ಚಾಮರಾಜನಗರ(ನ.09): ಕಳೆದ 2 ವರ್ಷಗಳಿಂದ ವೇತನ ನೀಡಿಲ್ಲ ಎಂದು ನೀರುಗಂಟಿಗಳು ಶೆಟ್ಟಳ್ಳಿ ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ ಅಲ್ಲದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮಹಿಳೆಯರು ಸ್ಥಳೀಯ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ತಾಲೂಕಿನ ಶೆಟ್ಟಳ್ಳಿ ಗ್ರಾಪಂಯಲ್ಲಿ ನೀರುಗಂಟಿಗಳಾಗಿ ಕಾರ್ಯನಿರ್ವಹಿಸುತ್ತಿ ರುವ ಸಿಬ್ಬಂದಿಗೆ 2 ವರ್ಷಗಳಿಂದ ವೇತನ ನೀಡಿಲ್ಲ ಎಂದು ಪ್ರತಿಭಟನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಾಂಡವಾಡು ತ್ತಿರುವ ಬಗ್ಗೆ ಗ್ರಾಮದ ಮಹಿಳೆಯರು ಕೂಡ ಗ್ರಾಪಂ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಪುಲಿಗುಟ್ಟೆ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನರು

ನೀರುಗಂಟಿಗಳಿಗೆ ವೇತನ ನೀಡದಿರುವ ಬಗ್ಗೆ ಜಿಪಂ ಸಿಇಒಗಳ ಗಮನಕ್ಕೆ ತರಲಾಗಿದ್ದು, ಸಿಇಒ ವೇತನ ನೀಡುವಂತೆ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದ್ದರೂ ವೇತನ ನೀಡಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದೇವೆ ಎಂದು ನೀರುಗಂಟಿಗಳಾದ ಜಗದೀಶ್, ನಾಗ, ಬಸವೇಗೌಡ, ರಾಜು, ಮುನಿಸ್ವಾಮಿ, ಸಣ್ಣಕಾಳಶೆಟ್ಟಿ, ರವಿಚಂದ್ರ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನೀರಿಗಾಗಿ ನೀರೆಯರ ಪ್ರತಿಭಟನೆ:

ಗ್ರಾಪಂನಲ್ಲಿ ನೀರುಗಂಟಿಗಳು ವೇತನ ನೀಡಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದಡೆ ಇದೇ ಗ್ರಾಪಂ ಮುಂದೆ ಕುಡಿಯುವ ನೀರಿನ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸಮರ್ಪಕವಾದ ನೀರಿನ ಸೌಲಭ್ಯವನ್ನು ಕಲ್ಪಿಸಿ ಎಂದು ನೀರೆಯರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಜರೂರಾಗಿ ಶೆಟ್ಟಳ್ಳಿ ಗ್ರಾಮದ ನೀರುಗಂಟಿಗಳಿಗೆ ವೇತನ ನೀಡಬೇಕು. ಈ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ನಿಲ್ಲಿಸಿರುವುದರಿಂದ ಕ್ರಮಕೈಗೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಒತ್ತಾಯಿಸಿದ್ದಾರೆ.

ಮಗು ಮಲಗಿದ್ದರೂ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