ಪುಲಿಗುಟ್ಟೆ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನರು
ಮುಳಬಾಗಿಲು ತಾಲೂಕಿನ ಆವಣಿ ಹೋಬಳಿಯ ಬಹು ಎತ್ತರದ ಹಾಗೂ ನೂರಾರು ಎಕರೆ ವಿಸ್ತೀರ್ಣವಿರುವ ದೇವರಾಯಸಮುದ್ರ ಬೆಟ್ಟದಿಂದ ಆವಣಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿನ ಪುಲಿಗುಟ್ಟೆ(ಹುಲಿಗುಟ್ಟೆ) ಬಳಿ ಬುಧುವಾರ ಮಧ್ಯಾಹ್ನ ಕುರಿ ಮತ್ತು ಮೇಕೆಗಳನ್ನು ಮೇಯುಸುತ್ತಿದ್ದ ಮಂದೆ ಮೇಲೆ ಚಿರತೆ ದಾಳಿ ಮಾಡಿ ಒಂದು ಕುರಿ ಮತ್ತು ಮೇಕೆಯನ್ನು ಕುರಿಗಾಹಿಗಳ ಮುಂದೆಯೇ ರಕ್ತವನ್ನು ಹೀರಿ ಮತ್ತೆ ಬೆಟ್ಟಕ್ಕೆ ತೆರಳಿದ ಘಟನೆ ಗೊತ್ತಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತಗೊಂಡಿದ್ದಾರೆ.
ಚಾಮರಾಜನಗರ(ನ.07): ಮುಳಬಾಗಿಲು ತಾಲೂಕಿನ ಆವಣಿ ಹೋಬಳಿಯ ಬಹು ಎತ್ತರದ ಹಾಗೂ ನೂರಾರು ಎಕರೆ ವಿಸ್ತೀರ್ಣವಿರುವ ದೇವರಾಯಸಮುದ್ರ ಬೆಟ್ಟದಿಂದ ಆವಣಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿನ ಪುಲಿಗುಟ್ಟೆ(ಹುಲಿಗುಟ್ಟೆ) ಬಳಿ ಬುಧುವಾರ ಮಧ್ಯಾಹ್ನ ಕುರಿ ಮತ್ತು ಮೇಕೆಗಳನ್ನು ಮೇಯುಸುತ್ತಿದ್ದ ಮಂದೆ ಮೇಲೆ ಚಿರತೆ ದಾಳಿ ಮಾಡಿ ಒಂದು ಕುರಿ ಮತ್ತು ಮೇಕೆಯನ್ನು ಕುರಿಗಾಹಿಗಳ ಮುಂದೆಯೇ ರಕ್ತವನ್ನು ಹೀರಿ ಮತ್ತೆ ಬೆಟ್ಟಕ್ಕೆ ತೆರಳಿದ ಘಟನೆ ಗೊತ್ತಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತಗೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದಿನಿಂದಲೂ ಕುರಿ, ಮೇಕೆ ಸೇರಿದಂತೆ ಇತರೆ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ನಿರಂತರ ಸುದ್ದಿಗಳನ್ನು ಮಾಡಿ ಆರಣ್ಯ ಇಲಾಖೆಯನ್ನು ಎಚ್ಚರಿಸಲಾಗಿತ್ತು.
'ಮೈಸೂರು: ಆನೆ ಶಿಬಿರಗಳಲ್ಲಿ ಮೂಲ ಸೌಕರ‍್ಯಗಳೇ ಇಲ್ಲ!’
