ಉದ್ಯೋಗ ಹುಡುಕುತ್ತಿರುವವರಿಗೆ ಖುಷಿ ಸುದ್ದಿಯೊಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಹೊಸ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಯಾವುದೇ ಪರೀಕ್ಷೆ ಇಲ್ದೆ ಉದ್ಯೋಗ ಪಡೆಯುವ ಅವಕಾಶವನ್ನು ಆರ್ ಬಿಐ ನೀಡ್ತಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಕೆಲ್ಸ ಮಾಡಲು ಯುವಕರಿಗೆ ಒಂದು ಸುವರ್ಣಾವಕಾಶ ಸಿಗ್ತಿದೆ. ನೀವು ಯಾವುದೇ ಪರೀಕ್ಷೆ ಇಲ್ದೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಆರ್ ಬಿಐ, ಈಗಾಗಲೇ ನೇಮಕಾತಿ ಜಾಹೀರಾತು ನೀಡಿದ್ದು, ಅರ್ಜಿ ಸಲ್ಲಿಕೆ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್ ಬಿಐನಲ್ಲಿ ಕೆಲ್ಸ

ಆರ್ ಬಿಐ, AI, ಡೇಟಾ ವಿಶ್ಲೇಷಣೆ ಮತ್ತು ಫೈನಾನ್ಶಿಯಲ್ ಮಾರ್ಕೆಟ್ ಸೇರಿದಂತೆ 12 ವಿಭಿನ್ನ ಕ್ಷೇತ್ರಗಳಲ್ಲಿ ಯುವ ವೃತ್ತಿಪರರಿಗೆ ನೇಮಕಾತಿ ಘೋಷಿಸಿದೆ. ಈ ಎಲ್ಲಾ ಹುದ್ದೆಗಳು ಕೇಂದ್ರ ಕಚೇರಿ ಇಲಾಖೆಗೆ ಆಧಾರಿತವಾಗಿರುತ್ತವೆ. ಆರ್ ಬಿಐ ಪೋಸ್ಟ್ಕೋಡ್ನೀಡಿದ್ದು, ನೀವು ಅರ್ಜಿ ಸಲ್ಲಿಸುವ ಪ್ರತಿಯೊಂದು ಹುದ್ದೆಗೆ ನೀವು ಪೋಸ್ಟ್ಕೋಡ್ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

DMart Jobs: ಡಿಮಾರ್ಟ್‌ನಲ್ಲಿ ಹೆಣ್ಣುಮಕ್ಕಳಿಗೇ ಜಾಸ್ತಿ ಜಾಬ್ ಸಿಗೋದು ಯಾಕೆ? ಇಲ್ಲಿದೆ ಕಾರಣ

ಯುವ ವೃತ್ತಿಪರರಿಗೆ ಅವಕಾಶ

ಈ ನೇಮಕಾತಿಯಲ್ಲಿ ಶೈಕ್ಷಣಿಕ ಅರ್ಹತೆಗಳು ಹುದ್ದೆಗೆ ಅನುಗುಣವಾಗಿ ಬದಲಾಗುತ್ತವೆ. ಅಭ್ಯರ್ಥಿಗಳು ಈ ಮಾನದಂಡಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಬೇಕು. ಸೈಬರ್ ಸೆಕ್ಯುರಿಟಿ ಹುದ್ದೆ, ಪಾಲಿಸಿ ಅನಾಲಿಟಿಕ್ಸ್ ,ಹೈಪರ್ಚೇಂಜ್ ಮತ್ತು ಸಸ್ಟೈನಬಲ್ ಫೈನಾನ್ಸ್, ಪಾಲಿಸಿ ಆಂಡ್ ರಿಸರ್ಚ್, ಎಐ, ಡೇಟಾ ಅನಾಲಿಸಿಸ್ ಹುದ್ದೆಗೆ ಬೇರೆ ಬೇರೆ ವಿದ್ಯಾರ್ಹತೆ ಅಗತ್ಯವಿದೆ. ಯಂಗ್ ಪ್ರೊಫೆಷನಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 30 ವರ್ಷ. ವಯಸ್ಸಿನ ಮಿತಿಯನ್ನು ಜುಲೈ 6, 2026 ರಂತೆ ಲೆಕ್ಕಹಾಕಲಾಗುತ್ತದೆ.

ಆರ್ಬಿಐ ಯುವ ವೃತ್ತಿಪರ ಮಾಸಿಕ ವೇತನ

ಆರ್ಬಿಐ ಯುವ ವೃತ್ತಿಪರರನ್ನು 3 ವರ್ಷಗಳ ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಪೂರ್ಣ ಸಮಯದ ಕೆಲಸದೊಂದಿಗೆ ನೇಮಿಸಿಕೊಳ್ಳುತ್ತಿದೆ. ಆದಾಗ್ಯೂ, ಇದನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಅವಧಿಯಲ್ಲಿ, ಅಭ್ಯರ್ಥಿಗಳು 1,50,000 ಸ್ಥಿರ ಸ್ಟೈಫಂಡ್ ಪಡೆಯುತ್ತಾರೆ. ಬೇರೆ ಯಾವುದೇ ಸಂಬಳ ಅಥವಾ ಭತ್ಯೆಗಳನ್ನು ಒದಗಿಸಲಾಗುವುದಿಲ್ಲ. ಕೆಲಸದ ಸ್ಥಳ ಮುಂಬೈ ಆಗಿರುತ್ತದೆ. ಈ ಹುದ್ದೆಗೆ ಆಯ್ಕೆಯಾದರೆ, ಅಭ್ಯರ್ಥಿಗಳು ಆಗಸ್ಟ್-ಅಕ್ಟೋಬರ್ 2026 ರಲ್ಲಿ ಕೆಲಸಕ್ಕೆ ಸೇರುವ ಸಾಧ್ಯತೆಯಿದೆ.

Snapchat ಸಿಇಒಗೆ ಕೇವಲ 3 ಸಾಲಿನ ಇಮೇಲ್ ಕಳುಹಿಸಿದ ಭಾರತೀಯ

RBI ಯುವ ವೃತ್ತಿಪರರ ಅಧಿಸೂಚನೆ 2026 PDF

RBI ಯುವ ವೃತ್ತಿಪರರ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆರ್ ಬಿಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ opportunities.rbi.org.in ಗೆ ನೇರವಾಗಿ ಭೇಟಿ ನೀಡಿ. ಅಲ್ಲಿ ನೇಮಕಾತಿ ಅಧಿಸೂಚನೆ ಓದಿ, ಅರ್ಜಿಯನ್ನು ಮುದ್ರಿಸಿ, ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು. ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ, ಅರ್ಜಿ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್ ರೂಪದಲ್ಲಿ yphrmdco@rbi.org.in ಗೆ ಕಳುಹಿಸಿ. ಈ ಆರ್ಬಿಐ ಯಂಗ್ ಪ್ರೊಫೆಷನಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 6, 2026.

ಆಯ್ಕೆ ವಿಧಾನ

ಆರ್ಬಿಐ ಪ್ರಾಥಮಿಕ ಸ್ಕ್ರೀನಿಂಗ್/ಶಾರ್ಟ್ಲಿಸ್ಟಿಂಗ್, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿ, ಬ್ಯಾಂಕ್ ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಬಹುದು. ಸಂದರ್ಶನಕ್ಕಾಗಿ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ.