72 Hooren: ಭಯೋತ್ಪಾದನೆ ಹಿಂದಿರೋದು ಈ 72 ಕನ್ಯೆಯರು! ಕೇರಳ ಸ್ಟೋರಿ ಬಳಿಕ ಹಲ್ಚಲ್ ಸೃಷ್ಟಿಸಿದ ಟೀಸರ್
ದಿ ಕೇರಳ ಸ್ಟೋರಿ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿರುವ ನಡುವೆಯೇ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದುವೇ 72 ಹೂರೇನ್. ಅದರ ಟೀಸರ್ ಬಿಡುಗಡೆಯಾಗಿದೆ.

ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದಾಗಿನಿಂದಲೂ ಬಹಳ ವಿವಾದ ಸೃಷ್ಟಿಸುತ್ತಲೇ ಬಂದಿದೆ. ಅದರಲ್ಲಿಯೂ ಮುಸ್ಲಿಂ ಧರ್ಮಕ್ಕೆ ಹಿಂದೂ ಯುವತಿಯರನ್ನು ಹೇಗೆ ಮತಾಂತರಗೊಳಿಸಿ ಐಸಿಸ್ಗೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಕರಾಳ ಕಥೆಯುಳ್ಳ ದಿ ಕೇರಳ ಸ್ಟೋರಿಯನ್ನು ಕಾಂಗ್ರೆಸ್ಸಿಗರು ಸೇರಿದಂತೆ ಒಂದು ಗುಂಪು ಇಂದಿಗೂ ವಿರೋಧಿಸುತ್ತಲೇ ಇದೆ. ಈ ಚಿತ್ರ ಬಿಡುಗಡೆಗೊಂಡ ನಂತರ ಹಲವು ಹಿಂದೂ ಯುವತಿಯರು ಧೈರ್ಯದಿಂದ ಮುಂದೆ ಬಂದು ತಾವು ಮತಾಂತರಗೊಂಡು ಅನುಭವಿಸಿದ್ದ ನೋವಿನ ಕರಾಳ ಸರಮಾಲೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಇದರ ಮೂಲಕ ಈ ಸಿನಿಮಾ ಕಾಲ್ಪನಿಕ ಅಲ್ಲ, ಬದಲಿಗೆ ನಿಜವಾದದ್ದು ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳು ದಿ ಕೇರಳ ಸ್ಟೋರಿಯನ್ನು ಬ್ಯಾನ್ ಮಾಡಿವೆ. ಆದರೂ ಯಾವುದಕ್ಕೂ ಕ್ಯಾರೇ ಅಲ್ಲದೇ ದಿ ಕೇರಳ ಸ್ಟೋರಿ ಬಹುತೇಕ ಬಾಲಿವುಡ್ ದಾಖಲೆಗಳನ್ನು ಉಡೀಸ್ ಮಾಡಿ ಈ ಚಿತ್ರ ಮುನ್ನುಗ್ಗುತ್ತಲೇ ಇದೆ. ಇದಾಗಲೇ 250 ಕೋಟಿ ರೂಪಾಯಿಗಳನ್ನು ದಾಟಿಸಿ ಬಾಕ್ಸ್ ಆಫೀಸ್ (Box Office) ಕೊಳ್ಳೆ ಹೊಡೆದಿದೆ. ಇದೀಗ ಇದೇ ಚಿತ್ರದ ಸಾಲಿಗೆ ಸೇರ್ಪಡೆಯಾಗುತ್ತಿರುವ ಇನ್ನೊಂದು ಚಿತ್ರವ 72 ಹೂರೇನ್.
ಹೌದು. ಭಯೋತ್ಪಾದನೆಯ ಹಾಗೂ ಭಯೋತ್ಪಾದಕರ ಅದರಲ್ಲಿಯೂ ಸ್ಯೂಸೈಡ್ ಬಾಂಬರ್ಗಳನ್ನು (Suicide Bomber) ಸೃಷ್ಟಿಮಾಡುವ ಕರಾಳ, ಘನಘೋರ ಕಥಾ ಹಂದವನ್ನು ಹೊಂದಿದೆ 72 ಹೂರೇನ್. ಹೂರೇನ್ ಎನ್ನುವುದು ಅರೇಬಿಕ್ ಭಾಷೆಯಾಗಿದ್ದು, ಇದರ ಅರ್ಥ ಸ್ವರ್ಗದಲ್ಲಿರುವ ಕನ್ಯೆಯರು ಇನ್ನೊಂದರ್ಥದಲ್ಲಿ ಹೇಳುವುದಾದರೆ ಸ್ವರ್ಗದಲ್ಲಿರುವ ಅಪ್ಸರೆಯರು. ಸಂಜಯ್ ಪುರಣ್ ಸಿಂಗ್ ಚೌಹಾಣ್ ನಿರ್ದೇಶನದ '72 ಹೂರೇನ್' ಚಿತ್ರದ ಮೊದಲ ಟೀಸರ್ (Teaser) ನಿನ್ನೆ ಅಂದರೆ ಜೂನ್ 4 ರಂದು ಬಿಡುಗಡೆಯಾಗಿದೆ. ಇದರಲ್ಲಿ ಪವನ್ ಮಲ್ಹೋತ್ರಾ ಮತ್ತು ಅಮೀರ್ ಬಶೀರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಯೋತ್ಪಾದನೆಯ ಕಾರಣವನ್ನು ಚಿತ್ರದ ಟೀಸರ್ ಮೂಲಕ ಹೇಳಲಾಗಿದೆ. ಕೆಲವು ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಹೇಗೆ ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ. ಚಿತ್ರವು ಭಯೋತ್ಪಾದನೆಯ ಮನಸ್ಥಿತಿಯನ್ನು ಅನಾವರಣಗೊಳಿಸಿರುವುದು ಚಿತ್ರದ ಟೀಸರ್‌ನಿಂದ ಸ್ಪಷ್ಟವಾಗಿದೆ.
