ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಕೊಡ್ತಿದ್ದ ಬಾಲಕ | 19ರ ಕಾಲೇಜು ವಿದ್ಯಾರ್ಥಿ ಅರೆಸ್ಟ್

ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಒದಗಿಸುತ್ತಿದ್ದ ವಿದ್ಯಾರ್ಥಿಯನ್ನು ಎನ್‌ಸಿಬಿ ಬಂಧಿಸಿದೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅರೆಸ್ಟ್ ಮಾಡಿದೆ.

ಡ್ರಗ್ಸ್ ಮತ್ತು ₹ 2.3 ಲಕ್ಷ ನಗದು ವಶಪಡಿಸಿಕೊಂಡಿದೆ. ಎನ್‌ಸಿಬಿಯ ಪ್ರಕಾರ, ವಿದ್ಯಾರ್ಥಿಯು ಚಲನಚಿತ್ರೋದ್ಯಮದ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ. ಆತನನ್ನು ನ್ಯಾಯಾಲಯವು ಎನ್‌ಸಿಬಿಯ ನಾಲ್ಕು ದಿನಗಳ ಕಸ್ಟಡಿಗೆ ಕಳುಹಿಸಿದೆ.

ಬಾಲಿವುಡ್ ನಟ ಅಮೀರ್ ಖಾನ್‌ಗೆ ಕೊರೋನಾ ಪಾಸಿಟಿವ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಡ್ರಗ್ಸ್ ವಿಚಾರ ಭಾರೀ ಸುದ್ದಿಯಾಗಿತ್ತು. ಬಾಲಿವುಡ್‌ನ ಡ್ರಗ್ಸ್ ಘಾಟು ಜಾಡು ಹಿಡಿದ ಎನ್‌ಸಿಬಿ ಹಲವು ಸೆಲೆಬ್ರಿಟಿಗಳನನು ಕರೆಸಿ ವಿಚಾರಣೆ ನಡೆಸಿತ್ತು.

ನಟಿ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆಯಂತಹ ಪ್ರಮುಖ ನಟಿಯರೇ ಎನ್‌ಸಿಬಿ ವಿಚಾರಣೆ ಎದುರಿಸಿದ್ದರು. ರಿಯಾ ಚಕ್ರವರ್ತಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು.