ರೈತ ಪ್ರತಿಭಟನೆ ಆಂತರಿಕ ವಿಚಾರ: ಚರ್ಚೆಗೂ ಮುನ್ನ ಬ್ರಿಟನ್ ಸರ್ಕಾರ ಸೈಲೆಂಟ್!
ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ| ಪ್ರತಿಭಟನೆ ಕುರಿತು ಬ್ರಿಟನ್ ಸಂಸತ್‌ನಲ್ಲಿ ಸೋಮವಾರ ಚರ್ಚೆ| ಚರ್ಚೆಗೂ ಮುನ್ನ ಬ್ರಿಟನ್ ಸರ್ಕಾರ ಸೈಲೆಂಟ್!
ನವದೆಹಲಿ(ಮಾ.06): ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಬ್ರಿಟನ್ ಸಂಸತ್‌ನಲ್ಲಿ ಸೋಮವಾರ ಚರ್ಚೆ ನಿಗದಿಯಾಗಿರುವ ಬೆನ್ನಲ್ಲೇ, ಈ ವಿಷಯ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗದಂತೆ ನೋಡಿಕೊಳ್ಳಲು ಬ್ರಿಟನ್ ಸರ್ಕಾರ ಮುಂದಾಗಿದೆ.
ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಬ್ರಿಟನ ಸರ್ಕಾರ, ‘ಭಾರತದಲ್ಲಿನ ರೈತರ ಪ್ರತಿಭಟನೆ ಆ ದೇಶದ ಆಂತರಿಕ ವಿಚಾರ. ಅದನ್ನು ಅವರೇ ಸರಪಡಿಸಿಕೊಳ್ಳುತ್ತಾರೆ’ ಎಂದು ಹೇಳಿದೆ. ಆದಾಗ್ಯೂ, ಬ್ರಿಟನ್ನಲ್ಲೂ ಭಾರತೀಯ ಸಂಜಾತರು ಇರುವ ಕಾರಣ ಭಾರತದ ರೈತರ ಪ್ರತಿಭಟನೆಯು ಬ್ರಿಟನ್ನಲ್ಲೂ ಪ್ರತಿಧ್ವನಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿಭಟನಾಕಾರರ ಸುರಕ್ಷತೆ ಕುರಿತಾಗಿ ಚರ್ಚೆ ನಡೆಸಬೇಕೆಂಬ ಇ-ಅರ್ಜಿಗಳು 1 ಲಕ್ಷ ಪೂರೈಸಿದ್ದು, ಈ ಬಗ್ಗೆ ಸೋಮವಾರ ಚರ್ಚೆ ನಡೆಯಲಿದೆ