ಹುಣಸೂರು [ನ.09]: ಅಂಗನವಾಡಿಯಲ್ಲಿ ಮಲಗಿದ್ದ ಮೂರುವರೇ ವರ್ಷದ ಮಗುವನ್ನು ಕೊಠಡಿಯಲ್ಲಿಯೇ ಬಿಟ್ಟು ಬಾಗಿಲು ಹಾಕಿಕೊಂಡು ಹೋದ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 

ಅಂಗನವಾಡಿ ಕಾರ್ಯಕರ್ತೆ ಕಮಲಾಬಾಯಿ ಮತ್ತು ಸಹಾಯಕಿ ಮಮತಾ ಎಂಬವರು ಬೇಜವಾಬ್ದಾರಿತನ ತೋರಿದ ಆರೋಪಕ್ಕೆ ಗುರಿ ಯಾದವರು.

ಗ್ರಾಮದ ಲಕ್ಷ್ಮೀ ಮತ್ತು ಗಿರೀಶ್ ದಂಪತಿಯ ಪುತ್ರಿ ಅಮೂಲ್ಯ ಸುಮಾರು 4 ಗಂಟೆ  ಕಾಲ ಅಂಗನವಾಡಿ ಕೇಂದ್ರದಲ್ಲೆ ಕಳೆದಿದ್ದಾಳೆ. ಮಗು ಮಲಗಿದ್ದನ್ನು ಗಮನಿಸಿಯೂ ಎಂದಿನಂತೆ ಮಧ್ಯಾಹ್ನ 3ಕ್ಕೆ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಗುವಿನ ಪೋಷಕರು ಅಂಗನವಾಡಿ ಬಾಗಿಲು ಹಾಕಿದ್ದನ್ನು ನೋಡಿ ಮಗುವಿಗಾಗಿ ಊರೆಲ್ಲ ಹುಡುಕಿದ್ದಾರೆ. ಆದರೆ ಮಗು ಪತ್ತೆಯಾಗಲಿಲ್ಲ. ಕೊಠಡಿಯಲ್ಲಿ ಮಗು ಅಳುತ್ತಿರುವುದನ್ನು ಕೇಳಿಸಿಕೊಂಡ ಗ್ರಾಮಸ್ಥರೊಬ್ಬರು ಬಾಗಿಲು ಒಡೆದು ಮಗುವನ್ನು ಕರೆದೊಯ್ದಿದ್ದಾರೆ.

ಸಿಡಿಪಿಐ ನವೀನ್ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.