ಪ್ರಮುಖ ನಟಿ ಬಿ.ಸರೋಜಾದೇವಿ ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಇವರು ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಖ್ಯಾತಿ ಪಡೆದಿದ್ದರು. ಸರೋಜಾದೇವಿ ಸಿನಿಜೀವನದ 15 ಪ್ರಮುಖ ಸಿನಿಮಾಗಳು ಇಲ್ಲಿವೆ.
ಸರೋಜಾದೇವಿ ಸಿನಿಜೀವನದ 15 ಪ್ರಮುಖ ಸಿನಿಮಾಗಳು ಇಲ್ಲಿವೆ.
1. ಮಹಾಕವಿ ಕಾಳಿದಾಸ- ಹೊನ್ನಪ್ಪ ಭಾಗವತರ್ ನಟನೆ, ನಿರ್ದೇಶನದ ಈ ಚಿತ್ರದಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದ್ದರು. ಆಗ ಅವರ ವಯಸ್ಸು 17. 1955ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.
2. ನಾಡೋಡಿ ಮಣ್ಣನ್- ತಮಿಳುನಾಡಿಲ್ಲಿ ಅಪಾರ ಜನಪ್ರಿಯತೆಗಳಿಸಿದ ಚಿತ್ರ. ಬಿಡುಗಡೆಯಾಗಿದ್ದು 1958ರಲ್ಲಿ. ಎಂಜಿಆರ್ ಈ ಚಿತ್ರದ ನಾಯಕರಾಗಿದ್ದರು.
3. ಪಾಂಡುರಂಗ ಮಹಾತ್ಯಂ- ಎನ್‌ಟಿ ರಾಮರಾವ್ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ತೆಲುಗಿಗೆ ಪ್ರವೇಶಿಸಿದರು. ಈ ಸಿನಿಮಾ ಕೂಡ ಹಿಟ್ ಆಗಿತ್ತು. ಬಿಡುಗಡೆಯಾಗಿದ್ದು 1957ರಲ್ಲಿ.
4. ಕಿತ್ತೂರು ಚೆನ್ನಮ-್ಮ ‘ಕಪ್ಪ ಕೊಡಬೇಕೇ ಕಪ್ಪ’ ಎಂಬ ಸಂಭಾಷಣೆ ಬಹಳ ಜನಪ್ರಿಯವಾಗಿದ್ದ ಸಿನಿಮಾ ಇದು. ಅವರು ಕಿತ್ತೂರು ಚೆನ್ನಮ್ಮ ಪಾತ್ರವನ್ನು ಜೀವಿಸಿದ್ದ ಈ ಸಿನಿಮಾ 1961ರಲ್ಲಿ ಬಂದಿತ್ತು.
5. ತಂಗಮಲೈ ರಗಸಿಯಂ- 1957ರಲ್ಲಿಯೇ ಬಂದಿದ್ದ ಬಹಳ ಹಿಟ್ ಸಿನಿಮಾ ಇದು, ಅವರ ಪ್ರತಿಭಾ ವೈವಿಧ್ಯತೆಯನ್ನು ತಮಿಳು ಮಂದಿಗೆ ಪರಿಚಯಿಸಿತ್ತು.
6. ಪೈಗಂ- 1959ರಲ್ಲಿ ಬಂದ ಪೈಗಂ ಹಿಂದಿ ಚಿತ್ರದ ಮೂಲಕ ಅವರು ಹಿಂದಿಭಾಷೆಗೆ ಪ್ರವೇಶಿಸಿದರು. ದಿಲೀಪ್‌ಕುಮಾರ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು.
7. ಸಸುರಾಲ್- 1961ರಲ್ಲಿ ಬಂದ ಹಿಂದಿ ಸಿನಿಮಾ ಇದು. ರಾಜೇಂದ್ರಕುಮಾರ್ ಹೀರೋ ಆಗಿದ್ದರು.
8. ಪ್ಯಾರ್ ಕಿಯಾ ತೋ ಡರ್ನಾ ಕ್ಯಾ- ಶಮ್ಮಿ ಕಪೂರ್ ನಾಯಕನಾಗಿ ನಟಿಸಿದ್ದ ಸಿನಿಮಾ. ಸಂಗೀತಕ್ಕೆ ಹೆಸರಾದ ಈ ಚಿತ್ರ ರಿಲೀಸಾಗಿದ್ದು 1963ರಲ್ಲಿ.
9. ಬೇಟಿ ಬೇಟೆ- ಸುನೀಲ್ ದತ್ ನಟನೆಯ ಚಿತ್ರ 1964ರಲ್ಲಿ ಬಂದಿತ್ತು.
10. ಸ್ಕೂಲ್ ಮಾಸ್ಟರ್- 1958ರಲ್ಲಿ ಬಂದ ಈ ಚಿತ್ರದಲ್ಲಿನ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
11. ಜಗದೇಕ ವೀರುನಿ ಕಥಾ- ಎನ್‌ಟಿ ರಾಮರಾವ್ ನಟಿಸಿದ್ದ, 1961ರಲ್ಲಿ ತೆರೆಕಂಡ ಈ ಸಿನಿಮಾ ಅವರಿಗೆ ಮತ್ತಷ್ಟು ತೆಲುಗು ಜನರ ಪ್ರೀತಿ ಗಳಿಸಿಕೊಟ್ಟಿತ್ತು.
12. ಸೀತಾರಾಮ ಕಲ್ಯಾಣಂ- ಎನ್‌ಟಿ ರಾಮರಾವ್- ಸರೋಜಾದೇವಿ ಜೋಡಿಯ ಮತ್ತೊಂದು ಯಶಸ್ವೀ ಚಿತ್ರ. 1961ರಲ್ಲಿ ಬಿಡುಗಡೆ ಆಗಿತ್ತು.
13. ಪೆಳ್ಳಿ ಕಾನುಕಾ- 1960ರಲ್ಲಿ ಬಂದ ಸಿನಿಮಾ ಇದು. ಅಕ್ಕಿನೇನಿ ನಾಗೇಶ್ವರರಾವ್ ನಾಯಕನಾಗಿ ನಟಿಸಿದ್ದರು.
14. ಅಮರಶಿಲ್ಪಿ ಜಕಣಚಾರಿ- 1964ರಲ್ಲಿ ಬಂದ ಬಣ್ಣದ ಸಿನಿಮಾ. ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
15. ಬಬ್ರುವಾಹನ- 1977ರಲ್ಲಿ ಬಂದ ಈ ಸಿನಿಮಾದಲ್ಲಿನ ಭಾವುಕ ನಟನೆಗೆ ಅಪಾರ ಜನಪ್ರಿಯತೆ ದೊರಕಿತ್ತು.
