ಕನ್ನಡದಲ್ಲಿಯೂ ಬರುತ್ತಿದೆ ಜೆಕೆ ನಟನೆಯ `ಓ ಪುಷ್ಪಾ ಐ ಹೇಟ್ ಟಿಯರ್ಸ್'!

ಓ ಪುಷ್ಪಾ ಐ ಹೇಟ್ ಲವ್ ಸ್ಟೋರೀಸ್ ಎನ್ನುವುದು ಜೆ.ಕೆ ನಟಿಸಿರುವ ಹಿಂದಿ ಚಿತ್ರ. ಫೆಬ್ರವರಿ ಕೊನೆಗೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡಕ್ಕೂ ಡಬ್ ಆಗಲಿದೆ.

karthik Jayaram's hindi film dubbed in kannada

- ಶಶಿಕರ ಪಾತೂರು

ಪರಭಾಷಾ ಸಿನಿಮಾಗಳ ನಡುವೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ ಎನ್ನುವ ಕೂಗು ನಿರಂತರವಾಗಿರುವಂಥದ್ದು. ಆದರೆ ಅವುಗಳ ನಡುವೆ ಇತ್ತೀಚೆಗೆ ಕನ್ನಡ ಚಿತ್ರಗಳು ಕೂಡ ಪ್ಯಾನ್ ಇಂಡಿಯಾ ಬಿಡುಗಡೆ ಕಾಣುವ ಮೂಲಕ ಪರಭಾಷೆಗಳಲ್ಲಿಯೂ ಗುರುತಿಸಿಕೊಂಡಿದೆ. ಈಗ ಇವೆರಡಕ್ಕಿಂತಲೂ ವಿಭಿನ್ನವಾದ ಅವಕಾಶವೊಂದು ಕನ್ನಡಿಗರ ಪಾಲಿಗೆ ಬಂದಿದೆ. ಕನ್ನಡದ ನಟನೋರ್ವ ಬಾಲಿವುಡ್ ಚಿತ್ರದ ನಾಯಕನಾಗಿ ಮತ್ತೆ ಕನ್ನಡಿಗರ ಎದುರಿಗೆ  ಬರುತ್ತಿದ್ದಾರೆ. ಅವರೇ  ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್. ಈಗಾಗಲೇ ಕಿಚ್ಚ ಸುದೀಪ್ ಅವರು ಖಳನಾಗಿ ನಟಿಸಿದ ಹಿಂದಿ ಚಿತ್ರ `ದಬಂಗ್ 3' ಕನ್ನಡದಲ್ಲಿ ತೆರೆಕಂಡಿದೆ. ಆದರೆ ಜೆ.ಕೆ ನಾಯಕನಾಗಿದ್ದಾರೆ. ಮಾತ್ರವಲ್ಲ, ಅವರೇ ಡಬ್ ಮಾಡಿದ್ದಾರೆ. ಹಾಗಾಗಿ ಕನ್ನಡದ ಪ್ರೇಕ್ಷಕರ ಉತ್ಸಾಹ ಒಂದು ಪಟ್ಟು ಹೆಚ್ಚೇ ಇದೆ. ಇದರ ನಡುವೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಪಾರ್ಟ್ ಸೆಕೆಂಡ್ ಧಾರಾವಾಹಿಯಲ್ಲಿ ನಾಗನಾಗಿಯೂ ಪಾತ್ರ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸ್ವತಃ ಜೆ.ಕೆ ಸುವರ್ಣ ಆನ್ಲೈನ್ ನ್ಯೂಸ್ ಜತೆಗೆ ನಡೆಸಿರುವ ವಿಶೇಷ ಮಾತುಕತೆ ಇದು.

ಸಖತ್ ಮಜಾ ಕೊಡೋ ಟಿಕ್ ಟಾಕ್ ವೀರರಿರವರು

ಬಾಲಿವುಡ್ ಸಿನಿಮಾ ಮತ್ತು ಕನ್ನಡ ಸೀರಿಯಲ್ ಎರಡೂ ಏಕಕಾಲದಲ್ಲಿ ಹೇಗೆ?

