ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್‌ ಇತ್ತೀಚಿಗೆ ಕಲಾವಿದರ ಸಂಘದಲ್ಲಿ ನಡೆದ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಂದಿನ ಚಿತ್ರರಂಗದ ಪರಿಸ್ಥಿತಿ ಹಾಗೂ ಅಂದಿನ ಒಗ್ಗಟ್ಟಿನ ಬಗ್ಗೆ ಮಾತನಾಡುವಾಗ, ತಮ್ಮ ಜೀವನದ ಕಹಿ ಘಟನೆಯೊಂದನ್ನು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಚಿತ್ರರಂಗ ಅವರಿಗೆ ನೀಡಿದ್ದ ಬೆಂಬಲ ಹಾಗೂ ಆಗಿದ್ದ ಒಗ್ಗಟ್ಟನ್ನು ನೆನಪಿಸಿಕೊಂಡರು.

ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

ಬ್ಯಾಕ್‌ ಟು ಬ್ಯಾಕ್ ಚಿತ್ರಗಳಲ್ಲಿ ಮಿಂಚುತ್ತಿದ್ದ ಜಗ್ಗೇಶ್‌ ಇಂದಿಗೂ ಡಿಮ್ಯಾಂಡ್‌ನಲ್ಲಿರುವ ನಟ. ಆಗ ಜಗ್ಗೇಶ್‌ ಪತ್ನಿ ವಿರುದ್ಧ ನಿರ್ಮಾಪಕರೊಬ್ಬರು ಕೆಟ್ಟದಾಗಿ ಮಾತನಾಡಿದ್ದರು. ಈ ಬಗ್ಗೆ ಕೋಪಗೊಂಡ ಜಗ್ಗೇಶ್‌ ಆ ನಿರ್ಮಾಪಕರ ಮೇಲೆ ಕೈ ಮಾಡಿದ್ದರು. ಈ ಕಾರಣಕ್ಕೆ ನಿರ್ಮಾಪಕರು ಜಗ್ಗೇಶ್‌ ಅವರನ್ನು ಚಿತ್ರರಂಗದಿಂದಲೇ ನಿಷೇಧಿಸಿದ್ದರು. 

ವೈಕುಂಠ ಏಕಾದಶಿ ದಿನ ಅಮೇರಿಕನ್ ದುಬಾರಿ ನಾಯಿ ಮರಿ ಬರಮಾಡಿಕೊಂಡ ಜಗ್ಗೇಶ್!

ಈ ಸಂದರ್ಭದಲ್ಲಿ ಜಗ್ಗೇಶ್‌ ಅವರ ಪರಿಸ್ಥಿತಿಗೆ ಕೈ ಜೋಡಿಸಿದವರು ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌. ಎಲ್ಲಾ ಟಾಪ್‌ ಕಲಾವಿದರನ್ನೂ ಸೇರಿಸಿಕೊಂಡು ಜಗ್ಗೇಶ್‌ ಬೆನ್ನಿಗೆ ನಿಂತರು. ಅಂಬರೀಶ್‌ ಹಾಗೂ ಇನ್ನಿತರ ಕಲಾವಿದರೂ ಜಗ್ಗೇಶ್‌ ಜೊತೆ ಕೈ ಜೋಡಿಸಿದ್ದರು. ಒಬ್ಬ ಒಳ್ಳೆಯ ಕಲಾವಿದನನ್ನು ಬ್ಯಾನ್‌ ಮಾಡುವುದು ಸರಿಯಲ್ಲ ಎಂದು ಡಾ. ರಾಜ್‌ ಹೇಳಿದ್ದರಂತೆ. ಈ ಸಂದರ್ಭವನ್ನು ನೆನಪಿಸಿಕೊಂಡ ಜಗ್ಗೇಶ್, ಆಗಿದ್ದ ಒಗ್ಗಟ್ಟು ಈಗಿಲ್ಲವೆಂದು ಮರುಗಿದರು. 

ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