ಕಿಡ್ನಿ ಮಾರಲು ಹೋಗಿದ್ದ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು! ಬದುಕು ದುರಂತಗಳ ಸರಮಾಲೆ!
ಅಷ್ಟಕ್ಕೂ 72 ಕನ್ಯೆಯರಿಗೂ ಭಯೋತ್ಪಾದನೆಗೂ ಏನು ಸಂಬಂಧ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಕೆಲವು ಮತಾಂಧರು ಜಿಹಾದ್ (Jihad) ಹೆಸರಿನಲ್ಲಿ ಭಯೋತ್ಪಾದನೆಯ ಮಾರ್ಗವನ್ನು (Route of Terrorism) ಅಳವಡಿಸಿಕೊಳ್ಳುವಂತೆ ಸಾಮಾನ್ಯ ಜನರನ್ನು ಹೇಗೆ ಒತ್ತಾಯಿಸುತ್ತಾರೆ ಎನ್ನುವುದು ಈ ಚಿತ್ರದ ಹೂರಣ. ಯುವಕರನ್ನು (Youths) ಭಯೋತ್ಪಾದಕರನ್ನಾಗಿ ಮಾಡಲು ಹೇಗೆ ಅವರನ್ನು ಬ್ರೇನ್ವಾಷ್ (Brain Wash) ಮಾಡಲಾಗುತ್ತಿದೆ ಎನ್ನುವುದನ್ನು ಚಿತ್ರ ತೋರಿಸುತ್ತದೆ. ಭಯೋತ್ಪಾದನೆ ಬಳಿಕ ಸಾವನ್ನಪ್ಪಿದರೆ ಅವರು ಜನ್ನತ್‌ಗೆ ಹೋಗುತ್ತಾರೆ. ಆಗ ಅಲ್ಲಿ 72 ಹೂರಾನ್‌ಗಳು ಅರ್ಥಾತ್ ಕನ್ಯೆಯರು ಅವರಿಗೆ ಸೇವೆ ಸಲ್ಲಿಸುತ್ತಾರೆ ಎಂದು ಅವರಿಗೆ ಭರವಸೆ ನೀಡಲಾಗುತ್ತದೆ. ಈ ಮೂಲಕ ಯುವಕರ ಬ್ರೇನ್ವಾಷ್ ಮಾಡಿ ಅವರನ್ನು ಸಾಯಲು ರೆಡಿಗೊಳಿಸಲಾಗುತ್ತದೆ. ಸ್ಯೂಸೈಡ್ ಬಾಂಬರ್ಗಳನ್ನಾಗಿ ಮಾಡಲಾಗುತ್ತದೆ. 72 ಕನ್ಯೆಯರು ತಮ್ಮ ಸೇವೆಗೆ ಸಿದ್ಧರಿರುವುದನ್ನು ನಂಬುವ ಯುವಕರು ಸಾಯಲು ಹೇಗೆ ರೆಡಿಯಾಗುತ್ತಾರೆ ಎನ್ನುವುದನ್ನು ಎಳೆಎಳೆಯಾಗಿ ತೋರಿಸಲಿಗೆ ಈ ಚಿತ್ರ.
'72 ಹೂರೇನ್' ಚಿತ್ರದ ಟೀಸರ್ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವನ್ನು ನೋಡಲು ತಾವು ಕಾತರರಾಗಿರುವುದಾಗಿ ಹೇಳುತ್ತಿದ್ದಾರೆ. ಕೆಲವರು ಈ ವಿಷಯ ತಮಗೆ ಮೊದಲೇ ಅರಿವಿತ್ತು ಎಂದರೆ ಇನ್ನು ಕೆಲವರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಒಂದೊಂದೇ ಚಿತ್ರಗಳು ಬಂದು ನಮ್ಮ ಜನರಿಗೆ ಅರಿವು ಮೂಡಿಸಬೇಕಿದೆ. ಇದನ್ನು ನೋಡಿದ ಮೇಲಾದರೂ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಚಿತ್ರವು ಭಯೋತ್ಪಾದನೆ ಮತ್ತು ಭಯೋತ್ಪಾದಕರ ಮನಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡುತ್ತದೆ. ಆದಾಗ್ಯೂ, ಇಂತಹ ಚಲನಚಿತ್ರಗಳು ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಭಯದ ಭಾವನೆಗಳನ್ನು ಉತ್ತೇಜಿಸುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ
ಚಿತ್ರೋತ್ಸವದಲ್ಲಿ '72 ಹೂರೆನ್' ಚಿತ್ರ ಪ್ರದರ್ಶನಗೊಂಡಿದೆ. 2019 ರಲ್ಲಿ ಗೋವಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಸಂಜಯ್ ಪುರಣ್ ಸಿಂಗ್ ಚೌಹಾಣ್ 2021 ರಲ್ಲಿ ಚಲನಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಚಿತ್ರವು ಮುಂದಿನ ತಿಂಗಳು ಜುಲೈ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.