ ಅಲ್ಲ. ಈ ಹಿಂದಿನ ಹುಡುಗಿ ವಿಚಾರ. ಈ ಸಿನಿಮಾ ಸೆಟ್‌ನಲ್ಲಿ ಅದ್ಯಾವುದೋ ದುರ್ಬಲ ಗಳಿಗೆಯಲ್ಲಿ ಸಿಂಬು ಹೇಳಿದ ವಿಚಾರವೊಂದು ಈಗ ಅವರನ್ನು ಗೋಳಾಡಿಸುತ್ತಿದೆ.

ಸಿಂಬು ಕಾಲಿವುಡ್‌ನ ಕ್ರೇಜಿ ನಟ ಅಂತಲೇ ಫೇಮಸ್. ಇವರ ತಂದೆಯೂ ಫೇಮಸ್ ನಟ ರಾಜೇಂದರ್. ಸಿಂಬುವಿಗೆ ಲಿಟಲ್ ಸ್ಟಾರ್ ಅನ್ನೋ ಹೆಸರೂ ಇದೆ. ತಂದೆಯ ಸಿನಿಮಾದಿಂದಲೇ ಬಾಲ ನಟನಾಗಿ ಕಾಲಿವುಡ್‌ಗೆ ಎಂಟ್ರಿಕೊಟ್ಟ ಸಿಂಬು ಇಪ್ಪತ್ತೆರಡು ವರ್ಷಗಳ ಕೆಳಗೆ ಫುಲ್ ಫ್ಲೆಡ್ಜ್ ಹೀರೋ ಆಗಿ ಕಾಣಿಸಿಕೊಂಡರು. ಹೀಗೆ ಹಲವು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ನಟನಿಗೆ ಅಭಿಮಾನಿಗಳ ಸಂಖ್ಯೆ ಏನು ಕಮ್ಮಿಯಿಲ್ಲ. ತಮಿಳು ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಎಸ್‌ಟಿಆರ್ ಅಂತಲೇ ಕರೆಯುತ್ತಾರೆ. ಸದ್ಯ ಸಿಂಬು ಸಿನಿಮಾಗಳ ವಿಚಾರದಲ್ಲಿ ಚೂಸಿಯಾಗಿದ್ದರೂ, ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇಂತಿಪ್ಪ ಸಿಂಬು ತನ್ನ ಗರ್ಲ್‌ಫ್ರೆಂಡ್ ವಿಚಾರಕ್ಕೆ ಸ್ನೇಹಿತರ ಕಾಲೆಳೆತಕ್ಕೆ ಸಿಕ್ಕಿಕೊಂಡಿದ್ದಾರೆ.

ಹನಿಮೂನ್​ಗೆ ಹೋಗುವಾಗ ಐಶ್​ಗೆ ಮದ್ವೆಯಾಗಿದ್ದು ನೆನಪಾಯ್ತಂತೆ! ಅಂದಿನ ಘಟನೆ ನೆನೆದ ನಟಿ

ನೇರ ಮಾತಿನ ಸಿಂಬು ವಿವಾದಗಳಿಂದಲೂ ಫೇಮಸ್. ನಟನೆಯಲ್ಲಿ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಇವರ ಸುತ್ತ ಒಂದಿಷ್ಟಯ ಗಾಸಿಪ್‌ಗಳು ಸದ್ದು ಮಾಡುತ್ತಲೇ ಇರುತ್ತವೆ. ಸದ್ಯ ವಿವಾದಗಳಿಂದ ಕೊಂಚ ದೂರ ಉಳಿದಿದ್ದು, ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸದ್ಯ ವಯಸ್ಸು 41 ಆಗಿದ್ದರೂ ಸಿಂಬು ತಮಿಳುನಾಡಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಹನ್ಸಿಕಾ ಮೋಟ್ವಾನಿ ಹೆಸರುಗಳು ಇವರೊಂದಿಗೆ ತಳುಕು ಹಾಕಿಕೊಂಡಿದ್ದವು. ಅಷ್ಟೇ ಅಲ್ಲದೆ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನೂ ಪ್ರೀತಿ ಮಾಡುತ್ತಿದ್ದರು ಅಂತ ಗುಲ್ಲೆದ್ದಿತ್ತು. ಇಷ್ಟೇ ಅಲ್ಲದೆ ಇಬ್ಬರ ಆಡಿಯೋ ಕ್ಲಿಪ್‌ಗಳು ಕೂಡ ಲೀಕ್ ಆಗಿತ್ತು. ಈಗ ಇವರೆಲ್ಲ ಸಹವಾಸ ಬಿಟ್ಟು ನಿಧಿ ಅಗರ್‌ವಾಲ್ ಜೊತೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ.

ಆದರೆ ಥಗ್‌ ಲೈಫ್ ಸಿನಿಮಾ ಶೂಟ್‌ ವೇಳೆ ಇವರ ಬಾಯಿಯಿಂದ ಎಕ್ಸ್‌ ಗರ್ಲ್‌ಫ್ರೆಂಡ್ ಹನ್ಸಿಕಾ ಮೋಟ್ವಾನಿ ವಿಚಾರ ಬಂದಿದೆ. ನಯನತಾರಾ ಬ್ರೇಕಪ್ (breakup) ಮಾಡಿಕೊಂಡ ಬಳಿಕ ಸಿಂಬು, ನಟಿ ಹನ್ಸಿಕಾ ಮೋಟ್ವಾನಿಗೆ ಕಾಳು ಹಾಕಿದ್ದಾರೆ. ಕ್ರಮೇಣ ಇಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಅನ್ನುವ ಮಟ್ಟಕ್ಕೂ ಸುದ್ದಿ ಹೋಗಿತ್ತು. ಆದರೆ ಇಬ್ಬರ ಮದುವೆ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಇವರಿಬ್ಬರು ಬೇರೆಯಾಗಿದ್ದರು. ಸಿಂಬು ಸಿನಿಮಾಗಳು ಒಂದರ ಹಿಂದೊಂದು ಸೋಲುತ್ತಿದ್ದವು. ತಮ್ಮ ವೃತ್ತಿ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಇಂತಹ ಸಮಯದಲ್ಲಿಯೇ ಹನ್ಸಿಕಾ ಮೋಟ್ವಾನಿ ಬಿಟ್ಟು ಹೋಗಿದ್ದರು. ಸಿಂಬು ಹಾಗೂ ಹನ್ಸಿಕಾ ಪ್ರೀತಿ ಉಳಿದಿದ್ದು ಕೆಲವೇ ತಿಂಗಳುಗಳು ಮಾತ್ರ. ಅಷ್ಟರಲ್ಲಿಯೇ ಸಿಂಬು, ಈ ನಟಿಗಾಗಿ ಬರೋಬ್ಬರಿ 6 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಂತೆ. ಇವ್ರಿಗೆ ಬಾಯ್ ಹೇಳಿದ ಹನ್ಸಿಕಾ ಮೋಟ್ವಾನಿ 2022ರಲ್ಲಿ ಗೆಳೆಯ ಸೊಹೇಲ್ ಕಥುರಿಯಾರನ್ನು ವಿವಾಹವಾಗಿದ್ದಾರೆ.

ಸಣ್ಣ ವಯಸ್ಸಲ್ಲೇ ಸ್ಮೋಕರ್ ಆದ ಕಂಗನಾ, ಸ್ಮೋಕಿಂಗ್‌ ಇಷ್ಷ ಅಂತಾರೆ ವಿದ್ಯಾ ಬಾಲನ್!

ಹೀಗೆ ಅನ್ಯಾಯವಾಗಿ ಹನ್ಸಿಕಾಗೆ ಆರು ಖರ್ಚು ಮಾಡಿದ್ದನ್ನು ಹೊಟ್ಟೆ ಉರಿದುಕೊಳ್ಳುತ್ತಾ ಸಿಂಬು ಬಾಯ್ಬಿಟ್ಟಿದ್ದಾರೆ. ಇದನ್ನೇ ಇಟ್ಕೊಂಡು ಮೋಸ್ಟ್ ಎಲಿಜೆಬಲ್ ಬ್ಯಾಚುಲರ್‌ (most eligible bachelor)  ಅನ್ನು ಅವರ ಫ್ರೆಂಡ್ಸ್ ಕಾಲೆಳೆಯುತ್ತಿದ್ದಾರೆ.

Latest Videos
Follow Us:
Download App:
  • android
  • ios