ಚಿಕ್ಕಬಳ್ಳಾಪುರದಲ್ಲಿ ಅಣ್ಣನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಸಾವಿನ ಸುತ್ತ ಅನುಮಾನ ಮೂಡಿದೆ. ವರಸೆಯಲ್ಲಿ ಅಣ್ಣ ಮತ್ತು ತಂಗಿಯಾಗಿದ್ದರು.
ಚಿಕ್ಕಬಳ್ಳಾಪುರ: ವರಸೆಯಲ್ಲಿ ಅಣ್ಣ ಮತ್ತು ತಂಗಿಯಾದರೂ ಲಿವ್ ಇನ್ ಸಂಬಂಧದಲ್ಲಿದ್ದ ತಂಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿ ರಾಮಲಕ್ಷ್ಮಿ (21). ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾದ ರಾಮಲಕ್ಷ್ಮಿ ಹಾಗೂ ಕೃಷ್ಣ ಇಬ್ಬರೂ ಅಣ್ಣ ಮತ್ತು ತಮ್ಮನ ಮಕ್ಕಳಾಗಿದ್ದು, ಸಂಬಂಧದಲ್ಲಿ ಅಣ್ಣ ತಂಗಿ ಆಗಬೇಕು. ಆದರೆ ಅಣ್ಣ-ತಂಗಿಯ ಪ್ರೀತಿ ಲಿವಿಂಗ್ ರಿಲೇಶನ್ ಶಿಪ್‌ಗೆ ತಿರುಗಿದ್ದು, ಪೆರೇಸಂದ್ರದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಮೂರು ವರ್ಷಗಳಿಂದ ಅಣ್ಣ-ತಂಗಿಯ ಅನೈತಿಕ ಸಂಬಂಧ
ಕಳೆದ 3 ವರ್ಷಗಳಿಂದ ಅಣ್ಣ-ತಂಗಿ ಸಂಬಂಧಕ್ಕೆ ವಿರುದ್ಧವಾಗಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದರು ಎನ್ನಲಾಗಿದೆ. ಅವರ ಕುಟುಂಬಕ್ಕೆ ಈ ವಿಚಾರ ತಿಳಿದು ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆ ಮಾಡಿದ್ದಾರೆ, ಆದರೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿ ತಲೆ ಕೆಡಿಸಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡುತ್ತಿದ್ದ. ರಾಮಲಕ್ಷ್ಮಿ ಆತ್ಮ*ಹತ್ಯೆಗೆ ಶರಣಾಗಿದ್ದು, ಅವಳ ಸಾವಿಗೆ ಕೃಷ್ಣನೇ ಕಾರಣ ಎಂದು ಮೃತಳ ಅಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಲಕ್ಷ್ಮಿ ಸಾವಿನ ನಂತರ ಆರೋಪಿ ಕೃಷ್ಣ ಪರಾರಿಯಾಗಿದ್ದು, ಈ ಕುರಿತು ಪೆರೇಸಂದ್ರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸೊಸೆಗೆ ಕೆಲಸ ಕೊಡದ್ದಕ್ಕೆ ಅಂಗನವಾಡಿಗೆ ಬೀಗ
ಚಿಕ್ಕೋಡಿ: ತನ್ನ ಸೊಸೆಗೆ ಕೆಲಸ ಕೊಟ್ಟಿಲ್ಲ ಎಂದು ಆಕ್ರೋಶಗೊಂಡು ಜಾಗದ ಮಾಲಿಕನೊಬ್ಬ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ್ದಾನೆ. ಗ್ರಾಮದ ಬಾಬುರಾವ ಎಂಬುವರು ಅಂಗನವಾಡಿ ಕೇಂದ್ರಕ್ಕೆ ಜಾಗ ಕೊಟ್ಟಿದ್ದರು. ಕಳೆದ ನಾಲ್ಕು ದಿನಗಳಿಂದ ಅಂಗನವಾಡಿಗೆ ಬೀಗ ಹಾಕಿದ್ದಾರೆ. ಮನೆಯಲ್ಲಿ ಒಬ್ಬರಿಗೆ ನೌಕರಿ ಕೊಡುತ್ತೇವೆ ಎಂದು ಹೇಳಿ ಜಾಗ ಪಡೆದಿದ್ದಾರೆ. ಈಗ ನನ್ನ ಸೊಸೆಯನ್ನು ಹೆಲ್ಪರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದರೆ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ, ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದಾಗಿ ಆರೋಪಿಸಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಮಕ್ಕಳು ಬಯಲಿನಲ್ಲೇ ಪಾಠ ಕೇಳುವಂತಾಗಿದೆ. ಅಂಗನವಾಡಿ ಕೇಂದ್ರದ ಶಿಕ್ಷಕಿ, ಮನೆಯಿಂದಲೇ ಆಹಾರ ತಯಾರಿಸಿ ತಂದು ಮಕ್ಕಳಿಗೆ ಊಟ ಹಾಕುತ್ತಿದ್ದಾರೆ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ


