ಇದೇನು ಕೈಬರಹವೋ, ಕಂಪ್ಯೂಟರ್​ ಪ್ರಿಂಟೊ? ವಿಶ್ವದ ಸುಂದರ ಹ್ಯಾಂಡ್​ರೈಟರ್​ ಪ್ರಶಸ್ತಿಗೆ ಭಾಜನ ಈ ಬಾಲಕಿ!

ಕಂಪ್ಯೂಟರ್​ ಪ್ರಿಂಟ್​ನಂತೆ ಕಂಗೊಳಿಸುತ್ತೆ ಈ ಬಾಲಕಿಯ ಕೈಬರಹ. ವಿಶ್ವ ಖ್ಯಾತಿ ಪಡೆದ ಬಾಲಕಿಯ ಸ್ಟೋರಿ ಇಲ್ಲಿದೆ. 
 

This girl from Nepal has world's most beautiful handwriting got many awards for handwriting suc

ಈಗಿನ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಕೈಬರಹ ಎನ್ನುವುದೇ ದೊಡ್ಡ ತಲೆನೋವಾಗಿ ಬಿಟ್ಟಿದೆ. ಮೊಬೈಲ್​ ಯುಗದಲ್ಲಿ ಪೆನ್ನು ಹಿಡಿದು ಬರೆಯೋದನ್ನೇ ಎಷ್ಟೋ ಮಂದಿ ಮರೆತುಬಿಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸದ್ಯಕ್ಕಂತೂ ಪೆನ್ನೇ ಅನಿವಾರ್ಯ ಆಗಿರುವುದರಿಂದ ಕಷ್ಟಪಟ್ಟು ಕೈಯಲ್ಲಿ ಬರೆಯುವ ಪರಿಸ್ಥಿತಿ ಇದೆ. ಇದು ಇನ್ಯಾವಾಗ ಮಾಯವಾಗುತ್ತೋ ಗೊತ್ತಿಲ್ಲ. ಹೋಮ್​ವರ್ಕ್​ ಕೂಡ ಪಿಡಿಎಫ್​ ರೂಪದಲ್ಲಿ ವಾಟ್ಸ್​ಆ್ಯಪ್​ನಲ್ಲಿಯೇ ಕಳುಹಿಸುವ ಹಲವು ಶಾಲೆಗಳು ಇರುವುದರಿಂದ ಹೋಮ್​ವರ್ಕ್​ ಕೂಡ ಕೈಬರಹ ಬರೆಯದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಇದರ ಮಧ್ಯೆ ಸುಂದರ ಹ್ಯಾಂಡ್​ರೈಟಿಂಗ್​ ಎನ್ನುವ ಕಲ್ಪನೆಯೇ ದೂರವಾಗಿದೆ. ಕೈಯಲ್ಲಿ ಬರೆಯಲು ಬಂದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಇಲ್ಲೊಬ್ಬ 17 ವರ್ಷದ ಬಾಲಕಿ ಈಗ ಕೈಬರಹದಿಂದ ಸಕತ್​ ಫೇಮಸ್​ ಆಗಿದ್ದಾರೆ. ಖ್ಯಾತಿ ಗಳಿಸಿರುವುದು ಮಾತ್ರವಲ್ಲದೇ, ಪ್ರಪಂಚದ  ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ. ಇವರ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರದಿಂದಾಗಿ ಫೇಮಸ್​ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್​ರೈಟರ್​ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ. 

ಶಾಲೆಯಲ್ಲಿ ಬಾಲಕಿಯರ ನಡುವೆ ಇದೇನಿದು? ಶಾಕಿಂಗ್​ ವಿಡಿಯೋ ನೋಡಿ ಕೆಂಡ ಕಾರುತ್ತಿರೋ ನೆಟ್ಟಿಗರು....
 
 ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್​ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು. ಇದೀಗ ಅವರನ್ನು ಮೀರಿಸುವವರು ಯಾರೂ ಇಲ್ಲವಾಗಿದೆ.  

 ಯುನೈಟೆಡ್​ ಅರಬ್ ಎಮಿರೆಟ್ಸ್​ನ 51ನೇ ಸ್ಪಿರಿಟ್ ಆಫ್​ ಯುನಿಯನ್​ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್​ ಆಗುತ್ತಿವೆ. ಪ್ರಕೃತಿ ಅವರಿಗೆ  ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ. 

ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..

Latest Videos
Follow Us:
Download App:
  • android
  • ios