ಶಿವರಾಜ್‌ಕುಮಾರ್‌ ನಟನೆಯ, ಎ ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಸಿನಿಮಾ ಬಿಡುಗಡೆ ಕುರಿತು ಜಯಣ್ಣ ಸಂದರ್ಶನ. 

ಸೆ.10ಕ್ಕೆ ‘ಭಜರಂಗಿ 2’ ಬಿಡುಗಡೆ ಪಕ್ಕಾನಾ?

-ನಾನು ಒಂದು ಸಲ ಡೇಟ್‌ ಅನೌನ್ಸ್‌ ಮಾಡಿದರೆ ಮತ್ತೆ ಬದಲಾವಣೆ ಮಾಡಿಲ್ಲ. ಈಗಲೂ ಮಾಡಲ್ಲ. ಸೆ. 10ರಂದು ಸಿನಿಮಾ ಚಿತ್ರಮಂದಿರಗಳಿಗೆ ಬರುತ್ತಿದೆ. ಗೌರಿ ಗಣೇಶನ ಹಬ್ಬದ ಪ್ರಯುಕ್ತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ.

ಅಷ್ಟೊತ್ತಿಗೆ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಸಿಗುತ್ತದೆಯೇ?

- ಏನೇ ಆದರೂ ನಾನು ಸಿನಿಮಾ ಬಿಡುಗಡೆ ಮಾಡುತ್ತೇನೆ. ಶಿವಣ್ಣ ಸಿನಿಮಾ ನೋಡಕ್ಕೆ ಜನ ಬರುತ್ತಾರೆ ಎನ್ನುವ ಭರವಸೆ ಇದೆ.

'ಭಜರಂಗಿ-2' ಚಿತ್ರದ ಹೊಸ ಸಾಂಗ್ ರಿಲೀಸ್!

ಎಷ್ಟುಕಡೆ ಸಿನಿಮಾ ಬಿಡುಗಡೆ ಆಗುತ್ತಿದೆ?

-ರಾಜ್ಯಾದ್ಯಾಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಯಾವೆಲ್ಲ ಚಿತ್ರಮಂದಿರಗಳಲ್ಲಿ ಸಾಧ್ಯವೋ ಅಷ್ಟೂಕಡೆ ಸಿನಿಮಾ ಪ್ರದರ್ಶನ ಆಗಲಿದೆ.

ಬಿಡುಗಡೆ ತಯಾರಿ ಹೇಗಿವೆ?

-ಈಗಾಗಲೇ ಫಸ್ಟ್‌ ಲುಕ್‌, ಟೀಸರ್‌ ಬಂದಿದೆ. ಸೆ.1ರಂದು ಸಂಜೆ 6 ಗಂಟೆಗೆ ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ಬಿಡುಗಡೆ ಆಗಲಿದೆ. ಈ ವಾರದಲ್ಲಿ ಸೆನ್ಸಾರ್‌ ಕೂಡ ಆಗಲಿದೆ.

"

ನಿಮ್ಮ ಪ್ರಕಾರ ‘ಭಜರಂಗಿ 2’ ಚಿತ್ರದ ಗೆಲುವಿಗೆ ಕಾರಣ ಆಗಬಹುದಾದ ಅಂಶಗಳೇನು?

-ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್‌, ಜಾಕಿ ಭಾವನಾ, ಶ್ರುತಿ ಸೇರಿದಂತೆ ವಿಶೇಷವಾದ ತಾರಾಗಣ ಇಲ್ಲಿದೆ. ಅದ್ದೂರಿ ಮೇಕಿಂಗ್‌, ಶಿವಣ್ಣ ಲುಕ್‌ಗಳು ಭಿನ್ನವಾಗಿವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಕತೆ ಇಲ್ಲಿದೆ.

ಕೊರೋನಾ ಎರಡನೇ ಅಲೆ ನಂತರ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಚಿತ್ರ ನಿಮ್ಮದೇ ಅಲ್ಲವೇ?

-ಸೆ.10ರ ಒಳಗೆ ಬೇರೆ ಚಿತ್ರ ತೆರೆಗೆ ಬರುತ್ತದೆಯೇ ಎಂಬುದು ತಿಳಿದಿಲ್ಲ. ಆದರೆ, ಸೆ.10ರಂದು ನಮ್ಮ ‘ಭಜರಂಗಿ 2’ ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿದೆ. ಜನ ನೋಡಿ ಗೆಲ್ಲಿಸಿದರೆ ಅದೇ ದೊಡ್ಡ ಸಿನಿಮಾ ಆಗಲಿದೆ.