Asianet Suvarna News Asianet Suvarna News

ಹೊಸ 'ಸಿನಿ ಮನೆ' ಸೇರುವ ಬಗ್ಗೆ ಅನು ಸಿರಿಮನೆ ಮಾತು..!

ಅನು ಸಿರಿಮನೆ ಎನ್ನುವ ಪಾತ್ರದ  ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿರುವವರು ಮೇಘಾ ಶೆಟ್ಟಿ. `ಜೊತೆ ಜೊತೆಯಲಿ' ಎನ್ನುವ ಜನಪ್ರಿಯ ಧಾರಾವಾಹಿಯ ಮೂಲಕ ಕಿರುತೆರೆಯ ಸ್ಟಾರ್‌ ನಟಿಯಾಗಿರುವ ಮೇಘಾ ಶೆಟ್ಟಿ ತಮ್ಮ ಬೆಳ್ಳಿತೆರೆ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ.
 

Kannada Serial Actress Anu Sirimane fame Megha Shettys interview
Author
Bengaluru, First Published Sep 29, 2020, 7:25 PM IST

ಮೇಘಾ ಶೆಟ್ಟಿ ಎನ್ನುವ ಹೆಸರು ಕೇಳಿದಾಕ್ಷಣ ಈಕೆ ಬಂಟರ ಹುಡುಗಿ ಇರಬೇಕು ಅನಿಸುತ್ತದೆ. ಅದು ನಿಜವೂ ಹೌದು. ಮೇಘಾ ತಂದೆ ಮಂಗಳೂರಿನವರೇ. ಆದರೆ ತಾಯಿ ಹುಬ್ಬಳ್ಳಿಯವರಾದ ಕಾರಣ ಮೇಘಾ ತುಳು ಭಾಷೆ ಕಲಿತಿಲ್ಲ. ಆದರೆ ರಕ್ಷಿತ್ ಶೆಟ್ಟಿಯ ಬಳಿಕ ಚಂದನವನದಲ್ಲಿ ಮೂಡಿರುವ  ಶೆಟ್ಟರ ಹವಾ ಮುಂದುವರಿಸುವ ಎಲ್ಲ ಲಕ್ಷಣಗಳೂ ಈ ನಟಿಯಲ್ಲಿದೆ! ಅದಕ್ಕೆ ಒಂದೇ ಒಂದು ಸಾಕ್ಷಿ ಜೊತೆ  ಜೊತೆಯಲಿ ಧಾರಾವಾಹಿಯಲ್ಲಿನ ಅನು ಸಿರಿಮನೆ ಪಾತ್ರ. ಈಗ ಮನೆಮನೆ ಮಾತಾಗಿರುವ ಮೇಘಾ ಸೀರಿಯಲ್‌ನಿಂದ ಸಿನಿಮಾ ಮನೆಯನ್ನು ಪ್ರವೇಶಿಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಶೇಷಗಳು ಇಲ್ಲಿವೆ.

ಶಶಿಕರ ಪಾತೂರು

ಒಮ್ಮೆ ಕಿರುತೆರೆ ನಟಿಯಾದರೆ ಮತ್ತೆ ಸಿನಿಮಾ ಅವಕಾಶ ಕಷ್ಟ ಅಂತಾರಲ್ಲ?
ಜನ ಇಷ್ಟಪಡಲು ಇದೇ ಕಾರಣ ಎಂದು ಹೇಳುವುದು ಕಷ್ಟ. ಮಾತ್ರವಲ್ಲ ನಾವು ಅದೇನೇ ಯೋಜನೆ ಹಾಕಿದರು ಕೂಡ ಯಾರು ಹೇಗೆ ಇರಬೇಕು ಎನ್ನುವ ಪ್ಲ್ಯಾನ್ ನಮಗೂ ಮೊದಲೇ ಹಾಕಿರುವಂಥ ದೇವರು ಇದ್ದಾನಲ್ವ? ಆತನ ಯೋಜನೆಯೇ ಅಂತಿಮವಾಗಿ ಕಾರ್ಯಗತವಾಗುತ್ತದೆ. ಅವರರವರ ಲಕ್ ಮ್ಯಾಟರ್, ಹಣೆ ಬರಹದಲ್ಲಿ ಎಲ್ಲಿ ಹೋಗಿ ಎಷ್ಟು ಹೆಸರು ಮಾಡಬೇಕು ಅಂತ ಇದೆಯೋ.. ಅಲ್ಲೆಲ್ಲ ಹೋಗಲೇಬೇಕು. ಅದಕ್ಕೆ ನಾನೇ ಉದಾಹರಣೆ. ನನಗಂತೂ ಖಂಡಿತವಾಗಿ ಧಾರಾವಾಹಿಯಿಂದಲೇ ಈ ಅವಕಾಶ ಬಂದಿದೆ. ಅದಕ್ಕಾಗಿ `ಜೊತೆಜೊತೆಯಲಿ' ಧಾರಾವಾಹಿ ತಂಡಕ್ಕೆ ಕೃತಜ್ಞತೆ ಹೇಳಲೇಬೇಕು.

ಮದುವೆ ಬಗ್ಗೆ ಶೈನ್ ಶೆಟ್ಟಿ ಏನು ಹೇಳ್ತಾರೆ ಗೊತ್ತೇ?

ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿರುವ ಬಗ್ಗೆ ಏನು ಹೇಳುತ್ತೀರಿ?
ತುಂಬ ಖುಷಿಯಾಗಿದೆ. ನಾನು ಇದುವರೆಗೆ ಗಣೇಶ್ ಅವರನ್ನು ನೇರವಾಗಿ ಭೇಟಿಯಾಗಿಲ್ಲ. ಅವರ ಸಾಮಾನ್ಯ ಅಭಿಮಾನಿಗಳಂತೆ ಸಿನಿಮಾದಲ್ಲಿ ನೋಡಿದ ಗುರುತು ಮಾತ್ರ ಇರುವಂಥವಳು. ಅಂಥ ನನಗೆ ಅವರದೇ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಾಗ ಆ ಎಕ್ಸೈಟ್ಮೆಂಟ್  ಹೇಗಿರುತ್ತದೆ ಎನ್ನುವುದನ್ನು ಪ್ರತಿಯೊಬ್ಬ ಸಾಮಾನ್ಯರು ಕೂಡ ಅರ್ಥಮಾಡಿಕೊಳ್ಳಬಹುದು. ಆಗಲೇ ಹೇಳಿದಂತೆ ಈ ಮ್ಯಾಜಿಕ್ ಸಾಧ್ಯಮಾಡಿರುವುದು `ಜೊತೆ ಜೊತೆಯಲಿ' ಎನ್ನುವ ಧಾರಾವಾಹಿ. ನಾನು ಗುರುತಿಸುವಂತಾಗಲು ಧಾರಾವಾಹಿಯ ತಂಡ ಮತ್ತು ಮನೆ ಮಾತಾಗಲು ಅದರ ಪ್ರತಿಯೊಬ್ಬ ಅಭಿಮಾನಿಗಳೇ ಕಾರಣ.

`ಮೂರುಗಂಟು' ಜ್ಯೋತಿ ರೈ ಎಂಬ ತ್ಯಾಗಮೂರ್ತಿ!

ಸಿನಿಮಾ ನಾಯಕಿಯಾಗುವುದೇ ನಿಮ್ಮ ಗುರಿಯಾಗಿತ್ತೇ?
ಧಾರಾವಾಹಿಗೆ ಬರುವಾಗ ನಾನೊಬ್ಬಳು ಎಂಬಿಎ ವಿದ್ಯಾರ್ಥಿನಿ. ನನಗಾಗ ಕೋರ್ಸ್ ಬಗ್ಗೆ ಗಮನ ಇತ್ತೇ ಹೊರತು ಸಿನಿಮಾ, ಸೀರಿಯಲ್ ಎನ್ನುವ ಯಾವುದೇ ಕನಸುಗಳಿರಲಿಲ್ಲ. ಜೀ ಕನ್ನಡದ ಹೆಡ್‌ ರಾಘವೇಂದ್ರ ಹುಣಸೂರು ಅವರು ಇನ್ಸ್ಟಾಗ್ರಾಂನಲ್ಲಿ ನನ್ನ ಫೊಟೋ ನೋಡಿ ಧಾರಾವಾಹಿಗೆ ಆಯ್ಕೆ ಮಾಡಿಕೊಂಡರು! ನಿರ್ದೇಶಕ ಆರೂರು ಜಗದೀಶ್ ಅವರು ಆಡಿಶನ್ ಕೂಡ ಮಾಡದೇ ನನಗೆ ಪಾತ್ರ ನೀಡಿದರು! ಆರಂಭದಲ್ಲಿ ನಟನೆಯ ಬಗ್ಗೆ ಅಷ್ಟು ದೊಡ್ಡ ನಿರೀಕ್ಷೆ ಏನೂ ಇರಲಿಲ್ಲ. ಆದರೆ ಮೊದಲು ಅನಿರುದ್ಧ್ ಅವರಂಥ ಸೀನಿಯರ್ ಜತೆಗೆ ನಟಿಸುತ್ತಿರುವುದಕ್ಕೆ ಖುಷಿಯಾದೆ. ಆಮೇಲೆ ಅಭಿಮಾನಿಗಳಿಂದ ಸಿಕ್ಕ ಪ್ರೋತ್ಸಾಹ ನನಗೆ ಹೊಸ ಉತ್ಸಾಹವನ್ನು ತಂದಿತು.