ಅಲ್ಲದೆ ಈ ಭಾಗದ ಸಾರ್ವಜನಿಕರು ಸಹ ಆರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಾಯ ಮಾಡಿದ್ದರೂ ಎಚ್ಚೆತ್ತುಕೊಳ್ಳದ ಆರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತೋರಿದ ಪರಿಣಾಮ ಪುಲಿಗುಟ್ಟೆ(ಹುಲಿಗುಟ್ಟೆ) ಸಮೀಪವಿರುವ ಚೋಳಗುಂಟೆ ಗ್ರಾಮದ ಚಂದ್ರಪ್ಪನ ಕುರಿ, ಮೇಕೆ ಚಿರತೆಗೆ ಬಲಿಯಾಗಿವೆ.\
ಧಾರಾಕಾರ ಮಳೆ: ಕೊಳೆತ ಈರುಳ್ಳಿ ಬೆಳೆ, ಕಣ್ಣೀರಿಟ್ಟ ಅನ್ನದಾತ
ಕಳೆದ ಐದಾರು ತಿಂಗಳಿಂದ ಚಿರತೆಯೂ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಆರಣ್ಯ ಇಲಾಖೆ ಅಧಿಕಾರಿ ರವಿಕೀರ್ತಿ ಬೇಜವಾಬ್ದಾರಿ ಉತ್ತರ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಇವರು ಮನುಷ್ಯನ ಮೇಲೆ ಚಿರತೆ ದಾಳಿ ಮಾಡಿ ಪ್ರಾಣ ಹಾನಿಯದಾಗ ಮಾತ್ರ ಸೆರೆಯಿಡಿಯುವ ಕ್ರಮಗಳನ್ನು ತೆಗದುಕೊಳ್ಳುವಂತಿದ್ದಾರೆ. ಚಿರತೆಯನ್ನು ಕಂಡಾಗೆಲ್ಲ ಅವರಿಗೆ ದೂರುವಾಣಿ ಮುಖಂತರ ಮಾಹಿತಿ ನೀಡಲಾಗಿದೆ. ಚಿರತೆಯನ್ನು ಸೇರೆಯಿಡಿಯುವ ಪ್ರಯತ್ನ ಮಾಡದೆ ತಮ್ಮ ಸಿಬ್ಬಂದಿಯನ್ನು ಕಳುಹಿಸುವುದು ಆವಣಿಯಲ್ಲಿ ಬೋನ್ ಇಟ್ಟಿದ್ದೇವೆ. ಇಲ್ಲಿ ಬೋನ್ ಇಟ್ಟಿದ್ದೇವೆ ಎಂದು ಆಸಡ್ಡೆ ಉತ್ತರ ನೀಡುತ್ತಾರೆ. ಇನ್ನು ಮುಂದೆ ಅರಣ್ಯ ಇಲಾಖೆಯನ್ನು ಆಶ್ರಯಿಸದೆ ಸಾರ್ವಜನಿಕರೆ ಚಿರತೆ ಸೆರೆ ಹಿಡಿಯಲು ಮುಂದಾಗಬೇಕಾಗುತ್ತಾದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
'ಸಿದ್ದರಾಮಯ್ಯನೇ ಮೊದಲ ಅತೃಪ್ತ ಶಾಸಕ': ಸಂಸದ ವಾಗ್ದಾಳಿ
ಚಿರತೆಯನ್ನು ಸೆರೆಹಿಡಿಯಲು ಇಲಾಖೆಯಿಂದ ನಿರಂತರವಾಗಿ ಪ್ರಯತ್ನಿಸಲಾಗಿದೆ. ಆದರೆ, ಮರಿಗಳನ್ನು ಮಾಡಿಕೊಂಡಿರುವುದರಿಂದ ಸೆರೆಯಿಡಿಯಲು ಸಾಧ್ಯವಾಗುತ್ತಿಲ್ಲ. ಮರಿಗಳನ್ನು ಚಿರತೆ ದೂರಮಾಡಲು 15ರಿಂದ 17ತಿಂಗಳು ಬೇಕಿರುವುದರಿಂದ ಚಿರತೆ ಮರಿಗಳೊಂದಿಗೆ ಇಲಾಖೆ ಇಟ್ಟಿರುವ ಬೋನ್‌ಗಳಲ್ಲಿ ಬೀಳುತ್ತಿಲ್ಲ ಎಂದು ಮುಳಬಾಗಿಲಿನ ಪ್ರಾದೇಶಿಕ ಆರಣ್ಯ ವಲಯಾಧಿಕಾರಿ ರವಿಕೀರ್ತಿ ಹೇಳಿದ್ದಾರೆ.