ಸಿನಿಮಾ ಶೂಟಿಂಗ್ ಪೂರ್ತಿಯಾಗಿ ಇದೇ ಫೆಬ್ರುವರಿ ತಿಂಗಳ ಕೊನೆಗೆ ತೆರೆಗೆ ಬರುತ್ತಿದೆ. ಇನ್ನು ನಾಗಿಣಿ ಧಾರಾವಾಹಿಯಲ್ಲಿ ಈಗಾಗಲೇ ನನ್ನ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಅದರಲ್ಲಿ ನನ್ನದು ಜಸ್ಟ್ ಒಂದು ಅತಿಥಿಯ ಪಾತ್ರ. ನಿರ್ದೇಶಕ ರಾಮ್ ಅವರ ಸ್ನೇಹಕ್ಕೆ ಮಣಿದು ನಾಗನಾಗಿ ನಟಿಸಿದ್ದೇನೆ. ನಿಜ ಹೇಳಬೇಕಂದರೆ ನಾನು ಕನ್ನಡಕ್ಕಿಂತ ಹಿಂದಿ ಅಥವಾ ಬಾಲಿವುಡ್ ಬೆಟರ್ ಅಂತ ಹೋಗಿರುವುದಲ್ಲ. ಅವಕಾಶ ಸಿಗದ ಕಾರಣ ಹೋಗಿದ್ದೇನೆ. ಅವಕಾಶ ಸಿಗದಂತೆ ಮಾಡುವವರು ಕೂಡ ಇಲ್ಲಿದ್ದಾರೆ ಎಂದರೆ ನೀವು ನಂಬಲೇ ಬೇಕು. ಆದರೆ ಈ ಬಾರಿ ಯಾರಿಂದಲೂ ಅಂಥ ಪ್ರಯತ್ನವಾಗಿಲ್ಲ. ಬಹುಶಃ ನಾನು ಹಾವಾಗಿ ನಟಿಸಿರುವ ಕಾರಣ ಕಚ್ಚಿ ಬಿಡುವ ಭಯ ಇರಬಹುದು. ನಿಜಕ್ಕೂ ಅಂಥ ಬೆಳವಣಿಗೆ ಕಣ್ಣೆದುರು ಕಂಡರೆ ಕಚ್ಚಿಯೇ ಬಿಡುತ್ತೇನೆ..! (ನಗು) 

karthik Jayaram's hindi film dubbed in kannada

ನಿಮ್ಮನ್ನು ಯಾರು ಯಾಕಾಗಿ ವಿರೋಧಿಸುತ್ತಿದ್ದಾರೆ?

ನನಗೆ ಕನ್ನಡದಲ್ಲೇ ಹಿತಶತ್ರುಗಳಿದ್ದಾರೆ. ಬಹುಶಃ ಯಾರ ಪರವಾಗಿಯೂ ಕಾಣಿಸಿಕೊಳ್ಳದೆ ನಾನಾಯಿತು, ನನ್ನ ಕೆಲಸವಾಯಿತು ಎನ್ನುವಂತೆ ಇರುವುದೇ ಇದಕ್ಕೆ ಕಾರಣ ಇರಬಹುದು. ನನಗೆ ಸಿಕ್ಕ ಅವಕಾಶಗಳ ಮೇಲೆ ಕಲ್ಲು ಹಾಕುತ್ತಿದ್ದಾರೆ. ಹೊಸದಾಗಿ ಅವಕಾಶ ಕೊಟ್ಟವರು ಕೂಡ ತಮ್ಮ ಪ್ರಾಜೆಕ್ಟ್ ನಿಂದ ಹೊರಗೆ ಕಳಿಸಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಮಾತನಾಡಿರುವ ಸಂಭಾವನೆಗಿಂತ ಕಡಿಮೆ ನೀಡುವುದಾಗಿ ಹೇಳುತ್ತಾರೆ. ಸಿನಿಮಾಗಳಲ್ಲಿ ಕೂಡ ಇಂಥ ಸಾಕಷ್ಟು ಅನುಭವಗಳಾಗಿವೆ. ಹಾಗಾಗಿ ಸದ್ಯಕ್ಕೆ  ಯಾವುದೇ ಹೊಸ ಪ್ರಾಜೆಕ್ಟ್ ಮುಗಿಯುವ ತನಕ ಆ ಬಗ್ಗೆ ಹೊರಗಡೆ ಮಾತನಾಡುವುದನ್ನೇ ಬಿಟ್ಟಿದ್ದೇನೆ.

ಹೆಂಡ್ತಿಗಾಗಿ ನಿರ್ಮಾಪಕರ ಮೇಲೆ ಕೈ ಮಾಡಿದ್ದ ಜಗ್ಗೇಶ್

`ಓ ಪುಷ್ಪಾ ಐ ಹೇಟ್ ಟಿಯರ್ಸ್' ಚಿತ್ರದ ವಿಶೇಷತೆ ಏನು?

ನಿಮಗೆ  ತಿಳಿದಿರುವ ಹಾಗೆ ಇದು `ಅಮರ್ ಪ್ರೇಮ್' ಚಿತ್ರದಲ್ಲಿನ ರಾಜೇಶ್ ಖನ್ನ ಅವರ ಜನಪ್ರಿಯ ಸಂಭಾಷಣೆ. ಅದನ್ನೇ ಶೀರ್ಷಿಕೆಯಾಗಿರಿಸಿರುವ ಚಿತ್ರದಲ್ಲಿ ನಾನು ನಾಯಕನಾಗಿದ್ದೇನೆ. ದಿನಕರ್ ಕಪೂರ್ ನಿರ್ದೇಶನದ ಈ ಚಿತ್ರದಲ್ಲಿ ಕಪಿಲ್ ಶರ್ಮ ಶೋ ಮೂಲಕ ಜನಪ್ರಿಯನಾಗಿರುವ ಕೃಷ್ಣ ಅಭಿಷೇಕ್ ಅವರು ಮತ್ತೊಂದು ಪ್ರಧಾನ ಪಾತ್ರ ಮಾಡಿದ್ದಾರೆ. ಅವರದು ನೆಗೆಟಿವ್ ಕಾಮಿಡಿ ರೋಲ್. ಅಮೂಲ್ಯ ದಾಸ್ ನಿರ್ಮಾಪಕಿ. ಇದು ಒಂದು ಅದ್ಭುತವಾದ ಕತೆಯನ್ನು ಹೊಂದಿದ್ದು ಇದರಲ್ಲಿ ಥ್ರಿಲ್ಲರ್, ಫ್ಯಾಮಿಲಿ ಡ್ರಾಮ, ರೊಮಾನ್ಸ್ ಎಲ್ಲವೂ ಇದೆ. ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಅರ್ಜುಮನ್ ಮುಘಲ್ ಮತ್ತು ಅನುಸ್ಮೃತಿ ಸರ್ಕಾರ್ ಚಿತ್ರದ ಇಬ್ಬರು ನಾಯಕಿಯರು. ಪೂರ್ತಿ ಚಿತ್ರೀಕರಣ ಮುಂಬೈ ಮತ್ತು ಭುವನೇಶ್ವರದಲ್ಲಿ ನಡೆದಿದೆ. ಆದೇಶ್ ಶ್ರೀವಾತ್ಸವ್ ಅವರ ಸಂಭಾಷಣೆ ಚಿತ್ರದ ಹೈಲೈಟ್. ಚಿತ್ರ ಕನ್ನಡದಲ್ಲಿ ಕೂಡ ಡಬ್ ಆಗಿ ಬರಲಿದೆ.

karthik Jayaram's hindi film dubbed in kannada

Latest Videos
Follow Us:
Download App:
  • android
  • ios