ಶತ ಚಿತ್ರಗಳ ಸಾಹಸ ಸಂಯೋಜಕ ವಿಕ್ರಮ್ ವಿಶೇಷ

ಸಿನಿಮಾದ ಪಾತ್ರಕ್ಕಾಗಿ ವಿಶೇಷ ತಯಾರಿ ನಡೆಸಿದ್ದೀರ?
ಚಿತ್ರದಲ್ಲಿ ನನ್ನದು ಹೋಮ್ಲಿ ಪಾತ್ರ ಎಂದು ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ತಯಾರಿಯ ಅಗತ್ಯವಿಲ್ಲ ಎಂದುಕೊಂಡಿದ್ದೇನೆ. ಕಾಲೇಜಲ್ಲಿದ್ದಾಗ ಡಾನ್ಸ್, ಫ್ಯಾಷನ್ ಶೋಗಳಲ್ಲಿ ಭಾಗಿಯಾಗಿದ್ದೆ. ಬೇರೆ ಅನುಭವ ಇರದಿದ್ದರೂ ಧಾರಾವಾಹಿಗೆ ನಾಯಕಿಯಾದೆ. ಈಗ ಸಿನಿಮಾ ನಾಯಕಿಯಾಗುವಾಗ ಧಾರಾವಾಹಿಯಲ್ಲಿ ನಟಿಸಿದ ಅನುಭವ ಇದೆ. ಉಳಿದಂತೆ ಪಾತ್ರಕ್ಕೆ ತಯಾರಿ ಬೇಕಿದ್ದರೆ ಅಭ್ಯಾಸ ಮಾಡಿಕೊಳ್ಳಲು ಇನ್ನೂ ಎರಡು ವಾರಗಳ ಕಾಲಾವಕಾಶ ಇದೆ. ಅದೃಷ್ಟದ ಜತೆಗೆ ನನ್ನ ಪರಿಶ್ರಮ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ನನ್ನ ಬೆಸ್ಟ್ ಕೊಡಲು ತಯಾರಿ ಮಾಡುತ್ತೇನೆ.

Kannada Serial Actress Anu Sirimane fame Megha Shettys interview

ಅನು ಸಿರಿಮನೆಗೂ ನೀವು ಮತ್ತು ನಿಮ್ಮ ಮನೆಗೂ ಏನಾದರೂ ಹೋಲಿಕೆ ಇದೆಯೇ? 
ನನ್ನದು ಅನು ಸಿರಿಮನೆಯಷ್ಟೇ ಸಾಫ್ಟ್ ನೇಚರ್. ಆದರೆ ಬಾಯಿಬಿಟ್ಟರೆ ಮಾತು ಹೆಚ್ಚು. ನಮ್ಮನೆಯಲ್ಲಿ ನಾನು ,ಅಕ್ಕ ಮತ್ತು ತಂದೆ ತಾಯಿ ಇದ್ದೇವೆ. ನಾವು ಮೂರು ಜನ ಹೆಣ್ಣು ಮಕ್ಕಳು. ನನ್ನ ಸಿನಿಮಾ ಆಫರ್ ಮೊದಲಾದ ವಿಚಾರಗಳನ್ನೆಲ್ಲ ನನ್ನ ಅಕ್ಕನೇ ಹ್ಯಾಂಡಲ್ ಮಾಡುತ್ತಾಳೆ. ಆಕೆಯ ಹೆಸರು ಕುಸುಮಾವತಿ. ಈಗ ಹಾರ್ದಿಕ ಎಂದು ಬದಲಾಯಿಸಿಕೊಂಡಿದ್ದಾಳೆ. ಲಾಕ್ಡೌನ್ ಟೈಮಲ್ಲಿ ಹೊಸ ಅಡುಗೆ ಕಲಿತಿದ್ದೆ. ಇನ್‌ಡೋರ್ ಗೇಮ್ಸ್‌ ಆಡುತ್ತಿದ್ದೆವು. ಮನೆಯಲ್ಲಿ ಎಲ್ಲರೊಡನೆ ಅಷ್ಟು ಆತ್ಮೀಯವಾಗಿದ್ದ ಕಾರಣ ಕೊರೊನ ಸಮಯದಲ್ಲೇ ಶೂಟಿಂಗ್ ಶುರುವಾದಾಗ ಭಯ ಇತ್ತು. ಆದರೆ ಸೆಟ್‌ನಲ್ಲಿರುವ ಸೇಫ್ ಮೆಥಡ್ ಎಲ್ಲ ಗಮನಿಸಿದ ಬಳಿಕ ಧೈರ್ಯ ಬಂದಿತ್ತು. ಒಟ್ಟಿನಲ್ಲಿ ಅಭಿಮಾನಿಗಳ ಪಾಲಿಗೆ ಅನು ಸಿರಿಮನೆಯಾಗಿಯೇ ಉಳಿದಿದ್ದೇನೆ.  

Follow Us:
Download App:
  • android
  • ios